|
"ಅಜ್ಜಿ ಕಥೆಯೊಂದಿಗೆ ಕೈತುತ್ತು ಬಲುರುಚಿ " |
ಸ್ವಲ್ಪ ದಿನದ ಹಿಂದೆ ಯಾಕೊಕಾಣೆ ಕೈತುತ್ತು ತಿನ್ನುವ ಬಯಕೆ ಹೆಚ್ಚಾಗಿ , ಮನೆಯವರೆಲ್ಲಾ ಟೆರಸ್ ಮೇಲೆ ಹೋಗಿ ಚಾಪೆಹಾಸಿ ಕುಳಿತು ಹುಣ್ಣಿಮೆ ಚಂದಿರನ ಬೆಳಕಲ್ಲಿ ಕೈತುತ್ತಿನ ಊಟ ಮಾಡಿದೆವು.ಇದ್ದದ್ದು ನಾಲ್ಕೆಜನ ಅಮ್ಮ ಎಲ್ಲರಿಗೂ ಸಾರನ್ನ [ ಸೊಪ್ಪಿನ ಸಾರಿನಿಂದ ಕಲೆಸಿದ ಅನ್ನ] ಹಾಗು ಮೊಸರನ್ನವನ್ನು ಕೈ ತುತ್ತಿನ ಉಂಡೆಮಾಡಿ ಎಲ್ಲರ ಕೈಗೂ ಹಾಕುತ್ತಿದ್ದಳು ನಾವು ಒಬ್ಬರಿಗೊಬ್ಬರು ಕೀಟಲೆ ಮಾಡುತ್ತಾ ನಗುತ್ತಾ ಅಮ್ಮ ನೀಡಿದ ತುತ್ತುಗಳನ್ನು ಸ್ವಾಹ ಮಾಡುತ್ತಿದ್ದೆವು. ಬೇಸಿಗೆಯಲ್ಲಿ ಮನೆಯಲ್ಲಿ ಕುಳಿತು ಊಟ ಮಾಡುವುದಕ್ಕಿಂತಾ ಇದು ತುಂಬಾ ಖುಷಿಕೊಟ್ಟಿತು. ನಾನು ಹಾಗೆ ಬಾಲ್ಯದ ನೆನಪಿಗೆ ಜಾರಿದೆ .. ನಾನು ಚಿಕ್ಕವನಿದ್ದಾಗ ನನ್ನ ಬಾಲ್ಯ ಹಳ್ಳಿಯಲ್ಲಿ ಕಳೆದಿತ್ತು. ಹಳ್ಳಿಯಲ್ಲಿ ಮನೆಯ ಮುಂದೆ ವಿಶಾಲವಾದ ಅಂಗಳವಿತ್ತು. ನಮ್ಮ ಮನೆಯಲ್ಲಿ ಹುಣ್ಣಿಮೆ ಬಂತೆಂದರೆ ನಮ್ಮ ಅಪ್ಪ ಅಮ್ಮ ಎಲ್ಲರನ್ನೂ ಅಂಗಳದಲ್ಲಿ ಕುಳ್ಳಿರಿಸಿ ಕೈತುತ್ತು ತಿನ್ನಿಸುತ್ತಿದ್ದ ನೆನಪು ಯಾವಾಗಲೂ ಮೂಡುತ್ತದೆ.ಇನ್ನು ಬೇಸಿಗೆ ರಜೆಯಲ್ಲಿ ನಮ್ಮ ಮನೆಗೆ ಬರುವ ನೆಂಟರು ಹಾಗು ಅವರ ಮಕ್ಕಳು ಬಂದಾಗ ಗದ್ದೆಯ ಹತ್ತಿರವಿದ್ದ ನಾಲೆಯ ಬಳಿ ವೃತ್ತಾಕಾರದಲ್ಲಿ ಕುಳಿತು ಕೈತುತ್ತು ತಿಂದು ನಲಿದದ್ದು ಮರೆಯಲಾರದ ಕ್ಷಣ .ಇಂದು ನಮ್ಮ ದುರಾದೃಷ್ಟ ನಮ್ಮ ಜೀವನ ಶೈಲಿ ಬದಲಾಗಿ ಬೆಳದಿಂಗಳ ಊಟ , ಕೈತುತ್ತು ತಿನ್ನುವ ಆ ಮಜಾ ನಶಿಸಿಹೋಗಿ , ನಮ್ಮ ಭಾವನೆಗಳನ್ನು ಮೂರ್ಖ ಪೆಟ್ಟಿಗೆಯ ಮುಂದೆ ಹಂಚಿಕೊಂಡು ನಾವೂ ಮೂರ್ಖರಾಗಿ ಜೀವನ ವನ್ನು ಆಧುನಿಕ ಜೀವನ ಅಂತಾ ಜಂಬ ಪಡುತ್ತಿದ್ದೇವೆ.
|
" ಅಜ್ಜಿ ಇನ್ನೂ ಸ್ವಲ್ಪ ತಿನ್ಸೂ "
|
ಇನ್ನು ಮಕ್ಕಳಿಗಂತೂ ಅಜ್ಜಿಯ ಕಥೆ ಕೇಳುತ್ತಾ ಕೈತುತ್ತು ತಿನ್ನುವ ಯೋಗವೇ ಇಲ್ಲದಾಗಿದೆ. ಯಾಕೆಂದ್ರೆ ಸುಮಾರು ಮಕ್ಕಳ ಅಜ್ಜಿ ಅಜ್ಜಂದಿರು ಇಂದು ವೃದ್ಧ ಸೇವಾಶ್ರಮ ವಾಸಿಗಳಾಗಿ ಮರೆಯಾಗಿದ್ದಾರೆ.ನಮಗೆ ಪ್ರೈವೆಸಿ ಬೇಕೆಂದು ನಾವು ಹಾಕಿಕೊಂಡ ಬದುಕು ಇಂದು ನಮ್ಮ ಜೀವನಶೈಲಿಯನ್ನು ಹಾಳು ಮಾಡುತ್ತಾ ಅಟ್ಟಹಾಸದಿಂದ ರಕ್ಕಸನಂತೆ ನಗುತ್ತಿದೆ.ಬನ್ನಿ ಮತ್ತೆ ಕಾಲವನ್ನು ಹಿಂದೆ ಸರಿಸೋಣ.ಆಗದಿದ್ದಲ್ಲಿ ಹಳೆಯ ಜೀವನದ ಕೆಲವು ಆಚರಣೆಗಳನ್ನು ಮತ್ತೆ ಹುಟ್ಟಿಹಾಕೋಣ. ಇದನ್ನು ಓದಿದ ನೀವು ನಿಮ್ಮ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ನಗುತ್ತಾ ಕೈತುತ್ತು ಊಟ ಮಾಡುವ ಹವ್ಯಾಸ ಶುರುಮಾಡಿಕೊಳ್ಳಿ. ಹಾಗು ಪುಟ್ಟ ಮಕ್ಕಳಿದ್ದರೆ ಅವಕ್ಕೂ ಕಥೆ ಹೇಳುತ್ತಾ ಕೈತುತ್ತಿನ ರುಚಿ ನೀಡಿ. ಸಂಭ್ರಮಿಸುವ ಹಿರಿಯರ ಕಾರ್ಯಕ್ಕೆ ಯಾರೂ ಬೆಲೆ ಕಟ್ಟಲಾರರು.
ಇಷ್ಟೆಲ್ಲಾ ಆದನಂತರ ಅಜ್ಜಿ ಅಜ್ಜಂದಿರನ್ನು ವಾಪಸ್ಸು ಮನೆಗೆ ಕರೆತರುವ ಬಗ್ಗೆ [ಒಂದು ವೇಳೆ ವೃದ್ಧ ಸೇವಾಶ್ರಮದಲ್ಲಿದ್ದರೆ ] ಯೋಚಿಸಿ ಕರೆತಂದು ಮಕ್ಕಳಿಗೆ ಅವರ ವಾತ್ಸಲ್ಯ ನೀಡೋಣ.ಬನ್ನಿ ಇಂದೇ ಈ ಬಗ್ಗೆ ಕಾರ್ಯತತ್ಪರರಾಗೋಣ.ಕಳೆದುಹೋದ ಸಂತಸವನ್ನು ಮತ್ತೆ ವಾಪಸ್ಸು ತರೋಣ.
18 comments:
ಬಾಲಣ್ಣ;ನೀವು ನಿಜಕ್ಕೂ ಪುಣ್ಯವಂತರು.ನಮಗೆ,ನಮ್ಮ ಮಕ್ಕಳಿಗೆ ಅಜ್ಜಿಯರಿದ್ದರೂ ಕೈ ತುತ್ತು ಪಡೆಯುವ ಭಾಗ್ಯ ಕೇಳಿಕೊಂಡು ಬರಲಿಲ್ಲ.ಪ್ರೀತಿಯಿಂದ ಕೈತುತ್ತು ನೀಡುವ ಅಜ್ಜಿಯರ ಸಂತಾನ ವೃದ್ಧಿಸಲಿ.ಯಾರೂ ವೃದ್ಧಾಶ್ರಮ ಸೇರದಂತಾಗಲಿ.
ಬಾಲು ಸರ್,
ಬಾಲ್ಯದಲ್ಲಿ ನನಗೂ ಕೈತುತ್ತಿನ ಅನುಭವವಾಗಿದೆ. ಈಗ ಅವಕಾಶವಿಲ್ಲ. ನೀವು ಅದನ್ನು ಅನುಭವಿಸಿದ್ದೀರಿ..ಮತ್ತು ನಿಮ್ಮ ಅನುಭವವನ್ನು ಚೆನ್ನಾಗಿ ಬರೆದಿದ್ದೀರಿ...
nija kaituttina richi berene... kaituttina bagge sumaaru 2 varshgaLa hinde naanu bareda lekhana
http://maatemutthu.blogspot.com/2008/07/blog-post_17.html
Baalu sir,
Baalyadalli naanu kai tuttu undiddene,aa haleya nenapugale madhura allave....Nimma anubhavavannu chennagi bannisiddiri...
ಬಾಲ್ಯದಲ್ಲಿ ನಾನೂ ಕೈತುತ್ತು ತಿಂದವನೇ. ಆದರೆ ಈಗ ಅದರಕಡೆ ಒಲವಿಲ್ಲ!! ಕೈಯ್ಯಲ್ಲಿ ನುರಿದು ನುರಿದು ತೂಕ ನೋಡುತ್ತಿರುವರಂತೆ ಆಡಿಸಿ ಆಡಿಸಿ ಕೊಡುವ ಕೈತುತ್ತು-ಇಂದಂತೂ ನಾನು ತಿನ್ನುವುದಿಲ್ಲ.
Balu sir
ammana nenapu maadibitri
nimma phone number mail ge kalisi sir
hego delete agi hogide mobile ninda
matte hegidira?
ಕೈ ತುತ್ತಿನ ಅನುಭವ.. ನನ್ಗೂನು ಎರಡು ವರ್ಷಕ್ಕೊಮ್ಮೆ... ಆಗುತ್ತೆ.. ನಾನು ಎರಡು ವರ್ಷಗಳಿಗೆ ಒಮ್ಮೆ ಅಜ್ಜಿ ಇರುವಲ್ಲಿ ಹೋಗುತ್ತೇನೆ... ಮಗ ಹುಟ್ಟಿದ ಮೇಲೆ ಪ್ರತಿ ವರ್ಷವೂ ಹೋಗುತ್ತಿದ್ದೇನೆ... ಅಂದ್ರೆ ನನ್ನ ಮಗನಿಂದಾಗಿ ನಂಗೆ ವರ್ಷವೂ ಕೈ ತುತ್ತಿನ ಭಾಗ್ಯ!
balu..
ಅಮ್ಮ, ಅಜ್ಜಿ, ಅಜ್ಜಿ ಮನೆ , ಕೈ ತುತ್ತು - ಈ ಪರಿಕಲ್ಪನೆಗಳು ಎಷ್ಟು ಸುಂದರ !!
ಕೈ ತುತ್ತು ಹಾಕುವಾಗ ಹೇಳೋ ಕಥೆ,
ನಂಗೆ ಬೇಕು, ನಂಗೆ ಬೇಕು ಅಂತ ಆಡೋ ಜಗಳ , ಹುಸಿ ಮುನಿಸು
ಪೈಪೋಟಿಗೆ ಬಿದ್ದು ಎರಡು ತುತ್ತು ಎಲ್ರು ಹೆಚ್ಚಾಗಿಯೇ ತಿಂದಿರ್ತೀವಿ ಅಲ್ವಾ?
ಎಲ್ಲಾ ಕೊಂಡಿ ಕಳಚಿ ಹೋಗ್ತಿರುವಾಗ ನಿಮ್ಮ ಈ ಲೇಖನ ತುಂಬಾ ಸಾಂಧರ್ಭಿಕ
@ ಡಿ.ಟಿ.ಕೆ.ಸರ್ , ನಿಮ್ಮ ಆಶೀರ್ವಾದ ಹೀಗೆ ಇರಲಿ.ಪ್ರೀತಿಯಿಂದ ಕೈತುತ್ತು ನೀಡುವ ಅಜ್ಜಿಯರ ಸಂತಾನ ವೃದ್ಧಿಸಲಿ.ಯಾರೂ ವೃದ್ಧಾಶ್ರಮ ಸೇರದಂತಾಗಲಿ. ಇದು ನನ್ನ ಅಭಿಲಾಷೆಯೂ ಕೂಡ ಆಗಿದೆ.
@ ಶಿವೂ. ನಿಮ್ಮ ಬಾಲ್ಯ ನೆನಪಿಗೆ ತಂದುಕೊಂಡು ಲೇಖನ ಮೆಚ್ಚಿದ್ದಕ್ಕೆ ವಂದನೆಗಳು.
@ ಇಂದುಶ್ರೀ , ನಿಮ್ಮ ಮಾತುಗಳು ನಿಜ. ನಿಮ ಲೇಖನ ಓದಿದೆ ಚೆನ್ನಾಗಿದೆ. ನನ್ನ ಬ್ಲಾಗಿಗೆ ನಿಮ್ಮ ಪ್ರಥಮ ಭೇಟಿ ನಿಮಗೆ ಸ್ವಾಗತ. ನಿಮ್ಮ ಭೇಟಿ ಮುಂದುವರೆಸಿ.
@ ashokkodlady , ನಿಮ್ಮ ಪ್ರೀತಿಮಾತಿಗೆ ಜೈ ಹೋ.
ಸುಬ್ರಮಣ್ಯ ಮಾಚಿಕೊಪ್ಪ, ಪ್ರೀತಿಯ ಸಹೋದರ ಬಾಲ್ಯದ ನೆನಪು ತಿಳಿಸಿದ್ದೀರ ಖುಷಿಯಾಯಿತು. ದೊಡ್ಡವರಾದ ಮೇಲೆ ಬಹಳಷ್ಟು ಜನರಿಗೆ ನಿಮ್ಮ ಹಾಗೆ ಅನ್ನಿಸಬಹುದು.ಆದರೂ ಬಾಲ್ಯ ದ ನೆನಪು ಮರೆಯಲು ಆಗದು. ನಿಮ್ಮ ಸ್ಪಷ್ಟ ಅಭಿಪ್ರಾಯಕ್ಕೆ ಥ್ಯಾಂಕ್ಸ್.
@ ಸಾಗರದಾಚೆಯ ಇಂಚರ, ಗುರು ಮೂರ್ತಿ ಸರ್ ಈ ಲೇಖನ ನಿಮ್ಮ ತಾಯಿಯ ನೆನಪು ಮೂಡಿಸಿದ್ದಕ್ಕೆ ನಾನು ಧನ್ಯ. ನಿಮ್ಮ ಪ್ರೀತಿ ಮಾತುಗಳಿಗೆ ಋಣಿ .
@ಡಾ. ಚಂದ್ರಿಕಾ ಹೆಗಡೆ, ನಿಮ್ಮ ಮಗನ ಜೊತೆ ನಿಮಗೂ ಕೈ ತುತ್ತಿನ ಭಾಗ್ಯ ಸಿಗುತ್ತದೆ ಎಂಬ ಮಾತುಗಳು ಎಷ್ಟು ಹಿತವಾಗಿದೆ ಆಲ್ವಾ , ಸಂಬಂಧ ಗಳು ಮರೆತು ಹೋಗುತ್ತಿರುವ ಈ ಕಾಲದಲ್ಲಿ ನಿಮ್ಮ ಈ ಕಾರ್ಯ ಅನುಕರಣೀಯ. ಹಿರಿಯರ ಪ್ರೀತಿ ಮಾತಿನ ಜೊತೆ ಕೈ ತುತ್ತಿನ ಊಟ ರುಚಿ ರುಚಿ ಆಲ್ವಾ?? ನಿಮ್ಮ ಅನಿಸಿಕೆ ಚೆನ್ನಾಗಿದೆ ಥ್ಯಾಂಕ್ಸ್.
@ Deep , ನಿಮ್ಮ ಅನಿಸಿಕೆಯ ಪ್ರತೀ ಪದಗಳೂ ಸತ್ಯ ದೀಪು. ಬಾಲ್ಯದ ಈ ದಿನಗಳು ಮತ್ತೊಮ್ಮೆ ಬರಲಾರವು ಆದರೆ ನಮ್ಮ ನಮ್ಮ ಮಕ್ಕಳಿಗೆ ಸಿಗುತ್ತಿಲ್ಲವಲ್ಲಾ ಎಂಬ ಕಾಳಜಿ ಈ ಮೂಲಕ ಹೇಳಬಯಸಿದ್ದೇನೆ. ನಿಮ್ಮ ಅನಿಸಿಕೆಗೆ ಜೈ ಹೋ.
baalu sir ravare, nimma anubhava amoghavaadaddu.doddavarige makkalu endiguu chikkamakkale..! magalu-aliya,maga-sose,mommaganige indiguu kaitutunisuva bhaagyadalli bhaagiyaaguva sukha kotiguu sigadu..ellariguu ee bhaagya siguvantaagali....dhanyavaadagalu
@ಕಲರವ [ಕಲಾವತಿ ಮಧುಸೂದನ್ ]ನಿಮ್ಮ ಚಂದದ ಅನಿಸಿಕೆಗೆ ಧನ್ಯವಾದಗಳು.
Post a Comment