Tuesday, October 4, 2011

ಇಲ್ಲೊಂದು ಆಕ್ಸಿಡೆಂಟ್ ಪುರಾಣ!!!ಹರಕೆಕುರಿಯ ಕಥಾಯಣ!!!!!!

  ನಮಸ್ಕಾರ  ಒಳ್ಳೆ ನವರಾತ್ರಿ ಸಮಯದಲ್ಲಿ   ಇದ್ಯಾವುದೋ ಆಕ್ಸಿಡೆಂಟ್ ಪುರಾಣ ತಂದಾ!!!!!! ಅಂತಾ ಬಯ್ದುಕೋ  ಬೇಡಿ , ನವರಾತ್ರಿಯನ್ನು ನಮ್ಮ ಬ್ಲಾಗ್ ಮಿತ್ರರು ನಗು ನಗುತ್ತಾ ಆಚರಿಸಲಿ ಅಂತಾ ಒಂದು ಹಳೆಯ ನೈಜ ಘಟನೆಯ ಚಳಕು ಇಲ್ಲಿ ಹಾಕಿದ್ದೇನೆ. ಓದಿ  ನೀವು ನಕ್ಕರೆ  ಅದೇ ನನ್ನ ನವರಾತ್ರಿಯ  ಶುಭಾಶಯಗಳು .ಬನ್ನಿ ಹೋಗೋಣ ಬಸ್ಸಿಗೆ.

 ಯಾರ್ರೀ ತುಮಕೂರು , ತುಮಕೂರು ಬೇಗ ಬನ್ನಿ ರೈಟ್ .......... ಹತ್ತಿ  ಸರ್ ಹತ್ತಿ ಸಾರ್ ......... ಅಂದ ಕಂಡಕ್ಟರ್ ...............................!!! ಬಸ್ಸಿನಲ್ಲಿ ಪ್ರತಿ ನಿತ್ಯ ಪ್ರಯಾಣಿಸುತ್ತಿದ್ದ .....ವಿವಿಧ ಸರ್ಕಾರಿ ಇಲಾಖೆ, ಬ್ಯಾಂಕ್, ಖಾಸಗಿ , ಇತರ ಸಂಸ್ಥೆಯ ಅಧಿಕಾರಿಗಳು, ನೌಕರರು,    ಸ್ಟಾರ್ಟ್ ಆದ ಬಸ್ಸನ್ನು  ದಡ ದಡ ನೆ ಹತ್ತಿ ತಮ್ಮ ತಮ್ಮ ಜಾಗ ಹಿಡಿದರು, ಬಸ್ಸಿನಲ್ಲಿ ಸೀಟ್ ಸಿಕ್ಕವರು ರಾಜ್ಯ ಗೆದ್ದ ಹರುಷದಲ್ಲಿ ಪೇಪರ್ ಓದುತ್ತಾ ಇರುವಂತೆ ನಟಿಸುತ್ತಾ ನಿಂತವರ ಚಲನ ವಲನ ನೋಡುತ್ತಾ ಮನದಲ್ಲಿ ನಗುತ್ತಾ ಮಂಡಿಗೆ ತಿನ್ನುತ್ತಿದ್ದರೆ , ಸೀಟ್ ಸಿಗದೇ ನಿಂತವರು ತಮ್ಮ ಅಸಮಾಧಾನವನ್ನು ಕಂಡಕ್ಟರ್ , ಡ್ರೈವರ್ ಮೇಲೆ ಹಾಕಿ............  ಈ ಬಸ್ಸು ಬಹಳ ಸ್ಲೋ ಕಣ್ರೀ ಇವರ ಕೊಬ್ಬು ಜಾಸ್ತಿಯಾಯ್ತು . ಇವರಿಂದಾಗಿ ನಾವು ಯಾವತ್ತೂ ಸರಿಯಾದ ಟೈಮಿಗೆ ನಮ್ಮ ಕೆಲಸಕ್ಕೆ ಹೊಗೊಕಾಗಲ್ಲಾ ಅಂತಾ ಶಾಪಾ ಹಾಕ್ತಾ ಇರ್ತಿದ್ರೂ........ ಸೀಟ್ ಸಿಗುವುದು ಸಿಗದಿರುವ ಆಟಾ ಎಲ್ಲರಿಗೂ ಒಂದಲ್ಲಾ ಒಂದು ದಿನ  ಅನುಭವ ಆಗುತ್ತಿದ್ದ ಕಾರಣ ಬರುತ್ತಿದ್ದ ಡೈಲಾಗ್ ಗಳು ವೆತ್ಯಾಸವಾಗುತ್ತಿದ್ದವು....

 ಹಾಗೆ ಕಳೆಯುತ್ತಿದ್ದ ಪ್ರಯಾಣದಲ್ಲಿ  ಒಮ್ಮೆ ಹೀಗಾಯ್ತು .........................."ದುರಾಸೆ ಪುರ "ದ ಬಳಿ ಬರುತ್ತಿದ ನಮ್ಮ ಎಕ್ಸ್ಪ್ರೆಸ್ಸ್ ಬಸ್ಸಿಗೆ ಒಂದು   "ಕುರಿ ಮರಿ"   ರಸ್ತೆಯ ಒಂದು ಬದಿಯಿಂದ  ಗಾಭರಿ ಯಿಂದ ಓಡಿಬಂದು ಚಲಿಸುತ್ತಿದ್ದ ಬಸ್ಸಿನ  ಎಡಭಾಗದ   ಹಿಂದಿನ ಚಕ್ರಕ್ಕೆ ಸಿಕ್ಕಿ  ಹಾಕಿಕೊಂಡು ಮೃತ ಪಟ್ಟಿತು , ಅದನ್ನು  ಅಟ್ಟಿಸಿಕೊಂಡು ಬಂದ ಚಿಕ್ಕ ಮಗು  ಆ "ಕುರಿ ಮರಿ " ಸತ್ತಿದ್ದನ್ನು ಕಂಡು ಸಂತೋಷದಿಂದ  ನಕ್ಕಿತ್ತು. ಅಲ್ಲೇ ರಸ್ತೆಯಲ್ಲಿದ್ದ  ಹಲವು ಜನರು ಬಸ್ಸನ್ನು ಅಡ್ಡ ಹಾಕಿ  ನಿಲ್ಲಿಸಿ  ಡ್ರೈವರ್ ಹಾಗು ಕಂಡಕ್ಟರ್ ಗೆ ಗೂಸ ಕೊಟ್ಟರು ಬನ್ನಿ  ಸನ್ನಿವೇಶ ನೀವು ನೋಡುವಿರಂತೆ..................................!!!!!!!!!!ಯಾವಾಗ ಕುರಿಮರಿ  ಬಸ್ಸಿನ ಚಕ್ರಕ್ಕೆ ಸಿಕ್ಕಿ ಕೊಂಡಿತೋ  , ಬಸ್ಸು ನಿಂತ ತಕ್ಷಣ  , ಪಾಪ ಡ್ರೈವರ್ ಹತ್ತಿರ ಹೋದ ಒಬ್ಬ  ಲೇ ಯಾರ್ಲಾ  ಅದು ಡೈವರ್ರು  ಇಳಿಲಾ  ಕೇಳಾಕೆ ಅಂತಾ ಹೇಳಿ ಕತ್ತಿನ ಪಟ್ಟಿ ಹಿಡಿದು ಕೊಂಡು ಬಸ್ಸಿನಿಂದ ಎಳೆದುಕೊಂಡಾ , ಅಲ್ಲಾ ಕಣ್ಲಾ ಅನ್ಯಾಯವಾಗಿ ಕುರಿಯ  ಸಾಯ್ಸಿ ಬುಟ್ಟೆ ಅಂತಾ ಎರಡು ಏಟು ಕೊಟ್ಟಾ.  ಬಸ್ಸಿನಲ್ಲಿ ಪ್ರತಿನಿತ್ಯ ಪ್ರಯಾಣಿಸುತ್ತಿದ್ದ ಹಲವು ಪ್ರಯಾಣಿಕರು  ಕೆಳಗೆ ಇಳಿದು ಡ್ರೈವರ್ ರಕ್ಷಣೆಗೆ ಧಾವಿಸಿದರು. ಆಗ ಶುರುವಾಯ್ತು. ಪಂಚಾಯ್ತಿ.{ಸುಲಭವಾಗಿ ಅರ್ಥವಾಗಲು ಒಂದೊಂದು ಕ್ಯಾರಕ್ಟರ್ ಗೆ ಹೆಸರಿಟ್ಟಿದ್ದೀನಿ}
.................................................... ...........ಸಪ್ಪೆ  ಕ್ಯಾತಾ :- ಅಲ್ಲಾ ಕಣ್ಲಾ ಡೈವರ್ರು  ಅನ್ನಾಯವಾಗಿ    ಕುರಿಮರಿಯ ತೀರ್ಸಿ ಬುಟ್ಟಲ್ಲಾ.........ಈಗೇನ್   ಮಾಡಬೇಕೂ ಯೋಳು ????                                                                     ...........                                           ಡ್ರೈವರ್ :- ಅಲ್ಲಾ ಯಜಮಾನ  ನಾನು ನಿದಾನವಾಗಿ ಬತ್ತಿದ್ದೆ , ಕುರಿಮರಿ ಬಂದು ಹಿಂದಿನ ಚಕ್ರಕ್ಕೆ ಸಿಗಾಕಂದ್ರೆ ನಾನ್ ಏನ್ ಮಾಡ್ಲಿ ಹೇಳು, ಅಂದಾ................................................................!!!!!!!!!. .................................                                         ಬಸ್ರಾಜ :- ನಾನೂ ನೋಡ್ತಾನೆ ಇವ್ನಿ, ಕುರಿಮರಿ ಬತ್ತಿದ್ದಾಗ ನೀನು ಬಿರೇಕ್ [ಬ್ರೇಕ್] ಹಾಕ್ನೆ ಇಲ್ಲಾ . ಬೊ ಸ್ಪೀಡಾಗಿ ಬಂದು  ಹಿಂದಿನ ಚಕ್ರುಕ್ಕೆ  ಕುರಿ ಸಿಗಾಕ್ಸಿ ಬುಟ್ಟೆ , ನೀನು ಬೇಕೂಂತಲೇ ಇಂಗೆ ಮಾಡಿದ್ದೀಯೇ , ಯೋ ಇವ ಇಂಗೆ ಕನೈಯ್ಯೋ  ನಮ್ಮೂರ ಜನ ಕಂಡ್ರೆ ಆಗಾಕಿಲ್ಲಾ , ಅವತ್ತು  ಪಟ್ಟಣ ದಲ್ಲಿ ಕೈತೊರ್ಸಿದ್ರೆ  ನಿಲ್ಲಿಸದೆ ಮೈಮೇಲೆ ಬಸ್ ಹತ್ತಿಸಕ್ಕೆ ಬತ್ತಾನೆ ಅಂತಾ ತನ್ನ ಹಳೆ ಸೇಡಿನ ಆರೋಪ ಮಾಡಿದಾ................!!!!                                  ಅಷ್ಟರಲ್ಲಿ  ಲಬೋ ಲಬೋ ಅಂತಾ ಬಾಯಿ ಬಡಿದುಕೊಳ್ಳುತ್ತಾ  ಒಂದು ಹೆಂಗಸು ಹಾಗು ಒಂದು ಗಂಡಸು ಬಂದರೂ !!!!!!  ಅಯ್ಯಯ್ಯೋ ಹೊಯ್ತಲ್ಲಾಪ್ಪ ನನ್ನ ಕುರಿ ಹೋದ ತಿಂಗಾ [ ತಿಂಗಳು ]  ತಾನೇ ಸಂತೇಲಿ ಕೊಂದ್ಕಂಡ್ ಬಂದಿದ್ದೆ!!!! ಹಾಳಾದ್ ಬಸ್ಸು  ಸಾಯ್ಸ್ಬುದ್ತೆ ಎನ್ಗಪ್ಪಾ ಬದುಕೋದು ನಮ್ಮಂತಾ ಬಡವರೂ ಅಂತಾ  ಡ್ರೈವರ್ಗೆ ಸಹಸ್ರ ನಾಮ ಸಹಿತ , ಅರ್ಚನೆ ಮಾಡಿ  ಡ್ರೈವರ್ ವಂಶ ಪಾವನ ಮಾಡಿದ್ದಳು.[ ಪಾಪ ಇಂತಹ ಹಳ್ಳಿಗಳ ಕಡೆ ದಿನನಿತ್ಯಾ ಸಂಚರಿಸೋ ಸಾರಿಗೆ ಸಂಸ್ಥೆ / ಖಾಸಗಿ ಬಸ್ಸಿನ  ಸಿಬ್ಬಂದಿಗಳ ಪಾಡೇ ಹಾಗೆ ಆಗಾಗ ಇಂತಹ ಅರ್ಚನೆ ಸಹಸ್ರನಾಮಾರ್ಚನೆ  , ಗೂಸ ತಿನ್ನುವಿಕೆ ನಡೆಯುತ್ತಿರುತ್ತವೆ...].ಇದ್ಯಾಕೋ ನಿಲ್ಲೋ ಲಕ್ಷಣ ಕಾನ್ತಿಲ್ಲಾ ಅನ್ನಿಸಿ ಬಸ್ಸಿನಲ್ಲಿದ್ದ   ಕೆಲವರು ಕೆಳಗೆ ಇಳಿದರೂ ................................................................. ಇಳಿದದ್ದರಲ್ಲಿ ಅವರ ಸ್ವಾರ್ಥವೂ  ಇತ್ತು ಅನ್ನಿ , ಬಸ್ ಡ್ರೈವರ್ ನ ಬಿಡಿಸಿ ಬಸ್ಸನ್ನು ಹೊರಡಿಸಿದರೆ ತಾವು ಕೆಲಸಕ್ಕೆ ಸರಿಯಾದ ಸಮಯಕ್ಕೆ ತಲುಪಬಹುದು ಅನ್ನೋ ತರಾತುರಿ ಯಲ್ಲಿ ಇಳಿದು  ರೀ ಡ್ರೈವರ್ ಅದೇನ್ ಪೈಸಲ್  ಮಾಡಿಬಿಟ್ಟು ಬನ್ರೀ .... ಲೇಟಾಗುತ್ತೆ ಅಂತಾ ಅನ್ನುತ್ತಾ , ಯಾರ್ರೀ  ಕುರಿಯವ್ರು ಅಂತಾ ಪಂಚಾಯ್ತಿ ಶುರುಮಾಡಿದರು.  ನಂತರ ಅಲ್ಲೇ ಇದ್ದ ನಮ್ಮ ಮಲ್ಲಿಕಾರ್ಜುನ ಮೇಷ್ಟ್ರು  ಇಳಿದು ಬಂದು ನ್ಯಾಯ ಶುರುಮಾದಿದ್ರೂ...............ಅವರನ್ನ ಪ್ರೀತಿಯಿಂದ ಮಲ್ಲಿಕ್ ಅನ್ನೋಣ.                                              ಮಲ್ಲಿಕ್ :- ರೀ ಅದ್ಯಾರು ಕುರಿಯವ್ರು ಬನ್ರೀ ಮುಂದಕ್ಕೆ .........!!!!!                                                                         ಕುರಿ ಮಾಲೀಕರು ಯಜಮಾನ್ರು :- ನಾಮೇ ಸಾ , ಅಂತಾ ಬಂದ್ರೂ .............................!!!!!!!!!!!!!                                                                                                                   ಮಲ್ಲಿಕ್ :- ನೋಡಯ್ಯಾ ಯಜಮಾನ  ನಾನೂ ನೋಡ್ತಾ ಇದ್ದೆ  ಬಸ್ನವ್ರ್ದು  ತಪ್ಪಿಲ್ಲಾ ... ಕುರಿ ಓಡಿಬಂದು ಚಕ್ರಕ್ಕೆ ಸಿಗಾಕತು , ಅದೇನು  ಇಸ್ಕಂಡು  ಬಸ್ಸನ್ನು ಬುಟ್ಟು ಬುಡು [ಬಿಟ್ಟು ಬಿಡು ] .......                                                                       ಕುರಿಮಾಲಿಕರು :- ಹೋದ ತಿಂಗಾ[ ತಿಂಗಳು ]  ತಾನೇ ಕಿರ್ಗಾವಲ್ ಸಂತೇಲಿ  ಎಡ್ಸಾವ್ರಾ[ ಎರಡು ಸಾವಿರಾ ] ಕೊಟ್ಟು ತಂದಿದ್ದೆ.ದಿನಾ ಐವತ್ತು ಕರ್ಚುಮಾಡಿ ಹುಳ್ಳಿ, ಬಾಳೆಹಣ್ಣು, ಎಲ್ಲಾ ಕೊಟ್ಟು ತಯಾರಿ ಮಾಡಿದ್ದೆ ....... ಒಂದೈದು ಸಾವಿರಾ ಆಗ್ಬೈದು ಅಂದಾ. [ ಸತ್ತಿದ್ದ ಕುರಿ ಹಿಂದಿನ ಚಕ್ರದಲ್ಲಿ ಬಿದ್ದಿತ್ತು  ಅದರ ದೇಹದಲ್ಲಿ ಅವನು  ಹೇಳಿದ ತಯಾರಿಯ  ಯಾವ ಲಕ್ಷಣಗಳೂ ಇರಲಿಲ್ಲ ] .........!!!!!!!!                                                                                                              ಮಲ್ಲಿಕ್ :- ಯೋ ಯಜಮಾನ ಅವೆಲ್ಲಾ ಬ್ಯಾಡ  ಸುಮ್ನೆ ನೂರ್ ರುಪಾಯಿ ಕೊಡ್ತಾರೆ  ಇಸ್ಕಂಡು ಹೋಗು , ಜಾಸ್ತಿ ಎಳದ್ರೆ         ನಿಂಗೆ ತೊಂದ್ರೆ ಅಂದ್ರೂ. .......!!!!                        ಗ್ರಾಮಸ್ತರು :- ಹ ಹ ಹ ಅಂತಾ ನಕ್ಕು , ಅಲ್ಲಾ ಸಾ ಅದೇನ್ ತೀರ್ಮಾನ ನಿಮ್ಮದು ಅಂತಾ ಹೇಳಿದ್ರೂ, ಅಲ್ಲೇ ಇದ್ದ ಒಬ್ಬಾ ಲೇ ಈ ಕುರಿಯ ನಮ್ಮೂರ ದ್ಯಾವ್ರ್ಗೆ ಹರಕೆ ಬುಟ್ಟಿತ್ತು ಅಲ್ವೇ ..............................................!!! ಅಂದಾ,   ಎಲ್ಲರಿಗೂ ಹೊಸ ಅಸ್ತ್ರ ಸಿಕ್ಕಿತ್ತು.  ಹೂ ಕಲಾ   [ಹೌದು ಕಣೋ ]   ಈಗ ಇವರ ಕುರಿ ಸತ್ತೊಯ್ತಲ್ಲಾ ಅದಕ್ಕೆ  ಇವ್ರು  ದ್ಯಾವ್ರ್ಗೆ ಗೆ "ಐದ  ಸಾವ್ರಾ" ದಂಡಾ  ಕಟ್ ಬೇಕಾಯ್ತದೆ   ಅಂದಾ ....!!!! ಮೊದಲೇ ಉರಿಯುತ್ತಿದ್ದ ಬೆಂಕಿಗೆ ಅವ ತುಪ್ಪಾ ಸುರಿದು ವಿಜಯದ ನಗೆ ನಕ್ಕಿದ್ದಾ.  ಬಸ್ಸಿನಲ್ಲಿ ಇದ್ದವರಿಗೆಲ್ಲಾ ಇವತ್ತು ತಮ್ಮ ಕೆಲಸದ ಜಾಗದಲ್ಲಿ ಮೇಲಧಿಕಾರಿಗಳಿಂದ , ಸಾರ್ವಜನಿಕರಿಂದ ,ಕೇಳಬೇಕಾದ ಮಾತುಗಳನ್ನು ನೆನೆದು ಮೈ ಚಳಿ ಶುರು ಆಗಿತ್ತು  ಬಸ್ಸಿನ ಡ್ರೈವರ್, ಕಂಡಕ್ಟರ್ ಇಬ್ಬರಿಗೂ  ಏನೂ ತಿಳಿಯದೆ ಬೆಪ್ಪಾಗಿ ನಿಂತಿದ್ದರು.                                                                                                                                                                 ಇದನೆಲ್ಲಾ  ಗಮನಿಸುತ್ತಿದ್ದ  ಮಲ್ಲಿಕ್   :- ನೋಡ್ರಪ್ಪಾ ಇದು ಸರ್ಕಾರಿ ಬಸ್ಸು ಅನ್ಗೆಲ್ಲಾ ಬಸ್ ನಿಲ್ಸಿ ತೊಂದ್ರೆ ಕೊಡಬಾರದು, ಅದೇನು ಕೊಡ್ತಾರೋ ಇಸ್ಕಂಡು  ಸುಮ್ನೆ ಬಸ್ ಬುಡಿ,  ಕುರಿಯವ್ರಿಗೆ ಇನ್ನೂರು ಹಾಗು ನಿಮ್ಮೂರ್ ದ್ಯಾವ್ರ್ಗೆ ನಾನೇ ತಪ್ಪು ಕಾಣಿಕೆ ನೂರ್ ರುಪಾಯಿ ಹಾಕ್ತೀನಿ ಅಂದ್ರೂ................................!!!!!!                                                                     ಗ್ರಾಮಸ್ಥರು :- ಏ ಅದೇನ್ಗಾದ್ದೂ ಸಾ , ಇದ್ಯಾವ್ ಸೀಮೆ ತೀರ್ಮಾನ , ಅದೆಲ್ಲಾ ಆಗಾಕಿಲ್ಲಾ ಬುಡಿ ಸಾ ಅಂದ್ರೂ , ಕೊನೆಗೆ ಒಗ್ಲಿ  "ಯೋಳು"[ ಏಳು ಸಾವಿರಾ ]   ಸಾವ್ರಾ   ಕೊಡ್ಸಿ ಅಂದ್ರೂ  ...........................!!!!!                                        ಮಲ್ಲಿಕ್ :- ಅಲ್ಲಾ ಕಣ್ರಪ್ಪಾ ನೀವು ತಪ್ಪು ಮಾಡ್ತಾ ಇದೀರಿ ಅಂತಾ , ಅಲ್ಲೇ ಇದ್ದ  ಕೆಲವು ಮುಖಗಳನ್ನು ನೋಡಿ , ಲೇ ಬಸವ, ಸೀನ, ಕೃಷ್ಣ  ಬನ್ರೋ ಇಲ್ಲಿ  ಅಂದ್ರೂ , .......................................!!!!!  ಆ ಬಹುಷಃ ಹೈಸ್ಕೂಲ್ ಮಕ್ಕಳಿರಬೇಕೂ, ಸಾ ನಮಸ್ತೆ ಸಾ ಅಂತಾ ಓಡಿಬಂದು ನಿಂತವು. [ಆಮೇಲೆ ತಿಳೀತು ಆ ಮಕ್ಕಳು ಅವರ ಶಾಲೆಯ ಮಕ್ಕಳು ಎಂದು ] ಲೇ ನಿಜ ಹೇಳ್ರೋ  ಈ ಕುರಿನ  ದ್ಯಾವ್ರಿಗೆ ಬಿಟ್ಟಿದ್ರೆನೋ ಅಂದ್ರೂ  ,                                                                                                                                                   ಮಕ್ಕಳು:- ಇಲ್ಲಾ ಸಾ ಇದು ಈ ರಾಜೇಶನ ಮನೆ ಕುರಿ ಸಾ ಅಂದವು. ಯಾರೋ ರಾಜೇಶ ಅಂದ್ರೆ ಅದೇ ಎಂಟನೆ ಕ್ಲಾಸಲ್ಲಿ ಇಲ್ವಾ ಸಾ ಅವನವು ಅಂದವು.                                                                                                         ಅಷ್ಟರಲ್ಲಿ ಗ್ರಾಮಸ್ತರ ಕಡೆ ತಿರುಗಿದ  ಮಲ್ಲಿಕ್ ಯಾಕ್ರೈಯ್ಯಾ ಸುಳ್ಳು ಹೇಳ್ತೀರಿ  ಅಂದ್ರೆ ಅಲ್ಲೇ ಇದ್ದ ಒಬ್ಬಾ ಇಲ್ಲಾ ಸಾ ಈಗತಾನೆ  ನಮ್ಮ ಹೈದಾ ಯೋಳ್ದಾ, ಈ ಕುರಿ ಅಲ್ವಂತೆ , ಅದೂ ಇಂಗೆಯ ಇತ್ತಲ್ಲಾ  ಅದಕೆ ಹಂಗಾಯ್ತು ಅಂತಾ ತಿಪ್ಪೆ ಸಾರಿಸಿದ. ಅಲ್ಲಿಗೆ ಹರಕೆ ದಂಡಾ ತಪ್ಪಿತು. ಮುಂದೆ ಸರಿ ಬಿಡ್ರಪ್ಪಾ ಎಂಗೂ ನಮ್ಮ ಟೈಮ್ ವೇಷ್ಟ್ ಮಾಡಿದ್ದೀರಿ ಬನ್ನಿ  ಇನ್ನೇನು ಪೋಲಿಸ್ ಸ್ಟೇಶನ್ ನಲ್ಲೆ ಇತ್ಯರ್ಥ ಆಗ್ಲಿ , ಎಂಗೂ ಬಸ್ಸಿನ ಡ್ರೈವರ್ಗೆ ಹೊಡೆದಿದ್ದೀರಿ, ನಾವೇ ಸಾಕ್ಷಿ ಹೇಳ್ತೀವಿ, ಬಸ್ಸಿನ ನಂಬರ್ ಬರ್ಕೊಳ್ಳಿ  , ಅಂತಾ ತಾಳಿ ಪೋಲಿಸ್ ನವರಿಗೆ ನಾನೇ ಫೋನ್ ಮಾಡ್ತೀನಿ ಅಂತಾ ಫೋನ್ ತೆಗೆದು ಹಲೋ ಅಂದ್ರೂ ಅಷ್ಟೇ .........................................!!!!!!                                                                                                               ಗ್ರಾಮಸ್ಥರು :-  ಏ ಬುಡಿ ಸಾ ಇದಕೆಲ್ಲಾ ಯಾಕೆ ಪೋಲಿಸು , ಕಟ್ಲೆ ಎಲ್ಲಾ  ನಾಮೇ ಸರಿ ಮಾಡ್ಕಂದ್ರಾಯ್ತು    ಅಂತಾ ಹೋಗ್ಲಿ  ಐದು  ಸಾವ್ರಾ ಕೊಡ್ಸಿ ಸಾ ಅಂದ್ರೂ .  

Friday, September 30, 2011

ರೀತಿ!! ಈ ರೀತಿ !!! ಇನ್ನೊಂದು ರೀತಿ !!!!

ಮೊದಲು ಗೆಳೆಯ  ಪ್ರಕಾಶ್ ಅಣ್ಣ ಬರೆದ  ಬರೆದ "ರೀತಿ" ....   ಓದಿ    ಇಟ್ಟಿಗೆ ಸಿಮೆಂಟು: ರೀತಿ..., ನಂತರ ಮತ್ತೊಬ್ಬ ಗೆಳೆಯ  ದಿನಕರ ಮೊಗೆರ ಬರೆದ  "ಈ ರೀತಿ"....http://dinakarmoger.blogspot.in/2011/09/blog-post.html ಓದಿ ನಂತರ ಬನ್ನಿ ಇಲ್ಲಿದೆ "ಇನ್ನೊಂದು ರೀತಿ"!!!!!!!    ರೀತಿ , ಈ ರೀತಿ ಕತೆಗಳ  ಮುಂದುವರೆದ ಸಂಚಿಕೆಗೆ  ಅದೇ "ಇನ್ನೊಂದು ರೀತಿ "   ತಿರುವಿನ ಹಂದರ.                                                                                                                                ...................................................................................................................................................................                                              " ನಾನು ಬಗ್ಗಿ ನೋಡಿದೆ......

ONE MESSAGE RECEIVED.....!!!!
""                                                                                            
 " I am missing you a lot , how is your wife ????    ............ raagini "
                                      
ಅರೆ ಇದೇನಿದು !!! ಇವಳ್ಯಾರು ರಾಗಿಣಿ ??? ಈ ಬಗ್ಗೆ  ಇವನೇನು ಹೇಳೇ ಇರ್ಲಿಲ್ಲಾ !!!!! ತಾಳು ತಾಳು " ರಾಗಿಣಿ " ಮದುವೆಯ ಆರತಕ್ಷತೆಯಲ್ಲಿ  ಪರಿಚಯಿಸಿದ್ದ ನೆನಪು  ಆದರೆ ಆ ದಿನ ಸೇರಿದ್ದ ಸಾವಿರಾರು ಜನರಲ್ಲಿ  ಯಾರ ಮುಖ ಜ್ಞಾಪಕಕ್ಕೆ ಬರುತ್ತೆ??? ಆಲ್ವಾ . ಯಾಕೋ ಮನದಲ್ಲಿ ನನಗೆ ತುಮುಲ ಶುರುವಾಯ್ತು.............!!!!!!!! ಅಷ್ಟರಲ್ಲಿ ..................................
ನನ್ನ ಮೊಬೈಲಿನಲ್ಲಿ  ಎಸ.ಎಂ.ಎಸ ಬಂದ ಸದ್ದು ............................................!!!!!!!!!!!!!!!!!!!! ಇನ್ಬಾಕ್ಸ್  ತೆರೆದು ಮೆಸ್ಸೇಜ್  ನೋಡಿದೆ........................................................................!!!!!!!!!!    HAPPY WISHES TO "YOU, HOW IS HUBBY ?? IS HE SMARTER THAN ME ???  I MISSED U  A LOT , I..................................GUESS ME!!!!! .................................................A  HERO !!!!.......................!!"
                                                                                                                                                                 ನನಗೆ ಕೆಟ್ಟ ಕೋಪ ಬಂದು  ಮತ್ತೆ ನನ್ನ ಮೊಬೈಲ್ ನಿಂದ  ಎಸ. ಎಂ.ಎಸ. ಮಾಡಿದೆ  WHO'S THIS???...................ಅಷ್ಟರಲ್ಲಿ  ಪುಟ್ಟಣ್ಣಿ   ಆಫಿಸ್ ಗೆ ಲೇಟಾಯ್ತು  ತಿಂಡಿ ಕೊಡ್ತೀಯಾ ........................................... ಅವನ ಕರೆ ಬಂತು ಮನಸ್ಸಿನಲ್ಲಿ .ಗೊಂದಲದ ಗೂಡಾಗಿದ್ದ  ನಾನು  ಯಾಂತ್ರಿಕವಾಗಿ  ಹೋಗಿ  ತಿಂಡಿ ಕೊಟ್ಟೆ. ........................................!!!                  ಯಾಕೆ    "ಪುಟ್ಟಣ್ಣಿ" ರಾತ್ರಿ ಬೇಸರ ಇನ್ನೂ ಹೋಗಿಲ್ವಾ ಚಿನ್ನಾ ................. ಅಂತಾ ಅವನು ಹೇಳಿದ ಮಾತಿಗೆ  ಬಲವಂತದ ನಗೆ ನಕ್ಕು   ಹಾಗೇನಿಲ್ಲಾ  ಅಂತಾ ಸುಮ್ಮನಾದೆ.                .................... ತಿಂಡಿ ತಿನ್ನುವಾಗಲೂ  ಆತಂಕದಿಂದ ಆತ  ತನ್ನ ಮೊಬೈಲ್ ನಿಂದ ಮೆಸ್ಸೇಜ್  ಕಳುಹಿಸುತ್ತಲೇ ಇದ್ದದ್ದು ನನ್ನ ಗಮನಕ್ಕೆ ಬಂದು  "ಈ ಮನುಷ್ಯ ಒಬ್ಬ ಮುಖವಾಡ  ಧರಿಸಿದ  ಮೋಸಗಾರ ಅನ್ನಿಸಿತ್ತು." ಆದರೂ ಈ ಜಗತ್ತಿಗೆ ನಾವಿಬ್ಬರು  ಅಧಿಕೃತ ವಾಗಿ ಗಂಡ ಹೆಂಡಿರೆಂಬ  ಪದವಿ ಹೊತ್ತು ಮೆರೆಯಬೇಕಾದ  ಅನಿವಾರ್ಯತೆ ಇದೆ ಅನ್ನಿಸಿ  ಮೌನವಾಗಿ ರೋಧಿಸಿದ್ದೆ, ಮತ್ತೊಮ್ಮೆ ನನ್ನ  ಮೊಬೈಲಿನ ಮೆಸ್ಸೇಜ್  ಜ್ಞಾಪಕಕ್ಕೆ ಬಂದು  ನನ್ನ ಭಾವನೆಗಳನ್ನು ಅಣಕಿಸುತ್ತಿತ್ತು. ಹಾಗು ಹೀಗೂ ನಮ್ಮಿಬ್ಬರ  ಈ ಜೀವನ  ಆಟ ಈ ರೀತಿ "ಕಣ್ಣಾ ಮುಚ್ಚಾಲೆ"  ಆಟ ಆಗಿತ್ತು.  .........................             ತಿಂಡಿ ತಿಂದ ಆತ   " ಪುಟ್ಟಣ್ಣಿ" .....  ಬೈ ಚಿನ್ನಾ ಅಂತಾ ನನಗೆ ಅರಿವಿಲ್ಲದೆ  ನನ್ನ  ಬಳಸಿ ಕೆನ್ನೆಯ ಮಚ್ಚೆಗೆ  ಮುತ್ತಿಟ್ಟ !!!!!  ಕೋಪ ಬಂದರು ಸಾವರಿಸಿಕೊಂಡು  ನೋಡುವಷ್ಟರಲ್ಲಿ  ಆತ ಗೇಟು ದಾಟಿ  ಕಾರ್ ಒಳಗೆ ಹೊಕ್ಕಿ ಹೊರಟೇಬಿಟ್ಟ..................................!!!!!!!!!!!!!!!!!!!!!! ನಾನು ನಿಧಾನವಾಗಿ ಕೋಪ ಕಡಿಮೆ ಮಾಡಿಕೊಂಡು  ಖಾಲಿ ಇರುವ ಮನೆಯೊಳಗೇ ನಿಧಾನವಾಗಿ  ಬಂದು ನನ್ನ ಹಾಸಿಗೆಯ ಮೇಲೆ ಬಿದ್ದು ಕೊಂಡೆ........ ...............................
    ಮತ್ತೆ ನನ್ನ ಮೊಬೈಲ್ ರಿಂಗ್ ಆದಾಗ  ಎಚ್ಚರ ಗೊಂಡ ನಾನು ಹೆಲೋ ಅಂದದ್ದೇ  ಆ ಕಡೆಯಿಂದಾ  ಸಾರಿ ಕಣೆ ಬೆಳಿಗ್ಗೆ ನಿಂಗೆ ಎಸ. ಎಂ.ಎಸ. ಮಾಡಿದ್ದೆ   ಆದ್ರೆ ನೀನು ಕೋಪದಿಂದ  WHO'S THIS???.         ಅಂದೆ ಹಾಗಾಗಿ ನಿನ್ನೊಡನೆ ನಾನೇ ಮಾತಾಡಿ  ಬಿಡೋಣ ಅಂತಾ ಕಾಲ್ ಮಾಡಿದೆ . ನಾನು ಯಾರು ಗೊತಾಗ್ಲಿಲ್ವಾ ??? ಅರೆ "ಬುದ್ದು"   ನಾನು ಕಣೆ  ಜಯಂತ್  ಈಗ ಗೊತ್ತಾಯ್ತಾ!!!!  ಮಾರಾಯ್ತಿ  ನಿನ್ನನ್ನು ಎಲ್ಲೆಲ್ಲಿ ಹುಡುಕೋದು??????  ಕೊನೆಗೆ ನಿನ್ನ ಫ್ರೆಂಡ್  ಶೀಲ ಹತ್ತಿರ ನಿನ್ನ ನಂಬರ್ ತಗೊಂಡು ಕಾಲ್ ಮಾಡಿದೆ ,ನನ್ನ ಮೇಲೆ ಕೋಪಾನ??? ಅಂತಾ ಒಂದೇ ಸಮನೆ  ನನಗೆ ಮಾತಾಡಲೂ ಅವಕಾಶ ಕೊಡದೆ ಮಾತಾಡಿದ . ಮೊದಮೊದಲು ಅವ ಯಾರೆಂದು ತಿಳಿಯೋದು ಕಷ್ಟವಾದರೂ ನಂತರ ಅವನ್ಯಾರೆಂದು ತಿಳೀತು. ನಂತರ ನಾನು ಏನೋ ಸಮಾಚಾರ ಹೇಗಿದ್ದೀ ?? ಎಲ್ಲಿದ್ದೀ ?? ಅಂದೆ ......................., ಅಯ್ಯೋ ಬುದ್ದು!!!! ಯಾಕೆಳ್ತಿಯಾ ನನ್ನ ಪಾಡು  ಅದು, ಸರಿ ನಿಂಗೆ ಮದುವೇ ಆಯ್ತಂತೆ  ಹ್ಯಾಗಿದ್ದಾನೆ ನಿನ್ನ ಹಬ್ಬಿ , ನನಗಿಂತಾ ಸ್ಮಾರ್ಟಾ!!!!!!! ಅಂದಾ  ಯಾಕೋ ಗೊತ್ತಿಲ್ಲಾ .ಸ್ವಲ್ಪ ಇರೋ ಮತ್ತೆ ಕಾಲ್ ಮಾಡ್ತೆನಿ ಅಂತಾ ಫೋನ್ ಇಟ್ಟೆ!!!!!     ಆಗಲೇ ಮನಸು ನೆನಪಿನಾಳಕ್ಕೆ ಇಳೀತು.....................................................  ...................................................!!!! ಆಗ ಆಗಿದ್ದೆ  ಹಿಂದಿನ ಕಥೆಯ ಅನಾವರಣ.   ಹೌದು ಅಂದು ನಮ್ಮ  ಊರಿನ ಕಾಲೇಜಿನಲ್ಲಿ ಓದುವಾಗ  ನಡೆದ   ಗೋವಾ  ಘಟನೆ ನಂತರ  ನಾನು ಆ ಕಾಲೇಜಿಗೆ ಹೋಗದ ಕಾರಣ  ನನ್ನನ್ನು   ಆ ಕಾಲೇಜು ಬಿಡಿಸಿ  ಓದು ಮುಂದುವರೆಸಲು  ಈ ಊರಿಗೆ ತಂದು ಇಲ್ಲಿನ ಕಾಲೇಜಿಗೆ  ಸೇರಿಸಿದರು. ಹಾಗಾಗಿ ನನ್ನ ಚಿಕ್ಕಪ್ಪನ ಮನೆಗೆ   ಬಂದು ನೆಲೆನಿಂತೆ. ಆದರೂ ನೊಂದ ಮನಸಿನಲ್ಲಿ ಆ ಕಹಿ ನೆನಪು ಹಾಗೆ ಉಳಿದಿತ್ತು.   ಆ ನೋವಿನ ಸಮಯದಲ್ಲಿ ಒಂಟಿಯಾಗಿ ಜೀವನದಲ್ಲಿ ಬಳಲಿದ್ದ  ನನಗೆ ಅರಿವಿಲ್ಲದಂತೆ ಹತ್ತಿರ ಬಂದವನೇ  ಇವನು , ನಾನೆಷ್ಟು ದೂರ ಸರಿದರೂ  ನನಗೆ ಧೈರ್ಯ  ತುಂಬಿ , ಜೀವನದಲ್ಲಿ ಹೊಸ ಆಸೆ  ತುಂಬಿ ಭಾವನೆಗಳನ್ನು  ಚಿಗುರಿಸಿ,  ಹೂ ಬಿಡುವ ವೇಳೆಗೆ ಮಾಯವಾಗಿದ್ದ , ಯಾವಾಗಲೂ "ಬುದ್ದು" ಬುದ್ದು" ಅಂತಾ ರೇಗಿಸುತ್ತಾ  ನನ್ನ ಮನಸನ್ನು ಆಕ್ರಮಿಸಿಕೊಂಡು ಬಿಟ್ಟಿದ್ದ , ಅವನೇ ಒಂದು ದಿನ ಮದುವೇ ಪ್ರಸ್ತಾಪ ಮಾಡಿದನಾದರೂ ನಾನೇ ನನ್ನ ಅಹಂಕಾರದಿಂದ ಅವನನ್ನು ದೂರ ಇಟ್ಟು ಅವಮಾನಿಸಿದ್ದೆ. ಅಂದಿನಿಂದಾ ಅವನು ಒಬ್ಬ ಫ್ರೆಂಡ್ ಅನ್ನಿಸಿದ್ದರೂ ನಾನು ಓದು ಮುಗಿಸಿ  ಮತ್ತೆ  ನನ್ನ ಊರಿಗೆ ಹೊರಟಾಗ  ಅವನ ಬಾಡಿದ ಮುಖ ನೋಡಿ ತಡೆಯಲಾಗದೆ  ನಾನೇ ಅವನನ್ನು ಕಂಡು   ಪ್ರೀತಿಯ ನಿವೇದನೆ ಮಾಡಿದ್ದೆ............................!! ನಂತರ ಕೆಲದಿನಗಳಲ್ಲಿ ಅವ ವಿದೇಶಕ್ಕೆ ಹೊರಟಾಗ  ನಮ್ಮಿಬ್ಬರ  ಪ್ರೀತಿ ಪ್ರೇಮದ ಬಗ್ಗೆ   ನಮ್ಮ ಮನೆಯವರೊಂದಿಗೆ ಹೇಳಿಕೊಳ್ಳಲಾಗದಷ್ಟು  ಅಸಹಾಯಕರಾಗಿ  ನೋವಿನಿಂದ ನರಳುತ್ತಾ  ದೂರಾದೆವು.   ಆ "ಜಯಂತ್ "  ಇಂದು ಕಾಲ್ ಮಾಡಿದಾಗ  ಏನೂ ಮಾಡಲು ತೋಚದೆ  ಏನೋ ಹೇಳಿ ಫೋನ್ ಇಟ್ಟಿದ್ದೆ.                                                                                                      ಈ "ಜಯಂತ್"ನನ್ನ ಬಾಳಿನಲ್ಲಿ ಬಂದಿದ್ದ    ಘಟನೆಯನ್ನು  ನಾನು ಅವನಿಗೆ ಹೇಳದೆ  ಮುಚ್ಚಿಟ್ಟು................................................................. ಅಂದು ನಮ್ಮ ಪ್ರಥಮ  ರಾತ್ರಿಯ ವೇಳೆ ನನ್ನ ಗಂಡ     
"ನಾನು ಮೊದಲೇ ಹೇಳಿದ್ದೇನೆ..
ನಂಬಿಕೆ.. 
ವಿಶ್ವಾಸ ಇರಬೇಕು ಅಂತ...
ನನಗೆ ಇದೆಲ್ಲ ಇಷ್ಟವಾಗೊಲ್ಲ..."   ಅಂದ ಮಾತನ್ನು ಧಿಕ್ಕರಿಸಿ .................. ನನ್ನ ಈ ಕಥೆಯನ್ನು ಅವನಲ್ಲಿ ಹೇಳದೆ  ನಾನು ನನ್ನ ವರ್ತನೆಯಿಂದ  ಗೆದ್ದವಳಂತೆ ಮೆರೆದೆ ಆದರೆ ಅಂದು ನನಗರಿವಿಲ್ಲದೆ ಜೀವನದಲ್ಲಿ ಸೋತಿದ್ದೆ...............................!!!          ಮತ್ತೆ ಮೊಬೈಲ್ ರಿಂಗ್ ಆದಾಗ ಅವನೇ ......................................................ಮಾತಾಡಿ           !!!!!!!!!!!!!!!!!!!                                                   
ಯಾಕೆ ಬುದ್ದು ಫೋನ್ ಅವಾಯಿಡ್  ಮಾಡ್ತಾ ಇದ್ದೀಯ ಇಲ್ಲಿ ಕೇಳು  ನಿನಗೆ ಒಂದು ಸರ್ಪ್ರೈಸ್ ಕೊಡಬೇಕು ನಿನ್ನ ಗಂಡನ ಜೊತೆ ನಾಳೆ  "ಇಂದ್ರ ಲೋಕ"  ಹೋಟೆಲ್ ಗೆ ಬರಬೇಕೂ ಆಯ್ತಾ , ಇಲ್ಲಾನ್ನಬೇಡ , ನೀನು ಬರದೆ ಹೋದ್ರೆ  ನಿಮ್ಮ ಮನೆಗೆ ಬಂದು ಬಿಡ್ತೇನೆ ಅಷ್ಟೇ ಆಮೇಲೆ ನನ್ನ ಬೈಯ್ಯಭಾರದು ಅಂದಾ , ........................................................................... ನಾನು ಬೇಡಾ ಕಣೋ ಇದೆಲ್ಲಾ...............!!!  ನನಗೀಗ ಮದುವೇ ಆಗಿದೆ  ನೆಮ್ಮದಿಯಾಗಿ ಇರೋಕೆ ಬಿಡು  ಅಂದೆ. ನೋಡೇ" ಬುದ್ದು "  ನೀನು ನಾಳೆ ನಿನ್ನ ಹಬ್ಬಿಯ ಜೊತೆ ಹೋಟೆಲ್ ಗೆ ನಾಳೆ ಸಂಜೆ  ಐದೂವರೆ ಗೆ ಬರ್ತೀಯ ಅಷ್ಟೇ  ಬರದಿದ್ದರೆ  ಗೊತ್ತಲ್ಲಾ ಅಂತಾ ಫೋನ್ ಇಟ್ಟಾ...........................................ಕೆಟ್ಟ ಕೋಪ ಬಂದರು  ಹಳೆಯ ನೆನಪು ಅವನನ್ನು ಒಮ್ಮೆ ನೋಡೋಣ ಅಂತಾ ಕಾಡಿಸಿತ್ತು. ಸರಿ ನನ್ನ ಪತಿಗೆ ಹೇಳೋಣ ಅಂತಾ ಅಂದುಕೊಂಡು  ಅವನನ್ನು ಇವನಿಗೆ ಭೇಟಿಮಾದಿಸಿದರೆ, ಇವನು  ಹ್ಯಾಗೆ ರಿಯಾಕ್ಟ್ ಮಾಡ್ತಾನೆ ಅಂತಾ ಯೋಚನೆ ಶುರು ಆಯ್ತು , ಏನೋ ಒಂದು ಹೇಳೋಣ ಅಂತಾ ಅಂದುಕೊಂಡು  ಸಂಜೆ  ನನ್ನ ಪತಿ ಮನೆಗೆ ಬರೋದನ್ನು  ಕಾಯುತ್ತಾ ಟಿ.ವಿ.ಮುಂದೆ ಕುಳಿತೆ ಅದರಲ್ಲಿ  ಬರುತ್ತಿದ್ದ ಸೀರಿಯಲ್  ಯಾಕೋ ಬೋರಾಗಿ ................ಅದನ್ನು ಆಫ್ ಮಾಡಿ ........... ಕಂಪ್ಯೂಟರ್ ಮುಂದೆ ಕುಳಿತು  ನನ್ನ ಬ್ಲಾಗ್ ನಲ್ಲಿ ಒಂದು ವಿರಹ ಗೀತೆ ಬರೆದೆ. ......."ಗತಿಸಿದ ನೆನಪುಗಳ ರಾಡಿಯನ್ನು ತೊಳೆಯಲು ಮಳೆಯಂತೆ ನೀನು ಬಾ>>>>!!!" ......!!!!!!!!!!!!!!!!!!!!! ಸಾಲುಗಳು ಮೂಡಿಬಂದವು.

Thursday, September 22, 2011

ನಾವ್ಯಾಕೆ ಹೀಗೆ ಎಡಬಿಡಂಗಿಗಳು???? ಜೀವನ ಇಷ್ಟೇನೆ ??? ಚಮ್ಮಾರ ಕಲಿಸಿದ ಪಾಠ !!!!!!!



  •  "ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ " ಹಾಡು ತೇಲಿ ಬರುತ್ತಿತ್ತು , ಹಾಗೆ ಹೆಜ್ಜೆಹಾಕುತ್ತಾ  ನಡೆದು ಬರುತ್ತಿದ್ದೆ , ರಸ್ತೆಯ ಬದಿಯಲ್ಲಿ  ಹರಿದ  ಚಾಪೆಯ ಮೇಲೆ  ಸುತ್ತಾ ಹರಿದ ಚಪ್ಪಲಿ ರಾಶಿಗಳ ನಡುವೆ  ವಯಸ್ಸಾದ  ವ್ಯಕ್ತಿಯೊಬ್ಬ ತನ್ನೆದುರು ನಿಂತ ದಡೂತಿ ಮಹಿಳೆಯ ಮುಂದೆ ಕೈಚಾಚಿ  ತನ್ನ ಕೆಲಸದ ಕೂಲಿ ಬೇಡುತ್ತಿದ್ದ . ಮೈತುಂಬಾ ಒಡವೆ ರಾಶಿ ಹಾಕಿಕೊಂಡಿದ್ದ ಆ ಮಹಿಳೆ  ಹಣ ಕೊಡಲು ಕೊಸರಾಡುತ್ತಿದ್ದರು. ಬನ್ನಿ ಹತ್ತಿರ  ಹೋಗಿ ನೋಡೋಣ.

  • ಚಮ್ಮಾರ :-) "ತಾಯಿ ಇಗೊಳ್ಳಿ ನಿಮ್ಮ ಚಪ್ಪಲಿ ರೆಡಿ  ಹತ್ತು ರುಪಾಯಿ............... ಕೊಡಿ  "  
  •   
  •  ಮಹಿಳೆ :-)    "ಏನಪ್ಪಾ ಹಾಗೆ ಹೀಗೆ  ಎರಡು ಹೊಲಿಗೆ ಹಾಕಿಬಿಟ್ಟು  ಹತ್ತು ರುಪಾಯಿ ಕೇಳ್ತೀಯ ??? ನಾ ಕೊಡೋದೇ     ಎರಡು ರುಪಾಯಿ  "      

  •                                                                                                     ಚಮ್ಮಾರ :- "ಅಲ್ಲಾ ತಾಯಿ ನಿಮ್ಮೆದುರ್ಗೆ ಕಾಲ್ ಗಂಟೆ ಯಿಂದ  ಎರಡೂ ಚಪ್ಪಲಿ  ಒಲ್ದಿದ್ದೀನಿ  , ಹೊಲ್ಗೆ ದಾರ , ಮ್ಯಾಣ ಎಲ್ಲಾ ಸಾನೆ ದುಬಾರಿ ಯಾಗವೇ  , ನೀವು ತಿಳ್ದೊರು  ನೀವೇ ಇನ್ಗಂದ್ರೆ ಎಂಗೆ ತಾಯಿ , ಹತ್ತು ರುಪಾಯಿ ಕೊಡಿ ಇಲ್ಲಾ ಅನ್ಬ್ಯಾಡಿ''
  •                                                                                                        ಮಹಿಳೆ :-  "ಏನಯ್ಯ  ಬಲೆ ಮಾತಾಡ್ತಿ  ತಗೋ  ಅಂತಾ ಐದು ರುಪಾಯಿ  ನಾಣ್ಯ ಎಸೆದು ಹೊರಟಳು. "
  •    

  • ಚಮ್ಮಾರ   :- "ತಾಯಿ ತಾಯಿ ಬಡವನ ಹೊಟ್ಟೆ ಮ್ಯಾಲೆ   ಒಡಿ ಬ್ಯಾಡಿ   ಒಗ್ಲಿ ಇನ್ಮೂರು ರುಪಾಯಿ ಕೊಡಿ."

  •     ಅಂತಾ ಬೇಡಿದ  ಆದರೆ  ಅ ಹೆಂಗಸು ಈ ಮಾತನ್ನು  ಕೇಳದೆ   ಸರ ಸರನೆ ಹೊರಟೆ ಬಿಟ್ಟಳು . ಮನಸಿಗೆ  ಬೇಸರವಾಯಿತು ಹಾಗೆ ಸ್ವಲ್ಪ ದೂರ ಮುಂದುವರೆದೆ  ನನ್ನ ಸ್ನೇಹಿತ ರಘು  ಸಿಕ್ಕಿದ . ಬಾರೋ ಬಹಳ ವರ್ಷ ಆಯ್ತು ನಿನ್ನ ಜೊತೆ ಮಾತಾಡಬೇಕು , ನನ್ನ ಅಂಗಡಿಗೆ ಹೋಗೋಣ ಬಾ ಅಂತಾ ಬಲವಂತ ಮಾಡಿ ಕರೆದೊಯ್ದಾ . ಅಂಗಡಿಗೆ ಹೋದ್ರೆ  ಎರಡುವರ್ಷದ ಹಿಂದೆ  ಸುಮಾರಾಗಿದ್ದ  ಸಣ್ಣ ಬಟ್ಟೆ ಅಂಗಡಿ ಇಂದು   ವಿವಿಧ ಬಗೆಯ ಸೀರೆ , ಗಾರ್ಮೆಂಟ್ಸ್  ಗಳ ಷೋ ರೂಂ ಆಗಿ ಕಂಗೊಳಿಸಿತ್ತು.. ಬಾ ಗುರು  ನಿಧಾನವಾಗಿ ಮಾತಾಡೋಣ ಅಂತಾ ಅಂದವನೇ  ಯಾರನ್ನೋ ನೋಡಿ, ಬಾಲು ಸ್ವಲ್ಪ ಇರು  ಬಂದೆ ಒಂದು ಒಳ್ಳೆ ಗಿರಾಕಿ ಬಂದಿದ್ದಾರೆ  ಅಂತಾ ನನ್ನನ್ನು ಕುರ್ಚಿಯಲ್ಲಿ ಪತಿಷ್ಟಾಪಿಸಿ ಹೊರಟ. ನಾನೂ ಸಹ ಯಾರಪ್ಪಾ ಅಂತಾ  ಅತ್ತ ಗಮನಿಸಿದರೆ  ಅದೇ ಹೆಂಗಸು !!! ಹೌದು ನಿಜ ಅದೇ ಹೆಂಗಸು  ಆ ಚಮ್ಮಾರನಿಗೆ  ಚಳ್ಳೆ ಹಣ್ಣು ತಿನ್ನಿಸಿ ಬಂದ ಮಹಾ ತಾಯಿ  ದರ್ಶನ ಇಲ್ಲಿ.  ಅಷ್ಟರಲ್ಲಾಗಲೇ ನನ್ನ ಸ್ನೇಹಿತನ ಹೆಂಡತಿ  ಆ ಹೆಂಗಸಿಗೆ ಸೀರೆ ತೋರಿಸುತ್ತಾ  ವ್ಯಾಪಾರ ಶುರು ಮಾಡಿದ್ದರು. ನನ್ನ ಸ್ನೇಹಿತನನ್ನು  ಪಕ್ಕಕ್ಕೆ ಕರೆದು  ನಡೆದ ವಿಚಾರ ತಿಳಿಸಿ  ಈ ಮಹಿಳೆ ಮಾಡಿದ ಮಹಾ ಕಾರ್ಯ ವರ್ಣಿಸಿದೆ,  ನೋಡ್ತಾ ಇರು ಹಾಗೆ  ಅಂದವನೇ ಅವನ ಹೆಂಡತಿಗೆ  ಮರಾಟಿಯಲ್ಲಿ ಏನೋ ಹೇಳಿದ .  ಅವನ ಹೆಂಡತಿ ಇಲ್ಲೇ ಬನ್ನಿ ಅಣ್ಣಾ , ಅಕ್ಕಾ ಚೆನ್ನಾಗಿದ್ದಾರಾ  ಅಂತಾ ನಕ್ಕು ವ್ಯಾಪಾರದಲ್ಲಿ ಮಗ್ನರಾದರು. ನಾನೂ ಸಹ ಅಲ್ಲೇನು ನಡೆಯುತ್ತದೆ ಅಂತಾ ಆಸಕ್ತಿಯಿಂದಾ ನೋಡುತ್ತಾ ಹತ್ತಿರದಲ್ಲಿ ಕುಳಿತೆ. ಬನ್ನಿ ಅಲ್ಲಿನ ಮಾತನ್ನು ಕೇಳೋಣ.


  •   ರಘು :- "ನಮಸ್ಕಾರ ಮೇಡಂ , ಬಹಳ ದಿನ ಆಯ್ತು  ನಮ್ ಅಂಗಡಿಗೆ ಬಂದು. ಅಂದವನೇ ಲೇ ಯಾರೋ ಅಲ್ಲಿ  ಮೇಡಂ ಅವರಿಗೆ ಕೂಲ್  ಆಗಿ ಬಾದಾಮಿ ಹಾಲು ತಗೊಂಬಾರೋ ........" ಅಂದಾ..


Tuesday, September 13, 2011

ಬಿಳಿಗಿರಿ ರಂಗನ ಪುನರ್ ಪ್ರತಿಷ್ಟಾಪಿಸಿದ ಮುಜೀಬ್ ಅಹಮದ್ !!ಇಮಾಮರ ಗೋಕುಲಾಷ್ಟಮಿ ಸಂಬಂಧ ಇಲ್ಲಿದೆ!!!!!

ಕಳೆದ ವಾರ  ಹಾಗೆ ಮನೆಯಲ್ಲಿ ಕುಳಿತಿದ್ದೆ , ಸ್ನೇಹಿತರಿಗೆ ಮೊಬೈಲಿನಿಂದ ರಂಜಾನ್ , ಗೌರಿ ಹಬ್ಬ, ಗಣೇಶ ಹಬ್ಬದ ಶುಭಾಶಯಗಳನ್ನು ಕಳುಹಿಸುತ್ತಿದ್ದೆ. ನನ್ನ ಹಲವಾರು ಸ್ನೇಹಿತರಿಗೆ  ಶುಭ ಸಂದೇಶ ಕಳುಹಿಸಿದ ನಾನು ಮಾರನೆಯ ದಿನದ ಹಬ್ಬದ ತಯಾರಿಯಲ್ಲಿ  ತೊಡಗಿದೆ. ಅಷ್ಟರಲ್ಲಿ   ಸ್ನೇಹಿತರೊಬ್ಬರ   ಕರೆಬಂದು ದಿನಾಂಕ 28 /08 /2011 ರ  ವಿಜಯ ಕರ್ನಾಟಕ ಪತ್ರಿಕೆಯ ಲವ್ ಲವಿಕೆಯ ಸಂಚಿಕೆಯನ್ನು ಓದಲು ತಿಳಿಸಿದರು. ಪತ್ರಿಕೆಯನ್ನು ಕೈಗೆತ್ತಿಕೊಂಡು ಓದಲು ಹೋದಾಗ ಕಂಡಿದ್ದೆ ನನಗೂ ತಿಳಿದಿದ್ದ ಈ ವಿಸ್ಮಯ. ಹೌದು ಇದನ್ನು ನಾನೂ ಸಹ ಬ್ಲಾಗಿನಲ್ಲಿ ಹಾಕಲು ಉದ್ದೇಶಿಸಿದ್ದೆ. ಆದರೆ ನೆಚ್ಚಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಡಾ// ಏಜಾಸುದ್ದೀನ್ ರವರು ಒಂದು ಅಂದದ ವಿಚಾರ ಪೂರ್ಣ ಲೇಖನವನ್ನು ಬರೆದಿದ್ದರು. ನೆಚ್ಚಿನ ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ಮತ್ತೊಮ್ಮೆ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿ "ಇಮಾಮ ಸಾಬರ ಗೋಕುಲಾಷ್ಟಮಿ " ಸಂಭಂದದ  ಕಥೆ  ಬರೆದಿದ್ದೇನೆ. [ ಈ ಲೇಖನ ಬರೆಯುವ ಮೊದಲು ಶ್ರೀ ಮುಜೀಬ್ ಅಹಮದ್ ರವರ  ಅವರಿಂದ ಮತ್ತಷ್ಟು ಮಾಹಿತಿ ಪಡೆದು ಈ ಲೇಖನ  ಪ್ರಕಟಿಸಲು ಅನುಮತಿ ಪಡೆದಿದ್ದೇನೆ]. ಆದರೂ ಬರೆದ  ಡಾ//ಎಜಾಸುದ್ದೀನ್ , ಹಾಗು ಪ್ರಕಟಣೆ ಮಾಡಿರುವ ವಿಜಯ ಕರ್ನಾಟಕ ಪತ್ರಿಕೆಗೆ ಕೃತಜ್ಞನಾಗಿದ್ದೇನೆ.                                     
ವಿಜಯ ಕರ್ನಾಟಕ ಪತ್ರಿಕೆಯ ಲೇಖನ

ಬನ್ನಿ  ವಿಚಾರ ತಿಳಿಯೋಣ. 1986 ನೆ ಇಸವಿ, ಬಿಳಿಗಿರಿ ರಂಗನ ಬೆಟ್ಟ  ಆಗಿನ್ನೂ  ಅವಿಭಜಿತ ಮೈಸೂರು ಜಿಲ್ಲೆಯಲ್ಲಿಯೇ ಇತ್ತು. ಒಮ್ಮೆ ಬಿಳಿಗಿರಿ ರಂಗನಾಥ ಸ್ವಾಮಿಯ ಅರ್ಚಕರಾದ  ಶ್ರೀ ನಾಗರಾಜ ಭಟ್ಟರು ತಾಲೂಕು ಕಚೇರಿಗೆ ಬಂದು ತಹಸಿಲ್ದಾರ್ ರವಲ್ಲಿ ಮನವಿ ಮಾಡಿ ಕೊಳ್ಳುತ್ತಾರೆ  ಸ್ವಾಮೀ  ಬಿಳಿಗಿರಿ ರಂಗನಾಥನ ಮೂಲ ವಿಗ್ರಹ ಅಲ್ಲಾಡುತ್ತಿದೆ  , ದಯಮಾಡಿ ಇದನ್ನು  ಪರಿಶೀಲಿಸಿ ಸರ್ಕಾರದ ವತಿಯಿಂದ ಕ್ರಮ ವಹಿಸಿ ದೇವಾಲಯ ದಲ್ಲಿ ಮೂಲ ವಿಗ್ರಹ ಪುನರ್ ಪ್ರತಿಷ್ಟಾಪಿಸಿ ದೇವಾಲಯದ ಪೂಜೆ ನಡೆಯಲು ಅವಕಾಶ ಮಾಡಿಕೊಡಿ,  ಎಂದು ವಿನಂತಿ ಮಾಡುತ್ತಾರೆ. ಯಾವುದೇ ದೇವಾಲಯದಲ್ಲಿ  ಭಗ್ನಗೊಂಡ, ವಿರೂಪಹೊಂದಿದ , ಅಲ್ಲಾಡುವ  ವಿಗ್ರಹಗಳನ್ನು ಪೂಜಿಸುವುದಿಲ್ಲಾ ಎಂಬ ಅಂಶ ತಿಳಿದಿದ್ದ  ತಹಸಿಲ್ದಾರ್ ಮುಜೀಬ್ ಅಹಮದ್ ರವರು , ಈ ಕಾರ್ಯದ ಬಗ್ಗೆ ಅರ್ಜಿ ಸ್ವೀಕರಿಸಿ  ಯೋಚಿಸಲು ತೊಡಗುತ್ತಾರೆ. ಅರ್ಚಕ ರಾದ ನಾಗರಾಜ ಭಟ್ಟರ ಬಳಿ ಮತ್ತಷ್ಟು ಹೆಚ್ಚಿನ ಮಾಹಿತಿ ವಿನಿಮಯ ಮಾಡಿ ಅವರನ್ನು ಬೀಳ್ಕೊಟ್ಟು ತಮ್ಮ ಯೋಚನಾ ಲಹರಿಯಲ್ಲಿ ತೊಡಗುತ್ತಾರೆ.ಇಂತಹ ಕಾರ್ಯದಲ್ಲಿ ತಾವು ತೊಡಗಿದಾಗ ಯಾವ ರೀತಿ ಪರಿಣಾಮ ಆಗಬಹುದು ಎಂಬ ವಿಚಾರದ ಬಗ್ಗೆ ಯೋಚಿಸಿದಾಗ ಅವರ ಮನಸ್ಸು ಭಾವೈಕ್ಯದ ಪರವಾಗಿ ನಿಲ್ಲುತ್ತದೆ. ಮಾರನೆಯದಿನ ದೇವಾಲಯದ ಧರ್ಮದರ್ಶಿಗಳ ಜೊತೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸ್ಥಿತಿಯನ್ನು ಅವಲೋಕಿಸುತ್ತಾರೆ. ಈ ವಿಚಾರಗಳನ್ನು ಸರ್ಕಾರದ ಮಟ್ಟದ ಮುಜರಾಯಿ[ ಧಾರ್ಮಿಕ ದತ್ತಿ ಇಲಾಖೆ ] ಕಮಿಷನರ್ , ಹಾಗು ಜಿಲ್ಲಾಧಿಕಾರಿಗಳಿಗೆ  ಇಲ್ಲಿನ ವಿಚಾರದ  ಬಗ್ಗೆ ಪತ್ರ ಬರೆದು ಅವರ ಮನ  ಒಲಿಸಿ  ಅವರನ್ನು ಬಿಳಿಗಿರಿ  ರಂಗನ ಬೆಟ್ಟಕ್ಕೆ ಕರೆತರುತ್ತಾರೆ. ಅವರುಗಳೊಂದಿಗೆ ಸಮಾಲೋಚಿಸಿ ನಂತರ  ಯಳಂದೂರು ತಾಲೂಕಿನ  ಸರ್ವ ಜನಾಂಗದ ಮುಖಂಡರ ಸಭೆಯನ್ನು ಕರೆದು ವಿಚಾರ ವಿಮರ್ಶೆ ಮಾಡಲಾಗಿ ಎಲ್ಲಾ  ಜನಾಂಗದ ಮುಖಂಡರು ಮುಜೀಬ್ ಅಹಮದ್ ರವರ ನೇತೃತ್ವದಲ್ಲಿ  ಪುನರ್ಪ್ರತಿಷ್ಟಾಪನೆ  ಕಾರ್ಯ ಆಗಬೇಕೆಂಬ ತೀರ್ಮಾನಕ್ಕೆ ಬರುತ್ತಾರೆ. ಅದರಂತೆ 1980 ರ  ಸೆಪ್ಟೆಂಬರ್ 01 ಮಧ್ಯಾಹ್ನ 12  ಘಂಟೆಗೆ   ಕಾರ್ಯಕ್ರಮ  ವಿಧಿ ವಿಧಾನ ಆರಂಭಿಸಿ ಅಕ್ಟೋಬರ್ 26 ರಂದು ಹೊಸ ವಿಗ್ರಹವನ್ನು ಧಾರ್ಮಿಕ ವಿಧಿಗಳೊಂದಿಗೆ ಪುನರ್ಪ್ರತಿಷ್ಟಾಪಿಸಬೇಕೆಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಎಲ್ಲಾ ಜವಾಬ್ಧಾರಿ ಹೊತ್ತ ಮುಜೀಬ್ ರವರಿಗೆ  ಮನದಲ್ಲಿ ತಳಮಳ ಇಂತಹ ಜವಾಬ್ಧಾರಿ ಕಾರ್ಯದಲ್ಲಿ ತಾನು ಎಷ್ಟರ ಮಟ್ಟಿಗೆ ತೊಡಗಬಲ್ಲೆ, ಹೆಚ್ಚು ಕಡಿಮೆ ಆದರೆ ಗತಿಯೇನು?? ಎಂಬ ಬಗ್ಗೆ ಯೋಚನೆ ಕಾಡಲು ಆರಂಭವಾಗುತ್ತದೆ.  1986 ರ ಆಗಸ್ಟ್ 31 ರಂದು ರಾತ್ರಿ ಒಂದೆರಡು ಬಾರಿ ಕನಸಿನಲ್ಲಿ ಬಿಳಿಗಿರಿರಂಗನೆ ಕನಸಿನಲ್ಲಿ ಬಂದು ಈ ಕಾರ್ಯವನ್ನು ಮಾಡಲು ನೀನು ಸಮರ್ಥ ಎಂದು ಹೇಳಿದಂತೆ ಭಾಸವಾಗುತ್ತದೆ . ಬೆಳಗಾಗುವುದನ್ನೇ ಕಾದಿದ್ದು ಮುಂಜಾನೆಯೇ ಬಿಳಿಗಿರಿ ರಂಗನ ಬೆಟ್ಟಕ್ಕೆ  ಆತುರಾತುರವಾಗಿ ದಾವಿಸುತ್ತಾರೆ. ದೇವರ ವಿಗ್ರಹದ ಎದುರು ನಿಲ್ಲ ಬೇಕೆಂಬ ಭಾವನೆ ಕಾಡಿ  ಅಲ್ಲಿಗೆ ಹೋಗಿ ವಿಗ್ರಹದ ಎದುರು ನಿಂತರೆ ಅಂದಿನ ಪ್ರಧಾನ ಆಗಮಿಕರಾದ  ಶ್ರೀ ಕೇಶವಾಚಾರ್ ರವರು ಯಜ್ಞಸಮಾನವಾದ ಕಾರ್ಯದ ಚುಕ್ಕಾಣಿಯನ್ನೇ ಇವರ ಕೈಗೆ ನೀಡುತ್ತಾರೆ.ಹಾಗು ಮುಜೀಬ್ ಅಹಮದ್ ರವರ ಹೆಸರಿನಲ್ಲೇ ಪ್ರತಿಷ್ಠಾಪನಾ ಸಂಕಲ್ಪ ಮಾಡಲಾಗುತ್ತದೆ , ಇದನ್ನು ಕಂಡು ದಿಗ್ಭ್ರಮೆಯಿಂದ  ಇದೇನು ಕೇಶವಾಚಾರರೆ??? ನೀವು ಮಾಡಿದ್ದು ಎಂದರೆ   ನನ್ನದೇನೂ ಇಲ್ಲಪ್ಪಾ  ಎಲ್ಲವೂ ಆ  ಬಿಳಿಗಿರಿರಂಗ ಆಡಿಸುತ್ತಿರುವ ನಾಟಕ ಇದು ಅಷ್ಟೇ ಅನ್ನುತ್ತಾರೆ. ಹಾಗು ಮೂಲವಿಗ್ರಹವನ್ನು ತಾತ್ಕಾಲಿಕವಾಗಿ ಬೇರೆಡೆಗೆ ಇದುವ ದಾರಿ ಮಾಡಿಕೊಡುವ ಕಳಾಕರ್ಷಣೆ ವಿಧಿ ಪ್ರಾರಂಭ ಆಗುವ ಸಮಯದಲ್ಲಿ ಪ್ರಧಾನ ಆಗಮಿಕರು ಗರ್ಭಗುಡಿಯೊಳಗೆ ಮೊದಲು ಮುಜೀಬ್ ಅಹಮದ್ ರವರನ್ನು ಕರೆದುಕೊಂಡು ಹೋಗುತ್ತಾರೆ.ಆಗ ಮನ ತುಂಬಿಬಂದ ಮುಜೀಬ್ ಅಹಮದ್ ರವರು ತಮ್ಮನ್ನು ತಾವು ನಂಬದ ಹಂತಕ್ಕೆ ಮುಟ್ಟಿರುತ್ತಾರೆ . ಸತತವಾಗಿ ಇವರ ಮುಂದಾಳತ್ವದಲ್ಲಿ ಐವತ್ತಾರು ದಿನ  ಹಗಲು ರಾತ್ರಿ  ಧಾರ್ಮಿಕ ಕಾರ್ಯಗಳು ನಿರ್ವಿಗ್ನವಾಗಿ ನಡೆಯುತ್ತವೆ. ಈ ಕಾರ್ಯಕ್ಕೆ ಬರುವ ಸಹಸ್ರಾರು ಭಕ್ತರಿಗೆ ಯಾವುದೇ ತೊಂದರೆ  ಆಗದಂತೆ   ಸಕಲ ವ್ಯವಸ್ತೆಯನ್ನು ಮಾಡಿ ಮುಜೀಬ್ ಅಹಮದ್  ಜೈ ಅನ್ನಿಸಿಕೊಳ್ಳುತ್ತಾರೆ.  1986  ರ ಅಕ್ಟೋಬರ್ 26ರಂದು ಬಿಳಿಗಿರಿರಂಗನ ಪರ್ತಿಷ್ಟಾಪನೆ ಕಾರ್ಯ ಯಶಸ್ವಿಯಾಗಿ ನೆರವೇರಿತು.ಅಲ್ಲಿಗೆ ಆಗಮಿಸಿದ್ದ ವಿವಿಧ ಧಾರ್ಮಿಕ ಕ್ಷೇತ್ರಗಳ ಆಗಮಿಕರು ಸುಮಾರು ಐವತ್ತು ಜನಕ್ಕೂ ಹೆಚ್ಚು ಆಗಮಿಕರು ವೇಧಘೋಶಗಳಿಂದ ವಾತಾವರಣವನ್ನು ಭಕ್ತಿ ಪರವಶಗೊಳಿಸುತ್ತಾರೆ. ನಂತರ ಕಾರ್ಯಕ್ರಮ ಮುಗಿಸಿ ಹೊರಡುವ ಸಮಯ ಬಂದಾಗ ಮುಜೀಬ್ ಅಹಮದ್ ರವರನ್ನು ಅಪ್ಪಿಕೊಂಡ ಪ್ರಧಾನ ಆಗಮಿಕರಾದ ಕೇಶವಾಚಾರ್ ರವರು  ಸ್ವಾಮೀ ನಿಮ್ಮ ಸಹಕಾರದಿಂದ ಬಿಳಿಗಿರಿರಂಗನ  ಪ್ರೇರಣೆಯಂತೆ ಕೆಲಸ ಸುಗಮವಾಗಿ ಆಯಿತು. ನೀವೊಬ್ಬ ಮಹಾಬ್ರಾಹ್ಮಣ  ನನಗೆ ಹೊರಡಲು ಅನುಮತಿ ಕೊಡಿ ಎಂದು ಭಾವ ಪೂರ್ವಕವಾಗಿ ಗದ್ಗತಿತರಾಗುತ್ತಾರೆ .ಕಣ್ಣಲ್ಲಿ ಆನಂದ ಭಾಷ್ಪ ಸುರಿಸುತ್ತಾ  ನಿಮ್ಮನ್ನು ಆ ಬಿಳಿಗಿರಿರಂಗ ಹರಸಿದ್ದಾನೆ ಎಂಬ  ಮನದ ಮಾತನ್ನು ಹೇಳುತ್ತಾರೆ.ಬಿಳಿಗಿರಿ ರಂಗನಾಥನ ಮೂರ್ತಿಯಲ್ಲಿ ಒಂದು ದಿವ್ಯ ಕಳೆ ಈ ಕ್ಷಣಕ್ಕೆ ಸಾಕ್ಷಿಯಾಗಿ ನಿಂತಿತ್ತು.          

Wednesday, August 24, 2011

ಮೂರು ಪುಸ್ತಕಗಳ ಬಿಡುಗಡೆಯಲ್ಲಿ, ನೂರಾರು ತುಂಟಾಟ ಮಾಡುವ ಜನ ಸೇರಿದ್ದರಲ್ಲಿ!!!!





ಬನ್ನಿ ನಮಸ್ಕಾರ ನಿಮ್ಮನ್ನ ಇದ್ರಲ್ಲಿ ಕೂಡಿಹಾಕ್ತೀನಿ !!!
ಏನೇ ಅನ್ನಿ ಈ ಅಗಸ್ಟ್ ತಿಂಗಳು ಬಂದ್ರೆ ಏನೋ ಒಂತರ ಮಜಾ ಕಣ್ರೀ. ಯಾರಿಗೂ ಗೊತ್ತಿಲ್ಲದ ನಾನು ಕಳೆದ ವರ್ಷ  ಆಗಸ್ಟ್ ತಿಂಗಳಲ್ಲಿ ನಡೆದ  ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಾಗು ಬ್ಲಾಗ್ ಮಿತ್ರರ ಕೂಟದಲ್ಲಿ  ಸಿಲುಕಿ  ಎಲ್ಲರೊಳಗೆ ಒಬ್ಬನಾದೆ.!!!ಬಹಳಷ್ಟು ಜನ ಆತ್ಮೀಯ ಗೆಳೆಯರನ್ನು ತಂದು ಕೊಟ್ಟ ಆ ದಿನ ಮರೆಯಲಾರೆ. ಹಾಗೆ ಈ ಬಾರಿಯೂ  ಸೃಷ್ಟಿ-ತುಂತುರು ಸಂಯೋಗದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ  ಕಳೆದ  ಭಾನುವಾರ "ಪ್ರೀತಿ ಏನನ್ನಲಿ ನಿನ್ನ, ಹೆಜ್ಜೆ ಮೂಡದ ಹಾದಿಯಲ್ಲಿ, ಮಂಜು ಕರಗುವ ಮುನ್ನ" ಮೂರು ಪುಸ್ತಕಗಳ ಲೋಕಾರ್ಪಣೆಯಾಯ್ತು. ಸಮಾರಂಭದಲ್ಲಿ ನಾ ಕಂಡ ದೃಶ್ಯಗಳನ್ನು ನಿಮ್ಮೊಡನೆ ಹಂಚಿಕೊಂಡಿರುವೆ."ನಗು ಬಂದರೆ ಚೌಕಾಸಿ ಮಾಡದೆ ನಕ್ಕು ಬಿಡಿ" ಇಲ್ಲದಿದ್ದರೆ  ನಿಮ್ಮ ಮುಂದಿರುವ ಕಂಪ್ಯೂಟರ್ ಸ್ಕ್ರೀನ್ಗೆ  ಕೋಪದಿಂದ ಒಂದು ಗುದ್ದು ಕೊಡಿ!!! ಒಟ್ಟಿನಲ್ಲಿ ಏನಾದರೂ ಮಾಡಿ ಬನ್ನಿ ನನ್ನ ಜೊತೆ  ದೃಶ್ಯ ಹಾಸ್ಯ ಮೇಳಕ್ಕೆ.[ ದಯಮಾಡಿ ಯಾರೂ ಇದನ್ನು ವಯಕ್ತಿಕವಾಗಿ ತೆಗೆದುಕೊಳ್ಳದೆ ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ನಕ್ಕು ಬಿಡಿ.]  
           ಹೆಜ್ಜೆ  ಮೂಡದ ಹಾದಿಯಲ್ಲಿ,"ಮಂಜು ಕರಗುವ ಮುನ್ನ ,ಪ್ರೀತಿ ಏನೆನ್ನಲಿ ನಿನ್ನ !!!!"
ಯಾರ್ಯಾರು ಬರ್ತಾರೋ ಗೊತಾಗ್ತಿಲ್ವಲ್ಲಾ !!!
ಕುಂ.ವೀ ಬಂದ್ರೂ, ಕುಂ. ವೀ. ಬಂದ್ರೂ  ದಾರಿ ಬಿಡಿ.
ಪ್ರಕಾಶಕರ  ಸ್ಟೈಲು ನೋಡಿ ಸ್ವಾಮೀ.!!!!
ಗಾದೆ  ಸಾಮ್ರಾಜ್ಯದ ಮಹಾರಾಣಿ  , ಯುವರಾಣಿ ಯೊಂದಿಗೆ !!!
 ಇಬ್ಬರು ಹೆಗ್ಡೆ ಗಳು  ಹಿಂಗೆ ಬಂದ್ರೆ ಹೆದರ್ಕೆ ಆಗಲ್ವಾ !!!!ಸರ್
ಪ್ರಕಾಶಣ್ಣ ಬಂದ ರಭಸಕ್ಕೆ ಹೆದರಿದ ಡಿ.ಜಿ.ಮಲ್ಲಿಕಾರ್ಜುನ್ 
ನಲ್ಲೆಯ ನೆನಪಿನಲ್ಲಿ ಸುಂದರ ಕನಸು !!!! ಸಧ್ಯದಲ್ಲೇ ಆಗುವುದು ನನಸು.
ದೊಡ್ಡಮನಿ ಮಂಜು ಕರಗಿದ ಸಮಯ!!!
ಒಳ್ಳೆ ಕಾಫಿ ಕುಡೀತಾ  ನಕ್ಕರೆ ಒಳ್ಳೆ ಮಜಾ !!! ಆಲ್ವಾ ಸತ್ಯನಾರಾಯಣ್ ಸರ್ ??
ಮಕ್ಕಳ ಪ್ರಾರ್ಥನೆ  ಗಣಪನಿಗೆ ಅರ್ಪಣೆ !!!
ನಿರೂಪಕರೆ ಬನ್ನಿ ನಿಮಗೆ ಸ್ವಾಗತ !!!
ಇನ್ನೂ ಯಾಕ ಬಲಿಲ್ಲವ್ವಾ  ಪುಸ್ತಕದವಾ  !!!
ಈ ದೀಪ ಹಚ್ಚಿದ ಗಳಿಗೆಯಲ್ಲಿ  ಮೂರೂ ಪುಸ್ತಕಗಳು ಪ್ರಸಿದ್ದಿಯಾಗಲಿ  !!!! ಅಂದ್ರೂ ಅತಿಥಿಗಳು .
ಯಾವ ಹಾಡ ಹಾಡಲಿ  ಎಂದಿದ್ದಾರೆ ಶಶಿಧರ್ ಕೋಟೆ!!!
ನಮ್  ಹುಡುಗನ  ಪುಸ್ತಕ ಕಣ್ರೀ !!!!
ಹುಚ್ಚು ಪ್ರೇಮದ ಹತ್ತಾರು ಕಥೆಗಳನ್ನು ಹೇಳಿದ  ರೂಪ .ಎಲ್.ರಾವ್.!!!! 
ವೇದಿಕೆಯಲ್ಲಿ  ಮಿಂಚಿದ ಪುಟ್ಟ ಬೊಂಬೆಗಳು  ಈ  ಮಕ್ಕಳು!!!!
ಮಕ್ಕಳೇ  ಈ ಹಣ್ಣುಗಳು ನಿಮಗೆ ಸೇರಬೇಕಾಗಿತ್ತು !!! ಆದರೂ ನನಗೆ  ಕೊಟ್ಟಿದ್ದೀರ  ಥ್ಯಾಂಕ್ಸ್.
 ಹೊಸ ಪುಸ್ತಕಗಳು ಇಲ್ಲಿವೆ ನೋಡಿ, ಆದ್ರೆ ಬಿಟ್ಟಿ ಓದಬೇಡಿ!!!!
ಫೋಟೋ ತೆಗೆಯಲು ಗುದ್ದಾಟ  ಇಲ್ಲಿ !!!!!
ಅದ್ಸರಿ,  ಇಲ್ಲೇನ್ ನಡೀತಿದೆ  ಅಂಕಲ್ ಅಂದ್ವು  ಈ ತುಂಟ ಮಕ್ಕಳು !!!
ಅಂತೂ ನಾನೂ ಒಂದ್ ಫೋಟೋ ತೆಗ್ದೆ  ಸರ್ !!! ಅಂದ್ರೂ ಇವರೂ .
ಈ ಸಾಹಿತ್ಯ ಇದ್ಯಲ್ಲಾ , ಒಂತರಾ ರುಚಿಯಾದ ಕಾಫಿ ಇದ್ದಹಾಗೆ !!!

ತುಂಬಾ ಖುಷಿ  ಆಗಿದೆ ಗೊತ್ತಾ!!!!!!
ಎಲ್ಲಿದ್ದೀಯ?? ಕಾಣಿಸ್ತಾ ಇಲ್ಲಾ!!!
ಈ ಬ್ಲಾಗು, ಫೋಟೋ, ಅಳಿಯಂದ್ರ ಕಾಟ ಎಲ್ಲಾ ಸಾಕಾಯ್ತು ಮಾರ್ರೆ !!!
ಕೋರಿಕೆ ಮೇರೆಗೆ ಮತ್ತೊಮ್ಮೆ ಬಿಡುಗಡೆ !!!!
"ಈ ಮಾತಲಿ ಏನೋ ಇದೆ" ಅಂತಾ ಭಾಷಣ ಕೇಳಿದ ಶಶಿ ಮೇಡಂ, ಅಜಾದ್, ಶಿವೂ 
ಬರೆಯೋಕಿಂತಾ ವೇದಿಕೆಯಲ್ಲಿ ಬಹಳ ಹೊತ್ತು  ಕುಳಿತು  ಮಾತಾಡೋದು ಕಷ್ಟಾ ಕಣ್ರೀ ಅಂದ್ರೂ ಅತಿಥಿಗಳು. !!!
ಕುಂ. ವಿ. ಮಾತಿನ ಲಹರಿ ಹೀಗಿತ್ತು !!!
ಈ ಐ.ಟಿ. ಮಂದಿನೂ ಚೆನ್ನಾಗೆ  ಸಾಹಿತ್ಯ ಕೃಷಿ ಮಾಡ್ತಾರೆ ರೀ!!!
ರಮೇಶ್ ಕಾಮತ್ ಸರ್ ಭಾಷಣ ವೈಭವ.
ನಮ್ಮ ಪುಟ್ಟ  ಸಂಸಾರ ಇದೆ ಸರ್  ಅಂದ್ರೂ ಪರಾಂಜಪೆ!!!!
ಅಲ್ಲೇನ್  ನಡೀತಾ ಇದೆ  ಗೊತ್ತಾಗ್ತಿಲ್ಲಾ !!!
ಅಂಕಲ್ ಪುಸ್ತಕ ಬಿಡುಗಡೆ ಅಂದ್ರೆ ಏನು???
ಹೋಗಿ ಅಂಕಲ್ ನನಗೇನೂ ಅರ್ಥಾ ಆಗ್ತಿಲ್ಲಾ !!!
ಅಂಕಲ್ ಎಲ್ರೂ ಯಾಕೆ ಬಂದಿದ್ದಾರೆ ಇಲ್ಲಿ???
 ನಂಗೆ ಅಂತಾ ಯಾವ್ದು ಪುಸ್ತಕ ಇಲ್ಲಿಲ್ವಾ???
ಎಲ್ಲೋದ್ಲು ನಮ್ಮ ಪುಟ್ಟೀ??  ಇದು ಉಮೇಶ್ ವಶಿಸ್ಟ್ ಸ್ಟೈಲು. !!!

Monday, August 15, 2011

ಈ ಹಳ್ಳಿ ಕಾಲೇಜಿನಲ್ಲಿ ಸದ್ದಿಲ್ಲದೇ ಸಾಗಿದೆ ಜ್ಞಾನ ಸಿಂಚನದ ರಥ !!!ಚಿಕ್ಕ ಗಣೇಶ , ಅಂಬಿಕ ಮೇಡಂ ತೋರುತ್ತಿದ್ದಾರೆ ಅದಕ್ಕೊಂದು ಪಥ!!!!!



"ಗೊಮಟಗಿರಿ  ಬೆಟ್ಟ "

ಕಳೆದ ಶನಿವಾರ ರಜಾದಿನವಾಗಿತ್ತು. ನಮ್ಮ ಸತ್ಯ ರವರು ಫೋನ್ ಮಾಡಿ , ಬಾಲಣ್ಣ ಫ್ರೀ ನಾ , ಅಂದ್ರೂ , ನಾನು ಯಾಕೆ ಸಾರ್?? ಅಂದೆ, ಇನ್ನರ್ಧ ಘಂಟೆಯಲ್ಲಿ ನಿಮ್ಮ ಮನೆಯಲ್ಲಿರುತ್ತೇನೆ ರೆಡಿ ಇರೀ , ಒಳ್ಳೆ ನೀರು ಬಂದಿದ್ಯಂತೆ  "ಚುಂಚನಕಟ್ಟೆ" ಗೆ ಹೋಗಿಬರೋಣ    ಅಂದ್ರೂ. ಕಟ್ ಮಾಡಿದ್ರೆ  ನಾವು ನನ್ನ ಆಕ್ಟಿವಾ ದಲ್ಲಿ  ಚುಂಚನಕಟ್ಟೆ  ಹಾದಿ ಹಿಡಿದಿದ್ದೆವು. ಮೋಡಗಳ ಮುಸುಕಿನ ವಾತಾವರಣದಲ್ಲಿ ಮಳೆರಾಯನ   ಕಣ್ಣಾ ಮುಚ್ಚಾಲೆ , "ಇಲವಾಲ" ಬರುತ್ತಿದಂತೆ  ಮಳೆರಾಯನ ಆಗಮನ ವಾಗಿತ್ತು. ಎಂತಾ ಕೆಲ್ಸಾ ಸರ್ ಏನ್ಮಾಡೋದು??? "ನನ್ನ ಬಳಿ ಜಾಕೆಟ್ ಇದೆ ನಿಮ್ಮ ಬಳಿ ಇಲ್ಲ ಮುಂದೆ ಹೋದ್ರೆ ನೀವು ಮಳೆಯಲ್ಲಿ ನೆನೆದು ತೊಪ್ಪೆ ಆಗ್ತೀರಿ" ಅಂದೇ. ಇರಿ ಬಾಲಣ್ಣ  ಅಂದಾ ಸತ್ಯ ಇಲ್ಲೇ ಹತ್ತಿರದಲ್ಲಿ ಎಲ್ಲಾದ್ರೂ ನೋಡದೆ ಇರೋಜಾಗಕ್ಕೆ ಹೋಗೋಣ ಅಂದ್ರೂ . ಆಗ ಹೊಳೆದದ್ದು  ಹತ್ತಿರದಲ್ಲೇ ಇದ್ದ ಜೈನ ಕ್ಷೇತ್ರ  "ಗೊಮಟಗಿರಿ"  
"ಸುಂದರ ಬಾಹುಬಲಿ ಮೂರ್ತಿ"
                   ತುಂತುರು ಮಳೆಯಲ್ಲೇ ಅಲ್ಲಿಗೆ ತಲುಪಿದೆವು. ಕೆಳಗಡೆ ಬೆಟ್ಟದ ತಪ್ಪಲಿನಲ್ಲಿ ನಮ್ಮನ್ನು ಸ್ವಾಗತ ಮಾಡಿದ್ದು  ಚಪ್ಪಲಿಗಳ ಸಾಲು ಸಾಲು. ಮಾಮೂಲಿನಂತೆ  ಅದೇ ಸಿಟಿ ಹೈಕಳು   ಪಿಕ್ನಿಕ್  ಗೆ ಬಂದಿರ್ತವೆ ಅಂತಾ  ಅನ್ಕೊಂಡು  ಬೆಟ್ಟ ಹತ್ತಲು  ಹತ್ತಿರ ಹೋಗುತ್ತಿದ್ದಂತೆ   ಶಂಕರ್  ಎನ್ನುವ  ಇತಿಹಾಸ ಪ್ರಾಧ್ಯಾಪಕರ ಪರಿಚಯವಾಯಿತು. ಇವರು ಸಹ ಖುಷಿಯಾಗಿ ಪರಿಚಯಮಾಡಿಕೊಂಡು  ಮೇಲೆ ಒಳ್ಳೆಯ ಕಾರ್ಯಕ್ರಮ ನಡೀತಿದೆ ಹೋಗಿ ಸಾರ್ ಅನ್ನುತ್ತಾ  ಹೊರಟರು  . ಬೆಟ್ಟ  ಏರಿದ  ನಮಗೆ  ದರ್ಶನ ನೀಡಿದ ಸುಂದರ ಬಾಹುಬಲಿ ಮೂರ್ತಿಯ ಜೊತೆಗೆ  ಒಂದು ಗುಂಪಿಗೆ  ಯಾರೋ ಸಾಹಿತ್ಯದ ಪಾಠ ಮಾಡುತ್ತಿರುವ ಹಾಗೆ ಅನ್ನಿಸಿ  ಪ್ರವೇಶ  ಮಾಡಿದೆವು. ಒಬ್ಬ ಹೆಣ್ಣುಮಗಳು  ತನ್ನ ಮುಂದೆ ಕುಳಿತ  ಹಲವು ಹುಡುಗ ಹುಡುಗಿಯರಿಗೆ  ಏನನ್ನೋ  ವರ್ಣಿಸುತಿದ್ದರು. ಹಾಗೆ ಒಳಗಡೆ ಹೋದ ನಾವು ಅಲ್ಲಿ ನಡೆಯುತ್ತಿರುವ  ಘಟನೆಯನ್ನು ಮೌನವಾಗಿ ವೀಕ್ಷಿಸಲು  ತೊಡಗಿದೆವು. ಅಲ್ಲಿ ಕಂಡಿದ್ದೆ ಇಂದಿನ ಸಂಚಿಕೆಯ ವಿಶೇಷ.

Sunday, August 7, 2011

ಕನ್ನಡ ನಾಡಿಗೆ ಅನರ್ಘ್ಯ ರತ್ನವ ಕೊಡುಗೆ ನೀಡಿದ ಈ ವಿದೇಶಿ ಕವಿ !!!!!!

ಮೊನ್ನೆ ಶ್ರೀ ರಂಗ ಪಟ್ಟಣಕ್ಕೆ ಹೋಗಿದ್ದೆ ಸ್ನೇಹಿತರೊಬ್ಬರು ಸಿಕ್ಕಿದರು  ಹಾಗೆ ಮಾತಾಡುತ್ತ ಅಚ್ಚರಿ ಹುಟ್ಟಿಸುವ ವಿಚಾರ ತಿಳಿಸಿದರು. ಮನೆಗೆ ಬಂದು ಜಾಲಾಡಿದಾಗ ಒಂದಷ್ಟು ವಿಚಾರ ತಿಳಿಯಿತು.  ಹೌದು ಕನ್ನಡ ನಾಡಿನ ಮಣ್ಣಿನ ಲಕ್ಷಣವೇ ಹಾಗೆ ಅನ್ಸುತ್ತೆ. ಯಾರೇ ವಿದೇಶಿಯರು ಬಂದರು ಕನ್ನಡ ತಾಯಿಯ ಮಡಿಲಿನ ಪ್ರೀತಿಗೆ ಮನಸೋತು ಇಲ್ಲಿಗೆ ಯಾವುದಾದರು ಮರೆಯದ ಕೊಡುಗೆ ನೀಡುತ್ತಾರೆ. ಅದು ಅಂದಿಗೂ ಇತ್ತು ಇಂದಿಗೂ ಇದೆ ಆದರೆ ಇಂತಹ ಮಹನೀಯರನ್ನು ಗುರುತಿಸಿ ನೆನೆಯುವಷ್ಟು  ಸಮಯ ಕನ್ನಡ ತಾಯಿಯ ಮಕ್ಕಳಾದ ನಮಗೆ ಇಲ್ಲಾ .ಬನ್ನಿ ಇಲ್ಲೊಬ್ಬ ಮಹನೀಯರನ್ನು ಪರಿಚಯ ಮಾಡಿಕೊಳ್ಳೋಣ.