Sunday, July 3, 2011

ಬಿ.ಆರ್ .ಹಿಲ್ಸ್ . ಅಂದ್ರೆ ಡಾಕ್ಟರ್ ಸುದರ್ಶನ್ ನೆನಪಿಗೆ ಬರ್ತಾರೆ!!!!! ಪಯಣ ..5

ಡಾಕ್ಟರ್ ಸುದರ್ಶನ್
ನಮ್ಮಲ್ಲಿ   ಬಹಳಷ್ಟು ಜನ ಡಾಕ್ಟರ್ ಗಳು ಇದ್ದಾರೆ ಅವರು ತಮ್ಮದೇ ದಾರಿಯಲ್ಲಿ ನಡೆದು ಜಗತ್ತಿಗೆ ಸೇವೆಸಲ್ಲಿಸಿ ನಕ್ಷತ್ರಗಳಾಗಿ ಪ್ರಕಾಶಿಸುತ್ತಾರೆ. ಅಂತಹ ಒಬ್ಬ ವ್ಯಕ್ತಿ ಬಿಳಿಗಿರಿ ರಂಗನ ಬೆಟ್ಟದಲ್ಲಿ ಕಂಡುಬರುತ್ತಾರೆ . ರಾಮಕೃಷ್ಣ ಪರಮಹಂಸ ಹಾಗು ವಿವೇಕಾನಂದರ  ಪ್ರಭಾವಕ್ಕೆ ಒಳಗಾಗಿ ಕಾಡಿನಲ್ಲಿ ನೆಲೆಸಿ  ಕಾನನದ ಮಕ್ಕಳಿಗೆ ದಾರಿ ದೀಪವಾಗಿ  ಅವರ ಜೊತೆಯೇ ನೆಲೆಸಿ ಕಾನನ ಸುಮವಾಗಿ ಸುವಾಸನೆ ಬೀರಿದ್ದಾರೆ. ಅವರೇ ಡಾಕ್ಟರ್ ಸುದರ್ಶನ್.ಬನ್ನಿ ಇವರ ಬಗ್ಗೆ ತಿಳಿಯೋಣ.  ಡಾಕ್ಟರ್ ಸುದರ್ಶನ್ ಹುಟ್ಟಿದ ಊರು ಬೆಂಗಳೂರು ಸಮೀಪದ ಹೊರವಲಯದ ಯೆಮಲೂರು ಗ್ರಾಮದಲ್ಲಿ 1950 ರ ಡಿಸೆಂಬರ್  30 ರಂದು ಜನಿಸಿದ್ದಾರೆ. ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿ 1973 ರಲ್ಲಿ ಡಾಕ್ಟರ್ ಆಗಿ ಹೊರಬರುತ್ತಾರೆ .ಆನಂತರ ರಾಮಕೃಷ್ಣ ಮಿಶನ್ ಸೇರಿ ಅಲ್ಲಿ ಸೇವಾಭಾವದಿಂದ  ಕಾರ್ಯ ನಿರ್ವಹಿಸುತ್ತಾರೆ. ವಿವಿಧ ಹಂತದಲ್ಲಿ ಕರ್ತವ್ಯ ನಿರ್ವಹಿಸಿ  
1981  ರಲ್ಲಿ ಬಿಳಿಗಿರಿ ರಂಗನ ಬೆಟ್ಟಕ್ಕೆ ಬಂದು ನೆಲೆಸಿ "ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ"  ಸ್ಥಾಪಿಸಿ ನೆಲೆಸುತ್ತಾರೆ. ಗಿರಿಜನರ ಸೇವೆ ಮಾಡುವ ಬಗ್ಗೆ ಆಸಕ್ತಿಯಿಂದ ಶ್ರಮ ವಹಿಸಿ ಗಿರಿಜನರ ಮನೆ ಬಾಗಿಲಿಗೆ ವೈಧ್ಯಕೀಯ ಸೌಲಭ್ಯ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಂಡು ಉತ್ಸಾಹಿ ವೈಧ್ಯರ ಒಂದು ತಂಡ ರಚಿಸಿ  ಯಶಸ್ವಿಯಾದರು 1986 ರಲ್ಲಿ ಕರುಣಾ ಟ್ರಸ್ಟ್ ಸ್ಥಾಪಿಸಿ  ಗ್ರಾಮೀಣಾಭಿವೃದ್ಧಿ  ಕಾರ್ಯಗಳನ್ನು ಹಮ್ಮಿಕೊಂಡು ಗಿರಿಜನರ ಶ್ರೇಯೋಭಿವೃದ್ಧಿಗೆ  ನಾಂದಿ ಹಾಡಿದರು. ಗಿರಿಜನರ ಹಾಡಿಯಲ್ಲಿ  ಇವರು ರೂಪಿಸಿದ ಕಾರ್ಯಕ್ರಮಗಳು  ಕರುಣಾಳು ವಾಗಿ ಬಂದ ಬೆಳಕಿನಂತೆ  ಬೆಳಕಾಗಿ ಗಿರಿಜನರ ಮುಖದಲ್ಲಿ ಮಂದಹಾಸ ಮೂಡಿಸಲು ಸಫಲವಾಯಿತು .   
  ಗಿರಿಜನರ ಹಾಡಿಯಿಂದ "ಜಡಿಯಾ" ಎಂಬ ಹುಡುಗ ಮೊದಲ ಪಧವೀಧರನಾಗಿ  ಹೊಮ್ಮಿ  ಇತಿಹಾಸ ಸೃಷ್ಟಿಸಿದ. ಇವರ ಕಾರ್ಯಕ್ರಮಗಳ  ಕೀರ್ತಿ ಕಾಡಿನ ಮಧ್ಯದಿಂದ ಹೊರಜಗತ್ತಿಗೆ  ತಿಳಿಯಲು ತಡವಾಗಲಿಲ್ಲ. ಬೆರಗುಗಣ್ಣಿನಿಂದ  ನೋಡಿ ಇವರ ಕಾರ್ಯಕ್ಕೆ ಬೆನ್ನುತಟ್ಟಿ ಹಲವಾರು ಪ್ರಶಸ್ತಿಗಳನ್ನು ಇವರಿಗೆ  ನೀಡಿ  ಸಮಾಜ ಹರ್ಷಿಸಿತು. 1984 ರಲ್ಲಿ  ರಾಜ್ಯಸರ್ಕಾರ  ರಾಜ್ಯೋತ್ಸವ ಪ್ರಶಸ್ತಿ, ನೀಡಿದರೆ ,  ಪ್ರತಿಷ್ಟಿತ "ರೈಟ್ ಲೈವ್ಲಿ ಹುಡ್" ಪ್ರಶಸ್ತಿಯ ಗರಿ 1994 ರಲ್ಲಿ  ಸಂದಿತು ಹಾಗು ಕೇಂದ್ರ ಸರ್ಕಾರ 2000 ರಲ್ಲಿ  "ಪಧ್ಮಶ್ರೀ" ನೀಡಿ ಸತ್ಕರಿಸಿತು.   ಆದರೆ ಈ ಕಾನನದ ಕುಸುಮ ತನ್ನ ಸುವಾಸನೆ ಬೀರುವ ಕೆಲಸ ಮಾಡುತ್ತಾ  ತನ್ನ ಪಾಡಿಗೆ ತಾನು  ಬಿಳಿಗಿರಿ ಕಾಡಿನಲ್ಲಿ ನಳನಳಿಸಿ ನಗುತ್ತಲೇ ಇದೆ. ನೀವು ಬಿ. ಆರ್. ಹಿಲ್ಲ್ಸ್ ಗೆ ಬಂದರೆ ನೋಡಲೇಬೇಕಾದ ಒಂದು ತಾಣ ಇದು.                                                                                                                                                                                                ಈ ಕಾಡಿನ ಕುಸುಮಕ್ಕೆ ಒಂದು ಸಲಾಂ ಹೇಳೋಣ ಅಲ್ಲವೇ. ......!!!! ಮುಂದಿನ ಸಂಚಿಕೆಯಲ್ಲಿ  ಮತ್ತೆ ಭೇಟಿಮಾಡೋಣ ನಮಸ್ಕಾರ. [ ಈ ಲೇಖನದಲ್ಲಿ ಉಪಯೋಗಿಸಿರುವ ಚಿತ್ರಗಳನ್ನು ಅಂತರ್ಜಾಲದಿಂದ  ಕೃತಜ್ಞತಾ ಪೂರ್ವಕವಾಗಿ ಪಡೆಯಲಾಗಿದೆ.]


--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

11 comments:

ಅನಂತ್ ರಾಜ್ said...

ಮನಮುಟ್ಟಿದ ಮಾಹಿತಿ.. ಬಾಲು ಸರ್. ಸಹೃದಯತೆ, ಸೃಜನಶೀಲತೆ ಎಲ್ಲವೂ.. ಹೊ೦ದಿರುವ ಏಕೈಕ ವ್ಯಕ್ತಿ ಅಪರೂಪ.
ಅಭಿನ೦ದನೆಗಳು.

ಅನ೦ತ್

Dr.D.T.Krishna Murthy. said...

ಡಾ.ಸುದರ್ಶನ್ ಒಬ್ಬ ಅಪರೂಪದ ವ್ಯಕ್ತಿ.ಅಂತಹವರ ಪರಿಚಯ ಮಾಡಿಕೊದುತ್ತಿರುವುದಕ್ಕೆ ಅನಂತ ಧನ್ಯವಾದಗಳು ಬಾಲೂ ಸರ್.ನಮಸ್ಕಾರ.

sunaath said...

ಡಾ|ಸುದರ್ಶನ ಅವರಿಗೆ ನೂರು ಸಲಾಮ್!

ಸುಬ್ರಮಣ್ಯ said...

ಕರುಣಾ ಟ್ರಸ್ಟ್ ಶೃಂಗೇರಿ ಪಕ್ಕದ ಒಂದು ಊರಿನಲ್ಲಿ ಪಿ. ಹೆಚ್.ಸಿ ವಹಿಸಿಕೊಂಡಿದ್ದಾರೆ. ಆದರೆ ಸಿಬ್ಬಂದಿಗೆ ಸರಿಯಾಗಿ ಸಂಬಳ ಕೊಡೋಲ್ಲಾ. ಡಾಕ್ಟರ್ ಪದೇ ಪದೇ ಬದಲಾಗ್ತಿರ್ತಾರೆ. ಆ ಊರಲ್ಲಿ ಒಳ್ಳೇ ಹೆಸರು ಇಲ್ಲ!!

ಸೀತಾರಾಮ. ಕೆ. / SITARAM.K said...

nice intgroduction

ಗಿರೀಶ್.ಎಸ್ said...

ಎಷ್ಟೋ ಮಿಶನರಿಗಳು ತಮ್ಮ ಧರ್ಮಕ್ಕೆ ಮತಾಂತರ ಮಾಡಲು ಗಿರಿಜನರಿಗೆ ಆಸೆ ಆಮಿಷ ವಡ್ಡಿದರೆ ಡಾ||ಸುದರ್ಶನ್ ಅವರು ನಿಷ್ಕಲ್ಮಶವಾಗಿ ನಿಸ್ವಾರ್ಥವಾಗಿ ಅವರ ಸೇವೆಯನ್ನು ಮಾಡಿದ್ದಾರೆ ಮತ್ತು ಎಷ್ಟೋ ಗಿರಿ ಜನರ ಬಾಳಿಗೆ ದಾರಿ ದೀಪವಾಗಿದ್ದರೆ...ನಿಜಕ್ಕೂ ಅವರ ಸೇವೆ ಶ್ಲಾಘನೀಯ..., Hats off to him !!!

ದೀಪಸ್ಮಿತಾ said...

ಡಾ.ಸುದರ್ಶನ್ ಅವರ ನಿಸ್ವಾರ್ಥ ಸೇವೆ ಮೆಚ್ಚುವಂತದೆ

Pradeep Rao said...

ಡಾ. ಸುದರ್ಶನ್‍ರವರ ನಿಸ್ವಾರ್ಥ ಸೇವೆ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು!

KalavathiMadhusudan said...

baalusir,aparupada, vishesha vyaktitvada Dr.sudarshan ravara parichayavannu chaayaachitranada sameta prichayisiddakkaagi nimage dhanyavaadagalu.

prabhamani nagaraja said...

ಡಾ.ಸುದರ್ಶನ್ ಅವರ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ. ಚಿತ್ರಸಹಿತ ಅವರ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ ಬಾಲು, ಧನ್ಯವಾದಗಳು.

Sandeep K B said...

ಡಾ.ಸುದರ್ಶನ್..
ನಿಮಗೆ ಜೈ ಹೂ