tag:blogger.com,1999:blog-4215797146714128289.post8746416144537783557..comments2024-02-18T19:30:22.848+05:30Comments on ನಿಮ್ಮೊಳಗೊಬ್ಬ ಬಾಲು [ one among you ]: ಹೀಗೊಂದು ತುಂಟ ಮನಸಿನ ಜೊತೆ ಪಯಣ ......09 ಯಕ್ಷಲೋಕದೊಳಗೆ ಹೊಕ್ಕಿಬಂದೆ ನಾನು....!!Unknownnoreply@blogger.comBlogger5125tag:blogger.com,1999:blog-4215797146714128289.post-57825654437076791082014-10-11T09:04:23.262+05:302014-10-11T09:04:23.262+05:30ಅದೊಂದು ನಿಜವಾದ ಕಲೆಯ ಅನಾವರಣ ಬಾಲಣ್ಣ.
ನಾನು ಮುದ್ದೇನಹಳ್ಳ...ಅದೊಂದು ನಿಜವಾದ ಕಲೆಯ ಅನಾವರಣ ಬಾಲಣ್ಣ.
ನಾನು ಮುದ್ದೇನಹಳ್ಳಿಯಲ್ಲಿ ಓದಿದ್ದು. ನಮ್ಮ ಶಾಲೆ ದ.ಕ. ಜಿಲ್ಲೆಯ ಅಳಿಕೆಯ ಶಾಖೆ. ಈಗಲೂ ನಮ್ಮಲ್ಲಿ ಅಲ್ಲಿನ ಶಿಕ್ಖರದೇ ಮೇಲುಗೈ. ಹಾಗಾಗಿ ಯಾವುದೇ ಹಬ್ಬ ಬರಲಿ ಶಾಲೆಯಲ್ಲಿ ಯಕ್ಷಗಾನ ಮಕ್ಕಳ ಕೈಲಿ ಮಾಡಿಸುತ್ತಿದ್ದರು. ಅಹೋ ರಾತ್ರಿ ಪ್ರಯೋಗಗಳು ರಂಗೇರುತ್ತಿದ್ದವು.

ತಮ್ಮ ಈ ಬರಹದ ಮೂಲಕ ಮತ್ತೆ ನನ್ನಲ್ಲಿ ಯಕ್ಷಗಾನದ ಹುಚ್ಚು ಮರು ಜಾಗೃತಗೊಳಿಸಿದಿರಿ.

ಪುರುಷ ಮೇಳದಲ್ಲಿ ಸ್ತ್ರೀ ಪಾತ್ರಧಾರಿಗಳು ಮತ್ತು ಹೆಣ್ಣು ಮಕ್ಕಳ ಮೇಳದಲ್ಲಿ ಪುರುಷ ಪಾತ್ರದೊಳಗೆ ಕಲಾವಿದರು ಪರಕಾಯ ಪ್ರವೇಶ ಮಾಡುವ ಏಕಾಗ್ರತೆಯು ನನಗೆ ಯಾವತ್ತೂ ಸೋಜಿಗ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-4215797146714128289.post-37178558026544573882014-10-07T21:19:58.209+05:302014-10-07T21:19:58.209+05:30ಯಕ್ಷಗಾನ ಎನ್ನುವ ಪದ ನನ್ನ ಕಿವಿಗೆ ಬಿದ್ದದ್ದು ಮಸಣದ ಹೂವು ...ಯಕ್ಷಗಾನ ಎನ್ನುವ ಪದ ನನ್ನ ಕಿವಿಗೆ ಬಿದ್ದದ್ದು ಮಸಣದ ಹೂವು ಚಿತ್ರದ ಕನ್ನಡ ನಾಡಿನ ಕರಾವಳಿ ಹಾಡಿನಲ್ಲಿ ಕರುನಾಡಿನ ಹಲವು ಮಗ್ಗುಲುಗಳನ್ನು ತೆರೆಯ ಮೇಲೆ ತಂದ ಪುಟ್ಟಣ್ಣ ಅವರ ಚಿತ್ರದಿಂದ..

"ಯಕ್ಷಗಾನ ಮೇಳದ ನಾಟ್ಯ ತರಂಗ ಧೀಂ ಧೀಂ ನುಡಿಯುವ ಚಂಡೆ ಮೃದಂಗ" ಈ ಸಾಲುಗಳು ಯಾವತ್ತೂ ಕಾಡುತ್ತವೆ..

ನನಗೂ ಈ ಕಲೆಯ ಬಗ್ಗೆ ನೋಡಿದ ಕೇಳಿದ ಅನುಭವ ಇಲ್ಲ.. ಆದರೆ ಪ್ರಕಾಶಣ್ಣ ಹಾಕುವ ಚಿತ್ರಗಳು.. ಬೆಂಗಳೂರಿನಲ್ಲಿ ಯಕ್ಷಗಾನನೆಡೆಯುವಾಗ ಪ್ರತಿ ಬಾರಿಯೂ ಕರೆಯುವ ಕಡಕೋಟ ಸರ್ ಇವರ ಅವಿರತ ಒತ್ತಾಯದಿಂದ ನನಗೂ ಅದನ್ನು ನೋಡುವ ಮನಸ್ಸು ಹೆಚ್ಚಾಗುತ್ತಿದೆ..

ಈ ಗಂಡು ಕಳೆಯ ಬಗ್ಗೆ ಸವಿಸ್ತಾರ ವಿವರ ಓದಿ ಹಾಗೆ ತಲ್ಲೀನನಾದೇ... ಇತಿಹಾಸ ಹೆಕ್ಕಿ ತೆಗೆಯಲು ಗುದ್ದಲಿ ಪಿಕಾಸಿ ಸದಾ ಹೊತ್ತು ತಿರುವ ನಿಮ್ಮ ಉತ್ಸಾಹದ ಬತ್ತಳಿಕೆ ಸದಾ ತುಂಬಿರಲಿ

ತುಂಬಾ ತುಂಬಾ ಸುಂದರ ಮಾಹಿತಿ.. ನೀವು ಅದನ್ನು ಪ್ರಸ್ತುತ ಪಡಿಸುವ ರೀತಿಗೆ ಹಾಟ್ಸ್ ಆಫ್ ಬಾಲೂ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-4215797146714128289.post-91533464372732652542014-10-07T11:28:57.854+05:302014-10-07T11:28:57.854+05:30ಗಂಡು ಮೆಟ್ಟಿನ ಕಲೆಯೆಂದೆ ಪ್ರಖ್ಯಾತವಾಗಿರುವ ಜಾನಪದ ಕಲೆಯೆಂ...ಗಂಡು ಮೆಟ್ಟಿನ ಕಲೆಯೆಂದೆ ಪ್ರಖ್ಯಾತವಾಗಿರುವ ಜಾನಪದ ಕಲೆಯೆಂದರೆ ಅದು ಯಕ್ಷಗಾನ. ನವರಸಗಳನ್ನು ಅಭಿವ್ಯಕ್ತ ಪಡಿಸುವ ಶಿಸ್ತುಬದ್ಧವಾಗಿ ಹೆಜ್ಜೆ ಹಾಕುತ ಮನರಂಜಿಸುವ ಕಲೆ. ಯಕ್ಷಗಾನದಲ್ಲಿ ೨ ವಿಧಗಳಿವೆ. ಅದರಲ್ಲಿ ಒಂದು ತೆಂಕು ತಿಟ್ಟು, ಎರಡನೆಯದು ಬಡಗು ತಿಟ್ಟು.

ತೆಂಕು ತಿಟ್ಟು ಇದು ದಕ್ಷಿಣ ಕನ್ನಡದಲ್ಲಿ ಅತಿ ಪ್ರಾಮುಖ್ಯತೆಯನ್ನು ಪಡೆದಿದೆ. ಮತ್ತೆ ಅಲ್ಲಿಯ ಜನಗಳು ಸಹ ತೆಂಕು ತಿಟ್ಟು ಬಗೆಯ ಕಲೆಯನ್ನು ಹೆಚ್ಚು ಮೆಚ್ಚಿ ಅದನ್ನು ಗೌರವಿಸುತ್ತಾರೆ ಇನ್ನು ಕೆಲವರು ಅದನ್ನೆ ಆರಾಧಿಸುತ್ತಾರೆ. ಇದು ಮಂಗಳೂರು, ಪುತ್ತುರು, ಕುಂಬಳ ಕಾಸರಗೋಡು, ಉಡುಪಿ, ಧರ್ಮಸ್ಥಳಗಳಲ್ಲಿ ಅತಿ ಹೆಚ್ಚಿನ ಜನರು ಆಸ್ವಾಧಿಸುವ ಯಕ್ಷಗಾನ ಕಲೆಯ ಬಗೆ.

ಬಡಗು ತಿಟ್ಟು ಇದು ಹೆಚ್ಚಿನದಾಗಿ ಉತ್ತರ ಕನ್ನಡದಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಹಾಗೆ ಈ ಕಡೆಯ ಜನರು ಇದನ್ನೆ ಅತಿಯಾಗಿ ಮೆಚ್ಚಿ ಗೌರವಿಸುತ್ತ ಆರಾಧಿಸುತ್ತಾರೆ. ಇದು ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ, ಕುಮಟಾ, ಸಿರಸಿ, ಸಿದ್ಧಾಪುರ, ಸಾಗರ ಇತ್ತ ಕಡೆಗಳಲ್ಲಿ ಬಹು ನಿರೀಕ್ಷೆಯ ಮಟ್ಟದಲ್ಲಿ ಪ್ರಚಲಿತದಲ್ಲಿರುವ ಯಕ್ಷಗಾನ ಕಲೆಯ ಬಗೆ.

ತೆಂಕು ತಿಟ್ಟು ಯಕ್ಷಗಾನ ಕಲೆಯಲ್ಲಿ ಮಾತಿನ ಅರ್ಥಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದರೆ ಬಡಗು ತಿಟ್ಟು ಯಕ್ಷಗಾನ ಕಲೆಯಲ್ಲಿ ನೃತ್ಯಕ್ಕೆ ಮತ್ತು ಸ್ವಲ್ಪ ಕಡಿಮೆಯಾಗಿ ಮಾತಿಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಯಕ್ಷಗಾನದಲ್ಲಿ ಪೌರಾಣಿಕ ಕಥಾಪ್ರಸಂಗಗಳಿಗೆ ಹೆಚ್ಚು ಒತ್ತನ್ನು ನೀಡಿ ರಾಮಾಯಣ, ಮಹಾಭಾರತ ಹೀಗೆ ನಾನಾ ಬಗೆಯ ಪೌರಾಣಿಕ ಕಥೆಯನ್ನಾಧರಿಸಿ ಯಕ್ಷಗಾನವನ್ನು ಪ್ರಸ್ತುತ ಪಡಿಸುತ್ತಾರೆ. ಹಾಗೆ ಸಾಮಾಜಿಕ ಮತ್ತು ಸಂದೇಶ ನೀಡುವ ಕಥೆಗಳನ್ನು ಸಹ ಯಕ್ಷಗಾನದ ಮೂಲಕ ಪ್ರಸ್ತುತ ಪಡಿಸುತ್ತಾರೆ. ನಟಸಾರ್ವಭೌಮ, ಹಿರಿಯ ಯಕ್ಷಪ್ರವೀಣ ಶ್ರೀಯುತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರಿ ಪ್ರಶಸ್ತಿ ಲಭಿಸಿರುವುದು ಯಕ್ಷಗಾನ ಕಲೆಗೆ ದೊರೆತಂತಹ ಮೌಲ್ಯಯುತ ಬೆಲೆ.

ಯಕ್ಷಗಾನಂ ಗೆಲ್ಗೆ, ಯಕ್ಷಗಾನಂ ಬಾಳ್ಗೆ.

ಯಕ್ಷಗಾನದ ಕುರಿತಾದ ನಿಮ್ಮ ಲೇಖನ ಅತ್ಯಂತ ಸ್ವಾಗತಾರ್ಹ. ನಿಮಗೊಂದು ನಮನಗಳು. ಚನ್ನಿದೆ... ಯಕ್ಷಗಾನ ಪ್ರಸಂಗಗಳು ನಡೆಯುವಾಗ ಹೆಚ್ಚಿನದಾಗಿ ಬೆಂಗಳೂರಿನಂತಹ ಮಹಾನಗರಿಯಲ್ಲಿ ತಮ್ಮಂತಹ ಯಕ್ಷಪ್ರೀಯರು ಬಂದು ಯಕ್ಷಗಾನದ ಯಶಸ್ಸಿಗೆ ಕಾರಣರಾಗಬೇಕು. ಧನ್ಯವಾದಗಳು.Vinayak Bhagwathttps://www.blogger.com/profile/03998939383429894093noreply@blogger.comtag:blogger.com,1999:blog-4215797146714128289.post-24694820764874740842014-10-07T11:28:45.757+05:302014-10-07T11:28:45.757+05:30ಗಂಡು ಮೆಟ್ಟಿನ ಕಲೆಯೆಂದೆ ಪ್ರಖ್ಯಾತವಾಗಿರುವ ಜಾನಪದ ಕಲೆಯೆಂ...ಗಂಡು ಮೆಟ್ಟಿನ ಕಲೆಯೆಂದೆ ಪ್ರಖ್ಯಾತವಾಗಿರುವ ಜಾನಪದ ಕಲೆಯೆಂದರೆ ಅದು ಯಕ್ಷಗಾನ. ನವರಸಗಳನ್ನು ಅಭಿವ್ಯಕ್ತ ಪಡಿಸುವ ಶಿಸ್ತುಬದ್ಧವಾಗಿ ಹೆಜ್ಜೆ ಹಾಕುತ ಮನರಂಜಿಸುವ ಕಲೆ. ಯಕ್ಷಗಾನದಲ್ಲಿ ೨ ವಿಧಗಳಿವೆ. ಅದರಲ್ಲಿ ಒಂದು ತೆಂಕು ತಿಟ್ಟು, ಎರಡನೆಯದು ಬಡಗು ತಿಟ್ಟು.

ತೆಂಕು ತಿಟ್ಟು ಇದು ದಕ್ಷಿಣ ಕನ್ನಡದಲ್ಲಿ ಅತಿ ಪ್ರಾಮುಖ್ಯತೆಯನ್ನು ಪಡೆದಿದೆ. ಮತ್ತೆ ಅಲ್ಲಿಯ ಜನಗಳು ಸಹ ತೆಂಕು ತಿಟ್ಟು ಬಗೆಯ ಕಲೆಯನ್ನು ಹೆಚ್ಚು ಮೆಚ್ಚಿ ಅದನ್ನು ಗೌರವಿಸುತ್ತಾರೆ ಇನ್ನು ಕೆಲವರು ಅದನ್ನೆ ಆರಾಧಿಸುತ್ತಾರೆ. ಇದು ಮಂಗಳೂರು, ಪುತ್ತುರು, ಕುಂಬಳ ಕಾಸರಗೋಡು, ಉಡುಪಿ, ಧರ್ಮಸ್ಥಳಗಳಲ್ಲಿ ಅತಿ ಹೆಚ್ಚಿನ ಜನರು ಆಸ್ವಾಧಿಸುವ ಯಕ್ಷಗಾನ ಕಲೆಯ ಬಗೆ.

ಬಡಗು ತಿಟ್ಟು ಇದು ಹೆಚ್ಚಿನದಾಗಿ ಉತ್ತರ ಕನ್ನಡದಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದಿದೆ. ಹಾಗೆ ಈ ಕಡೆಯ ಜನರು ಇದನ್ನೆ ಅತಿಯಾಗಿ ಮೆಚ್ಚಿ ಗೌರವಿಸುತ್ತ ಆರಾಧಿಸುತ್ತಾರೆ. ಇದು ಕುಂದಾಪುರ, ಬೈಂದೂರು, ಭಟ್ಕಳ, ಹೊನ್ನಾವರ, ಕುಮಟಾ, ಸಿರಸಿ, ಸಿದ್ಧಾಪುರ, ಸಾಗರ ಇತ್ತ ಕಡೆಗಳಲ್ಲಿ ಬಹು ನಿರೀಕ್ಷೆಯ ಮಟ್ಟದಲ್ಲಿ ಪ್ರಚಲಿತದಲ್ಲಿರುವ ಯಕ್ಷಗಾನ ಕಲೆಯ ಬಗೆ.

ತೆಂಕು ತಿಟ್ಟು ಯಕ್ಷಗಾನ ಕಲೆಯಲ್ಲಿ ಮಾತಿನ ಅರ್ಥಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದರೆ ಬಡಗು ತಿಟ್ಟು ಯಕ್ಷಗಾನ ಕಲೆಯಲ್ಲಿ ನೃತ್ಯಕ್ಕೆ ಮತ್ತು ಸ್ವಲ್ಪ ಕಡಿಮೆಯಾಗಿ ಮಾತಿಗೆ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಯಕ್ಷಗಾನದಲ್ಲಿ ಪೌರಾಣಿಕ ಕಥಾಪ್ರಸಂಗಗಳಿಗೆ ಹೆಚ್ಚು ಒತ್ತನ್ನು ನೀಡಿ ರಾಮಾಯಣ, ಮಹಾಭಾರತ ಹೀಗೆ ನಾನಾ ಬಗೆಯ ಪೌರಾಣಿಕ ಕಥೆಯನ್ನಾಧರಿಸಿ ಯಕ್ಷಗಾನವನ್ನು ಪ್ರಸ್ತುತ ಪಡಿಸುತ್ತಾರೆ. ಹಾಗೆ ಸಾಮಾಜಿಕ ಮತ್ತು ಸಂದೇಶ ನೀಡುವ ಕಥೆಗಳನ್ನು ಸಹ ಯಕ್ಷಗಾನದ ಮೂಲಕ ಪ್ರಸ್ತುತ ಪಡಿಸುತ್ತಾರೆ. ನಟಸಾರ್ವಭೌಮ, ಹಿರಿಯ ಯಕ್ಷಪ್ರವೀಣ ಶ್ರೀಯುತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಪದ್ಮಶ್ರಿ ಪ್ರಶಸ್ತಿ ಲಭಿಸಿರುವುದು ಯಕ್ಷಗಾನ ಕಲೆಗೆ ದೊರೆತಂತಹ ಮೌಲ್ಯಯುತ ಬೆಲೆ.

ಯಕ್ಷಗಾನಂ ಗೆಲ್ಗೆ, ಯಕ್ಷಗಾನಂ ಬಾಳ್ಗೆ.

ಯಕ್ಷಗಾನದ ಕುರಿತಾದ ನಿಮ್ಮ ಲೇಖನ ಅತ್ಯಂತ ಸ್ವಾಗತಾರ್ಹ. ನಿಮಗೊಂದು ನಮನಗಳು. ಚನ್ನಿದೆ... ಯಕ್ಷಗಾನ ಪ್ರಸಂಗಗಳು ನಡೆಯುವಾಗ ಹೆಚ್ಚಿನದಾಗಿ ಬೆಂಗಳೂರಿನಂತಹ ಮಹಾನಗರಿಯಲ್ಲಿ ತಮ್ಮಂತಹ ಯಕ್ಷಪ್ರೀಯರು ಬಂದು ಯಕ್ಷಗಾನದ ಯಶಸ್ಸಿಗೆ ಕಾರಣರಾಗಬೇಕು. ಧನ್ಯವಾದಗಳು.Vinayak Bhagwathttps://www.blogger.com/profile/03998939383429894093noreply@blogger.comtag:blogger.com,1999:blog-4215797146714128289.post-22629415179200627772014-10-07T07:22:55.290+05:302014-10-07T07:22:55.290+05:30ಬಾಲಣ್ಣಾ...
ಯಕ್ಷಗಾನವೆಂದರೆ ಕುಣಿಯುವದೆಮ್ಮೆದೆ..
ಯಕ್ಷಗಾ...ಬಾಲಣ್ಣಾ...

ಯಕ್ಷಗಾನವೆಂದರೆ ಕುಣಿಯುವದೆಮ್ಮೆದೆ..
ಯಕ್ಷಗಾನವೆಂದರೆ ಕಿವಿ ನಿಮಿರುವದು..."

ಯಕ್ಷಾಗಾನವೆಂದರೆ ಅಷ್ಟು ಹುಚ್ಚು....

ತುಂಬಾ ಶ್ರೀಮಂತವಾದ ಕಲೆ..
ಅದರಲ್ಲಿ ಏನುಂಟು.. ಏನಿಲ್ಲ..

ಶಾಸ್ತ್ರೀಯ ನೃತ್ಯವಿದೆ.. ಶಾಸ್ತ್ರೀಯ ಗಾನವಿದೆ...
ಶಾಸ್ತ್ರೀಯವಾದ ತಾಳ.. ಲಯ.. ಮಟ್ಟುಗಳಿವೆ...
ತರ್ಕಬದ್ಧವಾದ.. ಅಧ್ಯಯನಶೀಲ ಮಾತುಗಳು...

ಮೊದಲೆಲ್ಲ
ಯಕ್ಷಗಾನವೆಂದರೆ ರಾತ್ರಿ ಒಂಬತ್ತುಗಂಟೆಯಿಂದ.. ಬೆಳಿಗ್ಗೆ ಆರುಗಂಟೆಯವರೆಗೆ ನಡೆಯುತ್ತಿತ್ತು...

ಒಂದು ದಿನ ಯಕ್ಷಗಾನ ನೋಡಿ ಬಂದರೆ
ಒಂದು ವಾರವಿಡೀ ಕಿವಿಯಲ್ಲಿ ಯಕ್ಷಗಾನದ ಚಂಡೆ ಮದ್ದಲೆಗಳ ಮೊರೆತ.. !

ನಮ್ಮ ಕಾರಂತಜ್ಜನಿದ್ದಾಗ
"ಜಾಗತಿಕ ಜಾನಪದ ಕಲೆಗಳ ಸ್ಪರ್ಧೆಗೆ" ಯಕ್ಷಗಾನವನ್ನೂ ಕರೆದೊಯ್ದು...
ಅವರಿಗೆಲ್ಲ ಯಕ್ಷಗಾನವನ್ನು ತೋರಿಸಿದ್ದರು..
ನಮ್ಮ "ಯಕ್ಷಗಾನಕ್ಕೆ" ಸಮನಾದ ಜಾನಪದ ಕಲೆ ಮತ್ತೊಂದಿಲ್ಲ ಅಂತ ಖ್ಯಾತಿ ಪಡೆಯಿತು..

ಇಂಥಹ ಕಲೆಯಿರುವ ನಾಡಿನಲ್ಲಿ ನಾವಿದ್ದೆವಲ್ಲ.. ಅದು ನಮ್ಮ ಪುಣ್ಯ....

ಯಕ್ಷಗಾನ ಕುರಿತು
ನಿಮ್ಮ ಪ್ರೀತಿಗೆ ನಮ್ಮ ಯಕ್ಷಗಾನ ಪ್ರೇಮಿಗಳ ಪ್ರೀತಿಯ ನಮನ...Ittigecementhttps://www.blogger.com/profile/06136866369923002369noreply@blogger.com