Saturday, September 11, 2010

ಈ ಕನ್ನಡ ಹಾಡಿನಲ್ಲಿ ಪ್ರೀತಿಯ ಕವಿತೆ ಚಿತ್ತಾರದ ಚಿಲುಮೆಯಾಗಿ ನರ್ತಿಸಿದೆ.!!!

ನಾನು ಚಿಕ್ಕವನಾಗಿದ್ದಾಗಿನಿಂದಾಗ  ಈ ಹಾಡು ಕೇಳು ತಿದ್ದೇನೆ, ಈ ಹಾಡಿನಲ್ಲಿ ಏನೋ ವಿಶೇಷವಿದೆ.  1970 ರಲ್ಲಿ ಬಿಡುಗಡೆ ಯಾದ" ಕಸ್ತೂರಿ ನಿವಾಸ "ಚಿತ್ರದ ಈ ಹಾಡು ಆರ್ .ಎನ್.ಜಯಗೋಪಾಲ್  ಲೇಖನಿಯಿಂದ  ಹುಟ್ಟಿಬಂದಿದೆ. ಎಂತಹ ಅದ್ಭುತ ಸಾಹಿತ್ಯ ಪ್ರತಿ ಪದದಲ್ಲಿಯೂ ಸಭ್ಯತೆ ಮೀರದಂತೆ ಪ್ರೀತಿಯ ಮಧುರ ಕಾವ್ಯ ಹರಿದಿದೆ.ಈ ಪ್ರೀತಿಯ ಕವಿತೆಗೆ ಪಿ.ಬಿ.ಶ್ರೀನಿವಾಸ್ ಹಾಗು ಪಿ.ಸುಶೀಲ ಹಾಡುಗಾರಿಕೆ  ಮೆರುಗು ನೀಡಿದೆ. ಹಾಡುಗಾರರು ಯಾವುದೇ ಪದದಲ್ಲಿಯೂ ಅನರ್ಥ ವಾಗದಂತೆ ಹಾಡಿದ್ದಾರೆ. ಇನ್ನೂ ಸಂಗೀತ ಸಾಮ್ರಾಟ್   ಜಿ .ಕೆ.ವೆಂಕಟೇಶ್ ಸಂಗೀತದಲ್ಲಿ ಹೊಸತನ ವಿದೆ. ಈ ಹಾಡಿನ ರೆಕಾರ್ಡಿಂಗ್ ಗಮನಿಸಿ ಸಂಗೀತ ವಾಧ್ಯಗಳ ಹಾಗು ಹಾಡುಗಾರರ ಧ್ವನಿ ವಿಶೇಷವಾಗಿ ಕೇಳಿಸುತ್ತದೆ. ಅಂದಿನ ದಿನಕ್ಕೆ ಇದು ಸೂಪರ್ ಆಗಿತ್ತು. stereo ಸೌಂಡ್ ನ ಅದ್ಭುತ  ಅನುಭವ ಈ ಹಾಡಿನಲ್ಲಿ ಮೂಡಿಬಂದಿದೆ. ಕಪ್ಪು ಬಿಳುಪಿನ ಆ ಯುಗದಲ್ಲಿ ಚಿತ್ರೀಕರಣ ತುಂಬಾ ಸುಂದರವಾಗಿ ಮೂಡಿದೆ.ಈ ಹಾಡು ಹೀಗೆ ಇರಬೇಕಿತ್ತೂ ಅನ್ನಿಸದೆ ಇರಲಾರದು ಅಲ್ವ!!ಅದಕ್ಕೆ .ಇನ್ನೂ ಈ ಹಾಡಿನ ಕವಿತೆಯ ಚಿತ್ತಾರದ ಚಿಲುಮೆಗೆ ಶ್ರೀ ರಂಗ ಪಟ್ಟಣ  ತಾಲೂಕಿನ ಕೆ.ಅರ.ಎಸ ಡ್ಯಾಮಿನ ಚಿಲುಮೆಗಳು ಡಾ// ರಾಜ್ ಕುಮಾರ್ ಹಾಗು ಆರತಿ ಜೊತೆಗೆ  ನಟಿಸಿ ನರ್ತಿಸಿವೆ. ಯಾವುದೇ ಪ್ರೇಮಿಗಳ ಮುಂದೆ ಈ ಹಾಡನ್ನು ಹಾಕಿನೋಡಿ ಅವರಿಗೆ ಇದು ತಮ್ಮದೇ ಹಾಡು ಅನ್ನಿಸದಿರದು.ಇಂತಹ ಸಮ್ಮಿಲನದ ಹಾಡು ಇಂದಿಗೂ ಪ್ರೇಮಿಗಳ ಮನಸಿನಲ್ಲಿ ಹಸಿರಾಗಿ , ಮೊಬೈಲಿನ ಎಸ.ಎಂ.ಎಸ.ಗಳಾಗಿ ಹರಿದಾಡಿವೇ. ಬನ್ನಿ ಒಮ್ಮೆ ಹಾಡನ್ನು ನೋಡುತ್ತಾ ಕೇಳುವ.

Friday, September 10, 2010

ನಿಮ್ಮೊಳಗೊಬ್ಬ ನಿಂದ ಸ್ವರ್ಣ ಗೌರಿ ಹಾಗು ಚೌತಿ ಗಣಪತಿ ಹಬ್ಬದ ಶುಭಾಶಯಗಳು.!!!!

   ನನ್ನ ಪ್ರೀತಿಯ ಎಲ್ಲಾ ಬ್ಲಾಗ್ ಮಿತ್ರರಿಗೆ ಹಾಗು ಅವರ ಕುಟುಂಬಕ್ಕೆ ಸ್ವರ್ಣ ಗೌರಿ ಹಾಗು ಬಾದ್ರಪದ ಶುಕ್ಲ ಚೌತಿಯ ಗಣಪತಿ ಹಬ್ಬದ ಶುಭಾಶಯಗಳು.ತಮಗೆ ಹಾಗು ಎಲ್ಲರಿಗೂ ಶುಭವಾಗಲಿ ಎಂದು ಹೃದಯ ಪೂರ್ವಕವಾಗಿ ಶುಭಾಶಯ   ಅರ್ಪಿಸುವ    ಪ್ರೀತಿ ಇಂದ .........ಗಮನಿಸಿ ಬಣ್ಣದ ಗಣಪತಿ ಬದಲಾಗಿ ಪರಿಸರ ಸ್ನೇಹಿ ಗಣಪತಿ ಪೂಜಿಸಿ ಧನ್ಯರಾಗಿ ಎಂದು ಕೋರುವ .......ನಿಮ್ಮ ವಿಶ್ವಾಸಿ... ನಿಮ್ಮೊಳಗೊಬ್ಬ ಬಾಲು 

Thursday, September 9, 2010

ಹೀಗೊಂದು ಕಾಡುವ ಹಳೆ ಸಿನಿಮಾ.!!!ನೀವು ನೋಡಿಲ್ಲವೇ???The Sound of Music- The Lonely Goatherd

ನನಗೆ ಬೇಜಾರಾದಾಗ ಬಹಳ ಅಪರೂಪಕ್ಕೆ ಕೈಗೆ ಸಿಕ್ಕಿದ ಯಾವುದಾದರೂ ಅಪರೂಪದ ಸಿನಿಮಾ ನೋಡುವುದು ವಾಡಿಕೆ. ಇತ್ತೀಚಿಗೆ ಹೀಗೆ ಆಕಸ್ಮಿಕವಾಗಿ ಸಿಕ್ಕ ಒಂದು ಅಪರೂಪದ ಚಲನ ಚಿತ್ರವೇ 'the sound of music" 1965 ರಲ್ಲಿ ತೆರೆ ಕಂಡ ಈ ಚಿತ್ರ ವಿಶ್ವಾದ್ಯಂತ ಜನ ಮನ ಸೂರೆಗೊಂಡು ಐದು ಆಸ್ಕರ್ ಪ್ರಶಸ್ತಿ ಬಾಚಿಕೊಂಡಿತು. ಈ ಚಿತ್ರ ಮಾಡಿದ ದಾಖಲೆ ಅಪಾರ.ಈ ಚಿತ್ರ ಚಿತ್ರೀಕರಣ ಗೊಂಡ ಆಸ್ತ್ರೀಯ ದೇಶದ ಹಲವು ಸುಂದರ ಜಾಗಗಳು ಇಂದಿಗೂ ಪ್ರವಾಸಿಗಳನ್ನು ಸೆಳೆಯುತ್ತಲೇ ಇವೆ.ಬಹುಷಃ ಈ ಚಿತ್ರದ ಸಂಗೀತವನ್ನು ಅನುಕರಿಸದ /ಕಾಪಿ ಮಾಡದ ಚಿತ್ರರಂಗವೇ ವಿಶ್ವದಲ್ಲಿ ಇಲ್ಲವೇನೋ ಎಂಬಷ್ಟು ಈ ಚಿತ್ರದ ಹಾಡುಗಳ ಸಂಗೀತ ಇಂದಿಗೂ ನಲಿದಿದೆ. ಇಂತಹ ಒಂದು ಚಿತ್ರ ಸಂಗೀತ ಪ್ರಧಾನವಾಗಿ , ಪ್ರತೀ ಕಲಾವಿದರ ನೈಜ ನಟನೆಯಿಂದ ಬಹು ಕಾಲ ನೆನಪಿನಲ್ಲಿ ಉಳಿಯುತ್ತದೆ. ನೀವೂ ಈ ಚಿತ್ರವನ್ನು ನೋಡಿಲ್ಲವೇ ಹಾಗಿದ್ದರೆ ಕೂಡಲೇ ನಿಮ್ಮ ಮನೆಯ ಸಮೀಪವಿರುವ ಸಿ.ಡೀ. ಪಾರ್ಲರ್ ಗೆ ಹೋಗಿ ತಂದು ನೋಡಿ. ಒಳ್ಳೆಯ ಚಿತ್ರ ನೋಡಲು ಯಾರ ಹಂಗು ಏಕೆ ಬೇಕು ಅಲ್ವ.!!! ಬನ್ನಿ ಕೆಲವು ಹಾಡುಗಳು ನಿಮಗಾಗೀಲ್ಲಿವೆ ನೋಡೋಣ ಬನ್ನಿ.[ನಮ್ಮಲೂ ಸಂಗೀತ ಪ್ರಧಾನ ಚಿತ್ರಗಳಾದ ಉಪಾಸನೆ, ಹಂಸಗೀತೆ,ಆನಂದ ಭೈರವಿ ಮುಂತಾದ ಚಿತ್ರಗಳು ಯಶಸ್ವಿಯಾಗಿರುವುದು ನಮ್ಮ ನೆನಪಿನಲ್ಲಿ ಉಳಿಯುತ್ತದೆ ] ಈ ಚಿತ್ರ ನನ್ನ ಮನದಲ್ಲಿ ಬಹುಕಾಲ ನಿಂತು ಈ ಲೇಖನವಾಗಿ ಹೊಮ್ಮಿಬಂದಿದೆ.!!! ಬನ್ನಿ ನಿಮಗೆ ಸಂಗೀತದ ರಸದೌತಣ ಕಾದಿದೆ.

Friday, September 3, 2010

ಶ್ರೀ ರಂಗ ಪಟ್ಟಣದ ರಾಕೆಟುಗಳು ಹಾಗು ಅದರ ತಂತ್ರ ಜ್ಞಾನ ವಿದೇಶಿಯರನ್ನು ಬೆಚ್ಚಿ ಬೀಳಿಸಿ ಅಚ್ಚರಿ ಗೊಳಿಸಿದ್ದವು !!!!

ಹೌದು ಸ್ವಾಮೀ ಶ್ರೀ ರಂಗ ಪಟ್ಟಣದಲ್ಲಿ ಶತ್ರುಗಳನ್ನು ಎದುರಿಸಲು ಪ್ರಥಮ ಭಾರಿಗೆ ಯುದ್ದದಲ್ಲಿ ರಾಕೆಟುಗಳನ್ನು ಉಪಯೋಗಿಸಲಾಯಿತು. ಇದು ಆಂಗ್ಲರನ್ನು ಬೆಚ್ಚಿ ಬೀಳಿಸಿತ್ತು.ವಿಶ್ವದಲ್ಲಿ ಎಲ್ಲೂ ಇಂತಹ ಪ್ರತಿರೋದ ತೋರಿಸುವ ರಾಕೆಟುಗಳನ್ನು ಆಂಗ್ಲರು ಕಂಡಿರಲಿಲ್ಲ.ಯುದ್ದದಲ್ಲಿ ಮೇಲೆರಗಿದ ರಾಕೆಟುಗಳು ಅಪಾರ ಪ್ರಮಾಣದ ಹಾನಿಯನ್ನು ಶತ್ರುಗಳಿಗೆ ಮಾಡಿದ್ದವು. ಇದರ ತಂತ್ರಜ್ಞಾನದ ಬಗ್ಗೆ ತಲೆಕೆಡಿಸಿಕೊಂಡ ಆಂಗ್ಲರು 1799 ರಲ್ಲಿ ಶ್ರೀ ರಂಗ ಪಟ್ಟಣ ಪತನದ ನಂತರ ಶ್ರೀ ರಂಗ ಪಟ್ಟಣದ ರಾಕೆಟುಗಳ ತಂತ್ರ ಜ್ಞಾನದ ಬಗ್ಗೆ ಅಧ್ಯಯನ ನಡೆಸಿದರು ನಂತರ ಇದನ್ನು ತಾವು ವಿಶ್ವದಲ್ಲಿ ನಡೆಸಿದ ಇತರ ಯುದ್ದಗಳಲ್ಲಿ ಅಳವಡಿಸಿಕೊಂಡರು ಅಮೆರಿಕಾದ ನಾಸಾ ದಲ್ಲಿಯೂ ಸಹ ಈ ಬಗ್ಗೆ ಮಾಹಿತಿ ಕಂಡಿದ್ದಾಗಿ ಮಾಜಿ ರಾಷ್ಟ್ರಪತಿಗಳಾದ ಶ್ರೀ ಅಬ್ದುಲ್ ಕಲಾಮ್ ರವರೂ ತಮ್ಮ" wings of fire " ನಲ್ಲಿಯೂ ಉಲ್ಲೇಖಿಸಿದ್ದಾರೆ.ಅದೇರೀತಿ " history t .v . ನವರು ಬ್ರಿಟೀಶ್ ವಿಜ್ಞಾನಿಗಳು ಶ್ರೀ ರಂಗ ಪಟ್ಟಣದ ರಾಕೆಟುಗಳ ಬಗ್ಗೆ ನಡೆಸಿದ ಒಂದು ಅಧ್ಯಯನದ ಮಾಹಿತಿಯನ್ನು ನೀಡಿದ್ದಾರೆ. ಬನ್ನಿ ನೋಡಿ ನಮ್ಮ ದೇಶದಲ್ಲಿ ಹುಟ್ಟಿದ ಒಂದು ತಂತ್ರಜ್ಞಾನದ ಮಹಿಮೆಯ.ಇನ್ನೂ ಹೆಚ್ಚಿನ ಮಾಹಿತಿಗೆ http://www.answers.com/topic/congreve-rocket ನೋಡಬಹುದು.

ಗುದ್ದಿಗೊಂದು ಸುದ್ದಿ: The Majestic Plastic Bag - A Mockumentary ಪ್ರತಿ...

ಗುದ್ದಿಗೊಂದು ಸುದ್ದಿ: The Majestic Plastic Bag - A Mockumentary ಪ್ರತಿ...: " ಹಾಗೆ ಯೂ ಟ್ಯೂಬ್ ನಲ್ಲಿ ಜಾಲಾಡುತ್ತಿದ್ದಾಗ ಈ ವೀಡಿಯೊ ಸಿಕ್ಕಿತು . ತುಂಬಾ ಅರ್ಥ ಭರಿತವಾದ ಇದನ್ನು ಎಲ್ಲಾ ಬ್ಲಾಗಿಗರು ನೋಡಿದರೆ ಹಾಗು ಪ್ಲಾಸ್ಟಿಕ್ ಬಳಕೆ ನಿಲ್ಲಿ..."

Wednesday, September 1, 2010

ಒಮ್ಮೆ ನಮ್ಮನ್ನು ಕ್ಷಮಿಸಲಾರೆಯ ಸಹೋದರಿ !!! ನಾವು ನಾಗರೀಕರು ???

ಅಂದು ಮುಂಜಾನೆ ಸುಮಾರು ಆರು ಗಂಟೆ ಇರಬಹುದು. ನಮ್ಮ ಮನೆಯ ಮೇಲಿನ ಚಾವಣಿ ಏರಿಹಕ್ಕಿಗಳ ಚಿತ್ರ ತೆಗೆಯಲು ಸಿದ್ದತೆ ನಡೆಸಿದ್ದೆ.ಯಾಕೋ ಕಾಣೆ ನನಗೆ ಅರಿವಿಲ್ಲದೆ ಮನೆಯ ಸಮೀಪ ವಿರುವ ಬಸ್/ಆಟೋ ನಿಲ್ದಾಣ ದ ಕಡೆ ನನ್ನ ಕ್ಯಾಮರ ಹೊರಳಿತು.ಯಾರೋ ಪಾಪ ಮಹಿಳೆ ಒಬ್ಬರು ಬೀದಿಯಲ್ಲಿ ತನ್ಮಯತೆ ಇಂದ ಪಟ್ಟಣದ ನಾಗರೀಕರು ??
  ರಸ್ತೆ ಬದಿಯಲ್ಲಿ ಚೆಲ್ಲಾಡಿದ್ದ  ಕಸವನ್ನು ಉದ್ದನೆಯ ಬರಲಿನಿಂದ ಒಟ್ಟುಮಾಡಿ ಸಂಗ್ರಹ ಮಾಡುತ್ತಿದ್ದರು.ಆ ಕಸದಲ್ಲಿ ನಾವುಗಳು ಏನನ್ನು ಬಿಸಾಕಿರಬಹುದೆಂಬ ಬಗ್ಗೆ ಯೋಚಿಸಿದೆ  ಅದರಲ್ಲಿ ಬೀಡಿ,ಸಿಗರೇಟು  ತುಂಡುಗಳು,ಪ್ಲಾಸ್ಟಿಕ್ ಕವರುಗಳು,ಪಾನಿಪುರಿ ತಿಂದ  ಗ್ರಾಹಕರು ಉಗಿದ ಪದಾರ್ಥಗಳು,ಹಾಗು ಬೀದೀ ಬದಿಯ ಮಾರಾಟಗಾರರು ಚೆಲ್ಲಾಡಿದ ತರಕಾರಿ ,ತಿಂಡಿ, ಇದರ ಮಧೆ,ಪಾನ್ ತಿಂದು ಉಗಿದ ಚೂರುಗಳು, ಹಳೆ ಕಾಗದದ ಚೂರುಗಳು  ನಾಯಿ ಮುಂತಾದ ಪ್ರಾಣಿಗಳ ಮಲ , ಇನ್ನೂ ಇಲ್ಲಿ ಬರೆಯಲು ಆಗದಷ್ಟು ಕಸದ ವಿವಿದ ಪದಾರ್ಥಗಳು.ಸ್ವಲ್ಪ ಕೈ ಕೊಳೆ ಯಾದರೂ ಹ್ಯಾಂಡ್ ವಾಶ್ ಬಳಸಿ ಕ್ರಿಮಿ ಮುಕ್ತ ವಾಗುವ ನಾವು ನಾಗರೀಕ ಪ್ರಪಂಚದಲ್ಲಿ ಇವರ ಆರೋಗ್ಯದ ಕಡೆ ಗಮನ ಹರಿಸಿಲ್ಲವೆಂದು ತೋರಿ ನನಗೆ ನಾಚಿಕೆಯಿಂದ  ಮನ ಕರಗಿತು.ಮೇಲೆ ಹೇಳಿದ ಎಲ್ಲ ರೀತಿಯ ಕಸವನ್ನು ಪಾಪ ಈ ಮಹಿಳೆ ತನ್ನ ಕೈ ನಿಂದ ಸ್ವಲ್ಪವೂ ಅಸಹ್ಯ ಪಡದೆ ತಾಳ್ಮೆಯಿಂದ ತಾನು ತಂದಿದ್ದ ಬುಟ್ಟಿ ಯಲ್ಲಿ ಹಾಕಿಕೊಳ್ಳುತ್ತಿದ್ದರು[.ಆರೋಗ್ಯದ ಬಗ್ಗೆ ಅವರಿಗೆ ಅರಿವಿರಲಿಲ್ಲ ಕನಿಷ್ಠ ಅವರಿಗೆ ಕೈಗೆ ಗ್ಲವಸನ್ನಾದರೂ ನೀಡಬೇಕಾಗಿತ್ತು !!!]ನಾಗರೀಕ ಪ್ರಪಂಚ ಇದರ ಅರಿವಿಲ್ಲದೆ ಸಿಹಿ ನಿದ್ದೆಯಲ್ಲಿ ವಿಹರಿಸುತ್ತಿತ್ತು.ಅದಿರಲಿ ಸಮಾಜವನ್ನು ಉದ್ದಾರ ಮಾಡುತ್ತೇವೆಂದು ಬೊಬ್ಬೆ ಹೊಡಿಯುವ ಹಲವಾರು  ಸ್ವಯಂ ಸೇವಾ ಸಂಸ್ಥೆ ಗಳು ಇಂತಹವರ ಬಗ್ಗೆ ಯೋಚಿಸುವುದಿಲ್ಲ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಗದೇ ನಿರಾಶನಾಗಿ ಮನದಲ್ಲಿ" "ಸಹೋದರಿ ನಮ್ಮ ನಾಗರೀಕ???? ಸಮಾಜವನ್ನು ಒಮ್ಮೆ ಕ್ಷಮಿಸಿಬಿಡು" ಎಂದು ಕೊಂಡೆ. ನೀವೇನಂತೀರಾ ???

Friday, August 27, 2010

ಆಸ್ಟ್ರೇಲಿಯಾ ಖಂಡದ ಸಮೀಪ ಶ್ರೀರಂಗಪಟ್ಟಣ[seringapattam ] ದ್ವೀಪ !!!



ಆಸ್ಟ್ರೇಲಿಯ ದಿಂದ ಪಶ್ಚಿಮಕ್ಕೆ ಹಿಂದೂ ಸಾಗರದಲ್ಲಿ ನೆಲೆಗೊಂಡ  seringapattam  ದ್ವೀಪ [ಕನ್ನಡಿಗರ ಹೆಮ್ಮೆ]
ಈ ಕನ್ನಡ ನಾಡಿನ ಕೀರ್ತಿಪತಾಕೆ  ಹಿಂದೂ ಮಹಾ ಸಾಗರದಲ್ಲಿ ನೆಲೆಸಿರುವುದು ಹೀಗೆ.
ನಮಸ್ಕಾರ ಬನ್ನಿ ಈ ಸಂಚಿಕೆಯಲ್ಲಿ ನಿಮಗೆ ಒಂದು ಆಶ್ಚರ್ಯಕರ ವಿಚಾರ ತಿಳಿಸಿಕೊಡುತ್ತೇನೆ. ನಮಗೆಲ್ಲಾ ಗೊತ್ತು  ಕರ್ನಾಟಕದ ಮಂಡ್ಯ ಜಿಲ್ಲೆಯ ಒಂದು ಸಣ್ಣ ತಾಲೂಕು ಶ್ರೀರಂಗಪಟ್ಟಣ ಇತಿಹಾಸ ಪ್ರಸಿದ್ದ ಅಂತ.ಈ ಊರನ್ನು ಹಿಂದೆ ಆಂಗ್ಲರು serigapattam  ಅಂತಾನು ಕರೀತಿದ್ರು.ಈಗ ನೋಡಿ ಆಸ್ಟ್ರೇಲಿಯ ದೇಶದ ಪಶ್ಚಿಮ ದಿಕ್ಕಿಗೆ ಸಮೀಪ ಒಂದು ಕೊರಾಲ್ ದ್ವೀಪಕ್ಕೆ seringapattam ಅಂತಾ ಹೆಸರಿಟ್ಟು ಕನ್ನಡ ನಾಡಿನ ಈ ಊರಿನ ಹೆಸರು ಮೆರೆಯುವಂತೆ ಮಾಡಲಾಗಿದೆ. ಅಂತರ್ಜಾಲ ಜಾಲಾಡಿದಾಗ ಈ ಹಿಂದೆ  ಟಿಪ್ಪೂ ಸುಲ್ತಾನ್ ಕಾಲದಲ್ಲಿ ನಡೆದ ಮೈಸೂರಿನ ಅಂತಿಮ ಯುದ್ದ [೧೭೯೯] ದಲ್ಲಿ ಭಾಗವಹಿಸಿ ನಂತರ ಆಸ್ತ್ರೆಲಿಯಗೆ ತೆರಳಿದ ಸ್ಕಾಟ್ ಕುಟುಂಬ ಒಂದು ಈ ದ್ವೀಪವನ್ನು ಖರೀದಿಸಿಶ್ರೀ  ರಂಗ ಪಟ್ಟಣದಲ್ಲಿ ನಡೆದ ಅಂತಿಮ ಕಾಳಗದ ನೆನಪಾಗಿ ಆ ದ್ವೀಪಕ್ಕೆ seringapattam  ಅಂತಾ ಹೆಸರನ್ನು ನಾಮಕರಣ ಮಾಡಿ,ಸಂಭ್ರಮಿಸಿದೆ.ಬಹುಷಃ ಈ ದೇಶದ ಯಾವುದೇ ಊರಿನ /ಪಟ್ಟಣದ ಬಗ್ಗೆ ಇಂಥಹ ಘಟನೆ ಇರುವುದಿಲ್ಲ .ಬನ್ನಿ ಇದರ ಬಗ್ಗೆ ಕೆಲವು ಚಿತ್ರಗಳನ್ನು ಅಂತರ್ಜಾಲ  ಕೃಪೆ  ಇಂದ  ನಿಮಗಾಗಿ ಕೆಲವು ಚಿತ್ರಗಳನ್ನು ಡೌನ್ ಲೋಡ್ ಮಾಡಿದ್ದೇನೆ ನೋಡಿಬಿಡೋಣ ಬನ್ನಿ
ಉಪಗ್ರಹ ಚಿತ್ರ ದಲ್ಲಿ ಸೇರಿಂಗ ಪಟ್ಟಂ [ಶ್ರೀ ರಂಗ ಪಟ್ಟಣ ]ದ್ವೀಪ ಕಾಣುವುದು ಹೀಗೆ!!
   
ದ್ವೀಪದ ಮತ್ತೊಂದು ಸುಂದರ ನೋಟ .
Scott and Seringapatam Reefs is a group of atoll-like reefs in the Timor Sea more than 300 km northwest of Cape Leveque, Western Australia, on the edge of the continental shelf. There are three or four separate reef structures, depending on whether Scott Reef Central is counted separately. The group is just one of a number of reef formations off the northwest coast of Australia and belongs to Western Australia. Further to the northeast are Ashmore and Cartier Islands, and to the southwest are the Rowley Shoals......................................................