Tuesday, August 24, 2010

ಬ್ಲಾಗ್ ಲೋಕದ ಹಕ್ಕಿಗಳು ಸುಂದರ ಭಾನುವಾರ ಸೃಷ್ಟಿಸಿದ ಹಾಸ್ಯ ಲೋಕ.!!!!


ಆ ದಿನ ಭಾನುವಾರ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿನ ಕನ್ನಡ ಭವನದಲ್ಲಿ ಸಡಗರದ  ಸಂಭ್ರಮ .ಪ್ರೀತಿಯ ಗೆಳೆಯರಾದ ಶ್ರೀ ಕೆ.ಶಿವೂ ಹಾಗೂ ಆಜಾದ್ ರವರ ಗುಬ್ಬಿ ಎಂಜಲು, ಜಲ ನಯನ ಪುಸ್ತಕಗಳ  ಬಿಡುಗಡೆ. ಜೊತೆಗೆ ಬ್ಲಾಗ್ ಲೋಕದ ಹಕ್ಕಿಗಳ ಮೇಳ  ಆಯೋಜಿಸಲಾಗಿತ್ತು.ಎಲ್ಲರೂ ಅವರದೇ ಲೋಕದಲ್ಲಿ ವಿಹರಿಸುವವರೇ  . ಬನ್ನಿ ಸುಂದರ ಭಾನುವಾರದ ಸುಂದರ ಕ್ಷಣಗಳನ್ನು ಹಾಸ್ಯ ವಾಗಿ ಸವಿಯೋಣ !!!! ಈ ಚಿತ್ರಗಳನ್ನುನೋಡಿ ನೀವು  ನಕ್ಕು ಬಿಟ್ಟರೆ ಪ್ರತಿ ನಗುವಿಗೆ ದಂಡ ವಿಧಿಸಲಾಗುವುದು .ನಗದಿದ್ದವರಿಗೆ ಬ್ಲಾಗಿನ ಚಿತ್ರನೋಡುವ ಶಿಕ್ಷೆಯಂತೂ ಖಾಯಂ.ಇದು ಹಾಸ್ಯಕ್ಕಾಗಿ ಬರೆಯಲಾಗಿದೆ. ಯಾರೂ ತಪ್ಪಾಗಿ  ಭಾವಿಸದೆ ನಕ್ಕು ಸುಂದರ ಭಾನುವಾರ ವನ್ನು ನೆನಪಿನಲ್ಲಿ ಉಳಿಸಿಕೊಳ್ಳಿ !![ವಿಶೇಷ :-ಬೀಡಿ ಸೇದಿದ ಇಬ್ಬರು ಮಹನೀಯರ ಚಿತ್ರಗಳನ್ನು ಅವರ ಕೋರಿಕೆ ಮೇರೆಗೆ ಪ್ರಕಟ ಗೊಳಿಸಿಲ್ಲ !!!] ಉಳಿದಂತೆ ಇತರ ಎಲ್ಲಾ  ಮಸಾಲೆ ಸೇರಿದೆ.ಬನ್ನಿ ಕಾರ್ಯಕ್ರಮ   ಹೀಗೂ ಉಂಟೆ!!!!!!!ಅಲ್ಲ ಅಲ್ಲಾ ಹೀಗೆ  ಉಂಟೂ !!!!!!!!! ರೆಡಿ ಒಂದು ಎರಡು ಮೂರು ........ಶುರು!!! 

ಬೇಗ ರೆಡಿ ಮಾಡ್ರೀ ಹೊತ್ತಾಯ್ತು !!! ಯೆಜಮಾನ್ರೂ ಬರ್ತಾರೆ ಈಗ!!!
   
ನಾನೀಗ ರೆಡಿ !!ಯಾರು ಬರ್ತೀರೀ ಬನ್ರೀ !!ಮಾತಾಡಿ.
ನಾನು ಬರ್ಲಾ!!! ಪರದೆ ಇಂದಾ ಇಳ್ದೂ!!!!
ನೋಡ್ರೀ!!! ಇದು ಪರದೆ ಇಂದಾ  ಇಳಿಯುತ್ತಂತೆ  !!!!!
ಬನ್ನಿ ಸಾರ್!!! ಅಂತಾ ಜೋರಾಗಿ ಕೈ ಎಳಿತಾರೆ ನೋಡ್ರೀ!!!
ಯಾರಾದ್ರೂ ಬರಲಿ ಪರವಾಗಿಲ್ಲ !!ನನ್ ಕರಾಮತ್ತು ತೋರ್ತೀನಿ!!!!
ಆಹಾ !!ಆಹಾ !!ನೋಡ್ರೀ ಹೆಂಗೆ ನಗುತ್ತಾರೆ !!!ನಗಿ ನಿಮಗೆ ಮುಂದೆ ಇದೆ!!
ನಿದ್ದೆ ಹಾಗು ಆಕಳಿಕೆ ಮಾಡೋರ ಮುಖ ಈ ಪರದೇಲಿ ಹಾಕೋಣ!!! 
ನಾವು ವೇದಿಕೆಲಿದ್ರೂ  ಮಾತಾಡೋ ಹಂಗಿಲ್ವಂತೆ !!!
ಹಲೋ  ನಿಮ್ದೊಂದು ಫೋಟೋ ಕ್ಲಿಕ್ ಮಾಡ್ಲಾ ಮೇಡಂ???
"ಗುಬ್ಬಿ ಎಂಜಲು" ತಿಂಡಿ ನೀವು ತಿನ್ದಿದೀರ ??? ಸಾರ್ !!!
ಏನಾದರೂ  ಮಾಡ್ಕೊಳ್ಳಿ ನನ್ನ ನನ್ ಪಾಡಿಗೆ ಬಿಟ್ಬಿಡಿ !!!ಅಂದ ಈ ಹುಡುಗ ???
"ಗುಬ್ಬಿ ಎಂಜಲು "ಮಾಡ್ ತೋರ್ಸಿ ಅಂದ್ರೆ ಸಭಾ ತ್ಯಾಗ  !!!ಸ್ವಪಕ್ಷದವರ ಸಾಂತ್ವನ !!!
ಯುವರ್ ಆನರ್ ನಾನು ಹೇಳೋದೇನಂದ್ರೆ !!!ತಿಂಡಿ ಬರ್ತಾಯಿದೆ...........!!!!!!!!
ರೀ ಗುಬ್ಬಿ ಎಂಜಲು ಮಾಡೋಣ ??ಬೇಡ ಸುಮ್ನಿರು  ಎಲ್ಲಾ ನೋಡ್ತಾರೆ.
ಹೋಗ್ರೀ ನಂಗೆ ಕೋಪ ಬಂದಿದೆ!!
ಇವರೂ  ಎಷ್ಟು ಅಡಿ ಇರಬಹುದು ??ಅಂತಾಒಬ್ಬರು ಅಂದುಕೊಂಡರೆ ಕೂತಿದ್ದ ಹುಡುಗ ಆಕಳಿಸುತ್ತಾ ನಂಗೆ ಗೊತ್ತಿಲ್ಲಾ.....ಅಂದಾ.!!!
ಹಿರಿಯರ ಸುತ್ತ ,ಕಿರಿಯರ ಪ್ರೀತಿಯ  ವೃತ್ತ .ಇದಕ್ಕೆ ವೈಜ್ಞಾನಿಕ ಕಾರಣ ಬೇಡ ಅಂದ್ರೂ ಸುಧೀಂದ್ರ !!!
ನೋಡ್ರಪ್ಪಾ ನನ್ ಪಾಡಿಗೆ ನನ್ನ ಬಿಡಿ ,ನನ್ ಮಾತ್ ಕೇಳಿ!!!
ಫೋಟೋ ತೆಗೆಯಲು ನಾವ್ ರೆಡಿ !!1
ನೀವು ಇವ್ರಲ್ವಾ !!!ನಿಮ್ ಬ್ಲಾಗ್ ಯಾವ್ದು ???
ನೀವು ಹಾಡಬೇಕು ರಾಯರೆ !!! ಇಲ್ಲಾಂದ್ರೆ ತಿಂಡಿ ಕೊಡಲ್ಲಾ!!
ನಾನಿದೀನಿ ಬಿಡಿ ಹಾಡಿಸ್ತೀನಿ !! ಯೋಚನೆ ಬೇಡಾ .
ಈ ಕ್ಯಾಮರಾ ಹಾಗು ನಾನು ಸಿಮೆಂಟು ಮರಳಿನ ಹಾಗೆ!!
ಸಾರ್ ನೀವು ಮುಕ್ತಾ ಮುಕ್ತಾ ದಲ್ಲಿ ಇರೋತರಾನೆ ಇದೀರಾ !! ನೀವು ತುಂಬಾ ಮೃದು ಮನಸ್ಸಿನವರು ಬಿಡ್ರೀ !!!!
ಇನ್ನೂ ಏನಾದರೂ ಮರ್ತೊಯ್ತಾ !! ಏನೂ ಬಿಟ್ಟಿಲ್ಲಾ ಆಲ್ವಾ?
ಕಾರ್ಯಕ್ರಮದಲ್ಲಿ ಏನ್ ಮಾತಾಡೋಣಾ ಸಾರ್ ??
ಇನ್ನೂ ಗೆಸ್ಟ್ ಬಂದಿಲ್ವಾ ??? ಸುಧೀಂದ್ರ !!
ಗೆಸ್ಟ್ ಬಂದಾಗ ಒಳ್ಳೆ ಫೋಟೋ ತೆಗೀಬೇಕು.!!
ಗೆಸ್ಟ್ ಬಂದ್ರೂ ಜಾಗ ಬಿಡೀ !!!
ಕಾರ್ಯಕ್ರಮ ಶುರು ಆಯ್ತಾ ????
ಈ ಗಂಡುಸ್ರೂ ಸ್ವಾರ್ಥಿಗಳು  ಕಂಡ್ರಿ!!ಹೆಂಗಸರೂ ಇದಾರೆ ಅನ್ನೋದನ್ನೂ ಮರೆತು ತಾವೇ ತಿಂಡಿ ತಿಂತಾ  ಇದಾರೆ!!
ನಾನು ಸ್ವಾರ್ಥಿ ಅಲ್ಲ ರೀ !!! ತಾಳಿ ತಿಂಡಿ ಕೊಡಿಸ್ತೇನೆ.
ನಾನು ತಿಂಡಿ ತಿನ್ನೋದೇ ಹೀಗೆ!!ಸ್ಪೂನು ಸೇರ್ಸಿ ತಿಂದರೆ ಮಜಾ ಗೊತ್ತ!!
ಸಧ್ಯ  ನಾನು ಎರಡನೇ ಸಾರಿ ಹಾಕಿಸಿಕೊಂಡಿದ್ದು ಯಾರಿಗೂ ಗೊತ್ತಾಗ್ಲಿಲ್ಲ !!!
ಈ ತಿಂಡಿ ತಟ್ಟೆಯಲ್ಲಿ ಬ್ಲಾಗ್ ಗೆ ಏನ್ ಸಿಗುತ್ತೆ ?? ಅಂತಾ ಹುಡುಕಿದರೂ ಪಾಪ!!
ತಿಂಡೀ ಚೆನ್ನಾಗಿದೆ, ಆದ್ರೆ ಅಲ್ನೋಡಿ ???? ವಯಸ್ಸಿನ ತುಮುಲಗಳು.
ಯಾರ್ಗೆ ಬೇಕೂ ಸಾರ್ ಎರಡನೇ ಸರಿ.!!!!
ಸಾರ್ ನೀವು ಯಾವ್ ಎಣ್ಣೆ ಹಾಕ್ತೀರಿ ???ಅಂತ ಅವ್ರಂದ್ರೆ ..........ತಲೆಗಾ ?/ಅಂತಾ ಇವ್ರನ್ದ್ರೂ !!!!
ಎಣ್ಣೆ ನ  ..................!!!! ಅಂತಾ ಅವ್ರು ನಕ್ರೂ ,         ತಾಳಿ ಸ್ವಾಮೀ ನಗಬೇಡಿ ,ಅಂತಾ ಇವ್ರನ್ದ್ರೂ !!!
ತಿಂಡೀ ಜೊತೆ ನಗು !!! ನಾಲಿಗೆಯಲ್ಲಿ ತುಟಿ ಸವರಿದ ಒಬ್ಬರು  ಉಪಹಾರ ಚೆನಾಗಿತ್ತು!!!ಅಂದ್ರೂ ...............????
ಸುಮ್ನಿರು ಕಂದಾ !! ಇಲ್ದಿದ್ರೆ ಮನುಷ್ಯರಿಗೆ ಹಿಡಿದು ಕೊಡ್ತೀನಿ!!ನೋಡು.
ಶಿವೂ ಮೇಲೆ ಫೋಟೋ ತೀರಿಸಿಕೊಂಡ ಸೇಡು???
ಮಾತೆಲ್ಲೋ !!!!ನೋಟವೆಲ್ಲೋ !!! ಯಾಕಿಂಗೆ ??
ಏನ್ರೀ ತ್ರಿವಳಿಗಳ ಕಾಟ !!! ಅಂತಾ ಹುಡ್ಗೀರ ಕಂಪ್ಲೇಂಟು !!!
ನಾನ್ಮಾತ್ ಶುರು ಮಾಡಿದರೂ ಯಾಕ್ರೀ ಗಲಾಟಿ.??ಈಗ ಕಾರ್ಯಕ್ರಮ ಪ್ರಾರಂಭ .
ಮಾತಾಡಿ ಸುಸ್ತಾಗಿದೆ !!!ಈಗ ತಗೋಳಿ ಒಂದು ಬ್ರೇಕ್ .
ಅರೆ ಉಳಿದ ಗಣ್ಯರು ಎಲ್ಲಿ??
ಸಧ್ಯಾ ನೀವು ಬಂದ್ರಲಾ!!ಜೊತೆಗೆ.
ಲೇಟಾಯ್ತು  ನಿಮ್ಮೇಲೆ ಒಂದು ಚುಟುಕ ಬರೀಲಾ ಸಾರ್ ???ಆದ್ರೆ ನೀವು  ಕೆಮ್ಮನ್ಗಿಲ್ಲಾ !!!
ಯಾರ್ ಫೋಟೋ ತೆಗೀಲಿ ??  ಬೆಕ್ಕು !! ಹೊಂಚಿಹಾಕಿತ್ತು.
ಡುಂಡಿರಾಜರ  ಚುಟುಕು ಕಾರ್ಯಾಚರಣೆ.!!
 ಅಜಾದ್ ಜೈಅನ್ನಿಸಿ ಬಿಟ್ವಿ !!! ಅಲ್ವ ಶಿವೂ !! ಅಂದ್ರೆ ಹೌದು ಅಜಾದ್  ಸರ್ ಅಂದ್ರೂ ಶಿವೂ !!
ಈಗ ಮಾತಾಡವ್ರೂ>>>>>>!! ಅಂತಾ ಅಂತಾ  ತಾವು ಮಾತಾಡಿದ್ರೂ !!!
ನೋಡ್ರೀ ಪಾಕೆಟ್ ಒಳಗೆ ಇದ್ದವು ಇವೆ ಪುಸ್ತಕ !!!!! ಬಿಟ್ಟಿ ಓದ್ಬ್ಯಾಡಿ ಮತ್ತೆ!!
ಯಾವ್ ಚುಟುಕ ಇಲ್ಲಿಗೆ ಸೂಕ್ತಾ ???
ಪರವಾಗಿಲ್ಲಾ ರೀ  ನನ್ ಚುಟುಕ  ಪರಿಣಾಮ ಬೀರ್ತಿದೆ.
ಕವಿತಾ  ಪಡ್ನೆದೋ ಹಂ ಕೋ !!!ಆಮೇಲ್ ಬೇಕಾರ್ ಕೆಮ್ಕೋ !!!!!!.........ಅಂದ್ರೂ ಇವ್ರು . ಅದ್ಕೆ ಸಭೆನಲ್ಲಿ ಯಾರೂ ಕೆಮ್ಮಲಿಲ್ಲಾ .
ಅವ್ರ್ನಾ ತೆಗೆದಾಯ್ತಾ ?? ಈಗ ಇವರನ್ನ ತೆಗೀರಿ !! ಅಂಥಾ ಸ್ಕೆಚ್ಚು???
ಕಾರ್ಯ ಕ್ರಮದಲ್ಲಿ ಲೀನವಾದವರು.
ಹುಷಾರ್ ರೀ!! ಬೇಟೆ ಮುಂದುವರೆಸಿದೆ ಬೆಕ್ಕು !!!!
ಅಲ್ನೋಡ್ರೀ.... ಕಾರ್ಯಕ್ರಮದಲ್ಲಿ ಇಣುಕಿ ನೋಡೋರ್ನ!!!!!!
ಸಾರ್ ನೀವ್ ಸ್ವಲ್ಪ ಮಾನ್ಯ ಯಡಿಯೂರಪ್ಪಾ ಅವರ ತಾರಾ ಕಾಣ್ತೀರ ಆಲ್ವಾ??
ಹೌದೇನ್ರೀ ???
ಹಾಸ್ಯ ಬದುಕಿಗೆ ಅನಿವಾರ್ಯ !!ಇದಕ್ಕೆ ವೈಜ್ಞಾನಿಕ ಪುರಾವೆ ಇದೆ.
ಥೂ ಹೋಗ್ರೀ !!!ಯಾವ ಸುಂದ್ರೀನೂ ಫೋಟೋಗೆ ಸಿಗ್ತಿಲ್ಲಾ !!!
ತಾಳಿ ಸ್ವಲ್ಪ ಕೆಮ್ಮ ಬೇಡಿ !!ಚುಟುಕು ಕವಿತೆ  ಹೇಳ್ತೀನಿ 
ನನ್ನ ಹಿಂದೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು.!!!!!೧.....ಹಿಂದೆ???
ಹೌದ್ರೀ....... ಹಿಂದೆ ಸಹಕರಿಸಿದವರು ಇವರೇ !!!
ಯಾಕ್ ಸ್ವಾಮೀ ಪ್ರೇಕ್ಷಕರನ್ನು ಹಿಂಗ್ ನೋಡ್ತೀರಾ ??? ಏನ್ ವಿಶೇಷ ??
ಮುಕ್ತಾ ಮುಕ್ತಾದ" ಮಂಗಳ ಅತ್ತೆ "ನನ್ನ ಕಾಮರಮೇಲೆ ಸಿಟ್ಟಾಗಿದ್ದು ಹೀಗೆ !!!
ದುಂಡಿರಾಜ್ ತಮಗೆ ನೀಡಿದ ಸನ್ಮಾನದ ಶಾಲಿನಲ್ಲಿ ಚುಟುಕು ಹುಡುಕುತ್ತಿರುವುದು.!!!
ಈ ಶಾಲಿನ ಹಿಂದೆ ಗೌರವ ಹಾಗು  ಪ್ರೀತಿಯ ವಿಜ್ನಾನಿಕ ಕಾರಣವಿದೆ!!!
ಇಲ್  ಕೇಳ್ರೀ ಅಕ್ಕೊರೆ !!!
ಮಹಾ ಮಾತೆಯರೇ ಗಲಾಟೆ ಮಾಡಬ್ಯಾಡ್ರೀ !!!
ನಿಂಗಿ.. ನಿಂಗಿ.. ನಿಂಗಿ      ಅಂತಾ         ಹಾಸ್ಯವಾಗಿ ಎದೆ  ತುಂಬಿ ಹಾಡಿದ ಪ್ರೀತಿಯಕಲಾವಿದ !!
ಕಾರ್ಯಕ್ರಮ ಬೊಂಬಾಟ್ ರೀ !!!!
ರೀ ನಂಗೆ ನಾಚ್ಕೆ ಆಗುತ್ತಪ್ಪಾ !!!
ಸಾರ್ ಹಿಂದಿ ಹಾಡು ಸೂಪರ್ !!!
ನಿಂಗಿ ..ನಿಂಗೀ  ಹಾಡಿನ ಸುರ್ ಅಲ್ಲೋಯ್ತು ರೀ !! ನಾನ್ ಹೇಳ್ದೆ ನೀವ್ ಕೇಳಿಲ್ಲ !!!!
ಅಜಾದ್ ಬನ್ನಿ ನಿಮ್ಮನ್ನ ನಮ್ಮ ಸ್ನೇಹದ ಪೆಟ್ಟಿಗೆಯಲ್ಲಿ ಕೂಡಿ ಹಾಕ್ತೀವಿ.
ಯಾರ್ಯಾರ್ ಎಷ್ಟ್ ಗಿಡಾ ಬೆಳೆಸಿದ್ದೀರಿ ಸ್ವಾಮೀ!!!
ಗಿಫ್ಟ್ ಪ್ಯಾಕ್ ಓಪನ್ ಮಾಡೋಕೆ" ಒನ್  ಪೈಸೆ ಪರ್ ಸೆಕೆಂಡ್ "ಗೊತ್ತಾ!!
"ಒನ್ ಪೈಸಾ ಪರ್ ಸೆಕೆಂಡ್"  ಸಿಮ್ಕಾರ್ಡ್ ಜೊತೆಗೆ 60 ಪೆರ್ಸೆಂಟ್ ನಲ್ಲಿ ನಾನು ಕಾಮ್ಪ್ಲಾನ್ ಬಾಯ್!!!!!
ಗಿಫ್ಟ್ ನಲ್ಲೂ ಇಟ್ರೂ ಬತ್ತಿ ನೋಡಿ ಸಾರ್ !!!!
ಏನಿದೆ ಇದ್ರಲ್ಲಿ??
ಐಯ್ಯೊ  ಇದಾ!!!
 ಹೋಗ್ಲಿ ಬಿಡಿ !! ಜೊತೆ ಜೊತೆಯಾಗಿ ಪೀಪಿ  ಊದೋಣ,ಬನ್ನಿ!!!
ನಾನು ಚೆನ್ನಾಗಿ ಪೀಪಿ ಊದಿದೆ  ಅಲ್ವ??? ಹೌದ !! ಥ್ಯಾಂಕ್ಸ್.
ಅಕ್ಷರ ಕಲಿಯುವ ಬನ್ನಿ !!
ಶಾಂಪೂ  ಹಾರ ಆಯ್ತು ಮುಂದೆ??
ನನ್ನ ಪ್ರೀತಿಯ ಬಾಚಣಿಕೆ !! ಇದೆ ಗುಡ್
ಕೊಂಬು ಇಡೋಕೂ ಮಂದಿ ಅದಾರೆ !!!
ತುಂಬಾ ಚೇಷ್ಟೆ ಗುಂಪು ಕಣ್ರೀ !!
ನಕ್ಕೂ ನಕ್ಕೂ ಸುಸ್ತಾಗಿ !!!!ಗುಂಪಿನಲ್ಲಿ  ಕಷ್ಟ ಪಟ್ಟು  ನಕ್ಕ ಕೆಲವರು.
ನಿಮ್ಮೊಳಗೊಬ್ಬ  ಅಂತೀರಾ ಬನ್ನಿ ನಮ್ಮೊಳಗೇ ಅಂತಾ ಮಧ್ಯ ಕ್ಕೆ ಹಾಕಿ ಪ್ರೀತಿಯಿಂದ ನಲುಗಿಸಿದ ಆ ಕ್ಷಣ !!!
ಪಾಪ !! ಫೋಟೋ  ಗ್ರಾಫಾರ್ ಆದ್ರೆ ಹಿಂಗೆ ಸ್ವಾಮೀ ??ಜನ ತಮ್ಮ ಕಾಮರನೂ ನೇತಾಕ್ತಾರೆ.
ಪ್ರಕ್ಕೂ ಮಾಮನಿಗೆ  ಅವಿವಾಹಿತ ಹೈಕಳ ಲಗ್ಗೆ !!!
ಪ್ರಕ್ಕೂ ಮಾಮ ಪ್ಲೀಸ್ ನಂಗೂ  ಹೆಲ್ಪ್ ಮಾಡಿ  ಮದ್ವೆ ಮಾಡ್ಸಿ !!!
ತಾಳ್ರಪ್ಪ ಸ್ವಲ್ಪಾ !!!ಎಲ್ಲಿ ನಿಮ್ಮ biodata ಕೊಡಿ .ಯಾವ ಇಟ್ಟಿಗೆಗೆ ಯಾವ ಸಿಮೆಂಟ್ ಅಂತ ಯೋಚಿಸೋಣ.
ಬ್ಲಾಗಿನ ಕೈಗಳು ಸೇರಿದಾಗ !!ಶುಭ ವಿದಾಯ ....
ಈ ಚಿತ್ರಗಳನ್ನು ನೋಡಿ ಆನಂದಿಸಿ ಯಾರೂ ವಯಕ್ತಿಕವಾಗಿ ತೆಗೆದುಕೊಳ್ಳುವುದು ಬೇಡ . ನಿಮಗೆ ಸಂತೋಷವಾದರೆ ನನಗೆ ತಿಳಿಸಿ. ಓ.ಕೆ . ಎಲ್ಲರಿಗೂ ನಮಸ್ಕಾರ.

34 comments:

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ

ನಂಗೆ ಎಲ್ಲಾನು ತಪ್ಪಿಹೋಯಿತು ನೋಡಿ

umesh desai said...

ಬಾಲು ಸರ್ ಇದೇನು ಫೋಟೋಗಳ ಸರಮಾಲೆಯೇ ಇದೆ ಅದ್ಭುತ ಕಣ್ರಿ...!

ಕ್ಷಣ... ಚಿಂತನೆ... said...

ಬಾಲು ಸರ್‍,
ಸಕ್ಕತ್‌ ಫೋಟೋಗಳು, ತುಂಬಾ ನಗುವಂತಾಗಿದೆ...
ಸ್ನೇಹದಿಂದ,

ಜಲನಯನ said...

ಸೂಪರ್ ಬಾಲು...ತುಂಬಾ ಚನ್ನಾಗಿವೆ ಚಿತ್ರಗಳು ಮತ್ತೆ ಅವಕ್ಕೆ ಸೂಕ್ತವಾದ ಅಸವತ್ತಾದ ಶೀರ್ಷಿಕೆಗಳು...ಸೈಲಂಟ್ ಆಗಿ ಎಷ್ಟೊಂದು ಫೋಟೋಸ್ ತೆಗೆದಿದಿದ್ದಿರಲ್ಲಾ ನೀವು...!!

Guruprasad said...

ಬಾಲು ಸರ್,,, ಬಲು ಚೆನ್ನಾಗಿ ಇದೆ ನಿಮ್ಮ ಫೋಟೋಗಳು,,,,, ಸಕತ್ ಮಾರಾಯರೇ.......ಸಕತ್ ಆಗಿ ನಕ್ಕೆವು.....ಥ್ಯಾಂಕ್ಸ್ .ಇಂತಹ ಒಳ್ಳೆ ಮೊಮೆಂಟ್ ನ ಸೆರೆ ಹಿಡಿದು ತೋರಿಸಿದ್ದಕೆ....

PaLa said...

MS Hebbar ಫೋಟೋ ಸೂಪರಾಗಿ ಬಂದಿದೆ.. ಅವ್ರು "am a complan boy" ಅನ್ನಬೇಕಾದ್ರೆ ನಾನು ಕ್ಯಾಮೆರಾ ಒಳಗೆ ಇಟ್ಕೊಂಡಿದ್ದಕ್ಕೆ ತುಂಬಾ ಬೇಜಾರಾಯ್ತು.. ನಿಮ್ಮ ಫೋಟೋ ನೋಡಿ ಆ ಬೇಸರ ಹೋಯ್ತು.. ಎಲ್ಲಾ ಕ್ಷಣಗಳ ಚಿತ್ರ ಸೆರೆಹಿಡಿದು ತೋರಿಸಿದ್ದಕ್ಕೆ ವಂದನೆಗಳು

Laxman (ಲಕ್ಷ್ಮಣ ಬಿರಾದಾರ) said...

Tumba chennagide ri.

I photo ella yavaga tegedri gotte agilla.

Super and extra-ordinary coverage


laxman

Ranjita said...

photo with caption sakkattagi sir ,

nange ellanu miss aytu anta bejarittu :(

ella photos nodi khushi aayu :)

Naveen ಹಳ್ಳಿ ಹುಡುಗ said...

ಬಾಲು ಸಾರ್... ಅದ್ಭುತ ಫೋಟೋಗಳು ಅತ್ಯದ್ಭುತ ಕಾಮೆಂಟ್ ಗಳು....
ನನ್ನ ಧನ್ಯವಾದಗಳು..

UMESH VASHIST H K. said...

ಬಾಲು ಅವ್ರಿಗೆ ನಮಸ್ಕಾರ ಫೋಟೋ ಗಳು ಸೂಪರ್ ಸಾರ್, captions ಅಂತೂ ಇನ್ನು ಸೂಪರ್, ಮಿಸ್ ಮಾಡ್ಕೊಂಡ್ನಲ್ಲ ಅಂತ ತೊಬಾನೆ ಬೇಜಾರ್ಗ್ತಿದೆ, ಅದರೂ important ಕೆಲಸ ಇತ್ತು ಅದಕ್ಕೆ ಬರೋದಿಕ್ಕಾಗ್ಲಿಲ್ಲ, thank U for sharing !!!!!!!!

Shashi jois said...

ಎಲ್ಲಾ ಚಿತ್ರಗಳು ಸೂಪರ್ ಆಗಿತ್ತು ..ಅಲ್ಲದೆ ನಿಮ್ಮ ಚಿತ್ರ ವಿಶ್ಲೇಷಣೆ ಓಡಿ ನಗು ತಡೆಯಾಗಲಿಲ್ಲ.ತುಂಬಾ ಚೆನ್ನಾಗಿ ಬರೆದಿದ್ದೀರಿ.

PARAANJAPE K.N. said...

ಬಾಲು,
ನೀವು ತೆಗೆದ ಛಾಯಾಚಿತ್ರ ಗಳು ಮತ್ತು ಅವಕ್ಕೆ ನೀವು ಕೊಟ್ಟ ಅಡಿ ಟಿಪ್ಪಣಿ ಸೂಪರ್.

ಅನಂತ್ ರಾಜ್ said...

ಬಾಲು ಸರ್, ಸಮ್ಮೇಳನದ ಮಧುರ ಕ್ಷಣಗಳನ್ನು ಚಿತ್ರಗಳ ಸರಣಿಯೊಡನೆ ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.

ಶುಭಾಶಯಗಳು
ಅನ೦ತ್

Sriii :-) said...

ಸರ್ ಚಿತ್ರಗಳು ಚೆನ್ನಾಗಿದ್ದವು..ಅದಕ್ಕಿ೦ತ ಚಿತ್ರಗಳ ಕೆಳಗಡೆ ನಿಮ್ಮ ಟಿಪ್ಪಣಿ ಇನ್ನು ಚೆನ್ನಾಗಿತ್ತು...ನಗುವ೦ತು ಉಕ್ಕಿ ಉಕ್ಕಿ ಬ೦ತು
.....ಶ್ರೀ:-)

V.R.BHAT said...

ಬಾಲು ಸರ್, ಬಹಳ ಚೆನ್ನಾಗಿವೆ ಫೋಟೋಗಳು, ಅದಕ್ಕಿಂತಾ ಹೆಚ್ಚಿಗೆ ನಿಮ್ಮ ಅಡಿಬರಹಗಳು !

V.R.BHAT said...
This comment has been removed by the author.
ಸುಬ್ರಮಣ್ಯ said...

ಫೋಟೋ ಹಾಗೂ ಅಡಿ ಬರಹ ಚನ್ನಾಗಿದೆ. ನಮ್ಮಂತ ದೂರದಲ್ಲಿರುವವರಿಗೆ ಕಾರ್ಯಕ್ರಮವನ್ನೇ ನೋಡಿದಂತಾಯಿತು.

shivu.k said...

ಬಾಲುಸರ್,

ನಿಮ್ಮ ಫೋಟೊಗಳ ಮತ್ತು ಬರಹಗಳನ್ನು ಹೊಸದಾಗಿ ಮದುವೆಯಾದ ದಂಪತಿಗಳಂತೆ ಹೊಂದಿಸಿಬಿಟ್ಟಿದ್ದೀರಿ. ಫೋಟೊಗಳಿಗೆ ಬರಹದಿಂದ ಜೀವ ಬಂತೋ ಅಥ್ವ ಬರಹಕ್ಕೆ ಫೋಟೊದಿಂದ ಮಾತು ಬಂತೋ ಗೊತ್ತಿಲ್ಲ. ಒಟ್ಟಾರೆ ಇಡೀ ಕಾರ್ಯಕ್ರಮವನ್ನು ಮತ್ತೊಂದು ಕೋನದಿಂದ ನೋಡುವುದಿದೆಯಲ್ಲಾ ಅದು ನಿಮ್ಮ ನಿಜವಾದ ಟ್ಯಾಲೆಂಟ್. ನಾನು ಮತ್ತು ನನ್ನ ಶ್ರೀಮತಿ ಒಟ್ಟಾಗಿ ಇದನ್ನು ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು.

ಇಂಥ ಹೊಸತನ್ನು ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು. ಇಂಥ ಪ್ರಯತ್ನ ಮುಂದುವರಿಯಲಿ.

AntharangadaMaathugalu said...

ಬಾಲು ಸಾರ್...
ಚಿತ್ರಗಳು ಮತ್ತು ಅಡಿ ಬರಹಗಳು ಎರಡೂ ಸೂಪರ್.... ನಿಜ್ಜ ಅಂದಿನ ದಿನದ ನೆನಪುಗಳು ಮತ್ತೊಮ್ಮೆ ಮೆಲುಕು ಹಾಕುವಂತಾಯಿತು. ಧನ್ಯವಾದಗಳು...
ಶ್ಯಾಮಲ

ಮನಸಿನ ಮಾತುಗಳು said...

Nice pics sir.. :-)

Dr.D.T.Krishna Murthy. said...

ಬಾಲೂ ಸರ್ ;ಈಗ ನಿಜಕ್ಕೂ ನೀವು ನಮ್ಮೊಳಗೊಬ್ಬ ಬಾಲು.ಅಲ್ಲೊಂದು ಸ್ಪಿನ್ನು,ಇಲ್ಲೊಂದು ಗೂಗ್ಲಿ ಹಾಕಿದ್ದೀರ,ಗೊತ್ತೇ ಆಗದ ಹಾಗೆ.'ನಾನು ಮೊದಲೇ ಹೇಳಿದೆ ನೀವು ಕೇಳಲಿಲ್ಲಾ ,ನಿಂಗಿ ನಿಂಗಿಯ ಸುರ್ ಅಲ್ಲಿ ಹೋಯಿತು ನೋಡಿ,ನೀವು ಯಾವ ಎಣ್ಣೆ ಹಾಕಿದ್ರಿ?'ಎಲ್ಲವೂ ಸೂಪರ್.
ಚಿತ್ರಗಳನ್ನು ನೋಡಿ ನನ್ನ ಹೆಂಡತಿ ನಕ್ಕಿದ್ದೇ ನಕ್ಕಿದ್ದು.ಧನ್ಯವಾದಗಳು.

ಮನಸು said...

super hahaha.................

ಸೀತಾರಾಮ. ಕೆ. / SITARAM.K said...

ತುಂಬಾ ಚೆನ್ನಾಗಿ, ಯಾರಿಗೂ ಗೊತ್ತಾಗದ ಹಾಗೇ, ಅದ್ಭುತ ಛಾಯಾಚಿತ್ರ ತೆಗೆದು, ಜೊತೆಗೆ ಒಳ್ಳೆ ಶೀರ್ಷಿಕೆ ಕೊಟ್ಟು, ಸರ್ಯಾಗಿ ಪೋಣಿಸಿ ,ಹೊಟ್ಟೆ ತುಂಬಾ ಉಣಬಡಿಸಿದ್ದಿರಾ... ಮತ್ತೊಮ್ಮೆ ಅದರ ಅನುಭವ ಆಯಿತು...
ನನ್ನ ಛಾಯಾಚಿತ್ರ ತೆಗೆದದ್ದು ಗೊತ್ತೇ ಆಗಿಲ್ಲ. ಅದಕ್ಕೆ ತಕ್ಕ ಹಾಗೆ ಶೀರ್ಷಿಕೆ ಬರೆದದ್ದು ತಮ್ಮ ಕ್ರಿಯಾಶೀಲತೆ ತೋರಿಸ್ತದೆ!

balasubramanya said...

ಲೇಖನಕ್ಕೆ ಪ್ರೀತಿ ಪೂರ್ವಕ ಕಾಮೆಂಟ್ ನೀಡಿ ಬೆನ್ನುತಟ್ಟಿದ ಬ್ಲಾಗ್ ಲೋಕದ ಎಲ್ಲರಿಗೂ ನನ್ನ ಕೃತಜ್ಞತೆಗಳು..ನನ್ನ ಈ ಲೇಖನ ಹಲವರ ಮುಖದಲ್ಲಿ ನಗೆ ಅರಳಿಸಿದ್ದರೆ ಅದೇ ನನಗೆ ಸಾರ್ಥಕ.ನಮ್ಮ ಸ್ನೇಹ ಪಯಣ ಮುಂದುವರೆಸೋಣ , ನಿಮ್ಮ ಪ್ರೀತಿಪೂರ್ವಕ ಅನಿಸಿಕೆ ಹೀಗೆ ಹರಿದುಬರಲಿ, ಎಲ್ಲರಿಗೂ "ನಿಮ್ಮೊಳಗೊಬ್ಬ ಬಾಲು" ವಿನ ಧನ್ಯವಾದಗಳು.

Ittigecement said...

ಬಾಲು ಜೀ..

ನನಗೆ ನಿಮ್ಮ ಬ್ಲಾಗ್ ಬಗೆಗೆ "ಕೆ.ಶಿವು ಫೋನ್ ಮಾಡಿ ಹೇಳಿದರು..

ಫೋಟೊಗಳೂ ಮಸ್ತ್.. !
ನಿಮ್ಮ ಅಡಿ ಟಿಪ್ಪಣೆಯೂ ಮಸ್ತ್.. !

ನಮ್ಮನೆಯವರೆಲ್ಲ ನಕ್ಕೂ ನಕ್ಕೂ ಸುಸ್ತಾದ್ವಿ..

ಜೈ ಹೋ.. ಬಾಲೂಜಿ.. !!

Deep said...

Ha Ha balu .. I missed it..

May be as you said, If I were to be there.. it might have lifted my mood as well :-)

You have actually woven a story around the ceremony with your comments and cool photos :-) fantastic!

nanu miss madbaradittu anta eega annista ide.

prabhamani nagaraja said...

ಫೋಟೋಗಳು ಹಾಗೂ ವಿವರಗಳು ಬಹಳ ಚೆನ್ನಾಗಿವೆ. ಧನ್ಯವಾದಗಳು.

ದೀಪಸ್ಮಿತಾ said...

ತಂಬಾ ಹಾಸ್ಯಮಯವಾಗಿತ್ತು. ಅನಿವಾರ್ಯ ಕಾರಣಗಳಿಂದ ನನಗೆ ಬರಲಾಗಲಿಲ್ಲ ಎಂದು ಬೇಸರ

balasubramanya said...

ಪ್ರತಿಕ್ರಯಿಸಿ ಅನಿಸಿಕೆ ವ್ಯಕ್ತಪಡಿಸಿದ , ಭಾವನೆ ಹಂಚಿಕೊಂಡ ,ಸಲಹೆ ನೀಡಿದ , ಶಭಾಸ್ ಎಂದ ,ನಕ್ಕು ನಲಿದ ಎಲ್ಲಾ ಬ್ಲಾಗ್ ಮಿತ್ರರಿಗೆ ನನ್ನ ಕೃತಜ್ಞತೆಗಳು.

B.R.Usha said...

ವಾವ್ ವಾವ್ ಬಾಲು ಸರ್, ಆ ಫೋಟೋಗಳಿಗೆ ಹೊಂದುವಂತ ಪದಗಳ ಜೋಡಣೆ ಸೂಪರ್ ಸರ್, ನಕ್ಕು ನಕ್ಕು ಸುಸ್ತಾಯ್ತು..ನಿಮ್ creativity ಮೆಚ್ಚುವಂತದ್ದು..ಇನ್ ಹೆಚ್ಚಿಗೆ ಹೇಳೋದಕ್ಕೆ ಪದಗಳೇ ಸಾಲಲ್ಲ..

balasubramanya said...

ಉಷಾ ಅವರೆ ಧನ್ಯವಾದಗಳು.

nenapina sanchy inda said...

haha enjoyed...nice to see all my blog friends, Haldodderi Sudheendra sir and Dundiraj mama
:-)
malathi S

Unknown said...

ತುಂಬಾ ಚೆನ್ನಾಗಿದೆ ಬಾಲು ಸರ್ ...ನಕ್ಕು ನಕ್ಕು ಸುಸ್ತಾಯ್ತು :)
ನಿಮ್ಮ ಕ್ಯಾಮರಾಕ್ಕೊಂದು ನಮನ ....
ಅದೆಷ್ಟೋ ಖುಷಿಗಳಿಗೆ ಕಾರಣವಾದವರನ್ನ ಸೆರೆ ಹಿಡಿದ ಅದೇ ಧನ್ಯ ಬಿಡಿ :)
ಖುಷಿ ಆಯ್ತು

Badarinath Palavalli said...

ಇರೀ ಸಾರ್, ಎಲ್ಲಾ ಸೋಸಿಯಲ್ ಮೀಡಿಯಾ ಬ್ಯಾನ್ ಆಗೋಗಿ, ಮತ್ತೆ ಬ್ಲಾಗ್ ಲೋಕಕ್ಕೇ ಬರ್ತಾರೆ ನಮ್ಮವರೆಲ್ಲ! 😇😄😃