Saturday, June 26, 2010

ಪ್ರಶಸ್ತಿ ಪಡೆದ ಈ ಚಿತ್ರ ಒಬ್ಬ ಅದ್ಭುತ ಛಾಯ ಚಿತ್ರಗಾರನ ಆತ್ಮಹತ್ಯೆಗೆ ಕಾರಣವಾಯಿತು!!!

ನನ್ನ ಸ್ನೇಹಿತ ಅನಿಲ್ ಮನೆಯಲ್ಲಿ ಹರಟುತ್ತಾ ಕುಳಿತ್ತಿದ್ದೆ   ಹಾಗೆ ನನ್ನ ಕಣ್ಣಿಗೆ ಒಂದು  ಹೊಸ ವರುಷಕ್ಕೆ ನೀಡಿದ ಶುಭಾಶಯ ಪತ್ರ ಸಿಕ್ಕಿತು ,ಪತ್ರದಲ್ಲಿನ ಮಾಹಿತಿ ನನ್ನ ಮನ ಕಲಕಿ  ವಿಷಯದ ಬೆನ್ನತ್ತಿದಾಗ ತೆರೆದುಕೊಂಡಿದ್ದು ಈ ಮನಕರಗುವ  ಸಂಗತಿ ನಿಮ್ಮೊಡನೆ ಹಂಚಿ ಕೊಳ್ಳಲು ಇಲ್ಲಿ ದಾಖಲಿಸಿದ್ದೇನೆ.1994  ರ ಲ್ಲಿ ಸುಡಾನ್ ನ ಬರಗಾಲದ ಭೀಕರತೆ  ವಿಶ್ವಕ್ಕೆ ಅಷ್ಟಾಗಿ ಗೊತ್ತಿರಲಿಲ್ಲ  ಇದರ ಚಿತ್ರಣ ನೀಡಲು  ವಿಶ್ವಾದ್ಯಂತ ಹಲವು ಫೋಟೋ ಜರ್ನಲಿಸ್ಟ್ ಗಳು  ಸುಡಾನ್ ಗೆ ತೆರಳಿದ್ದರು.ಅವರಲ್ಲಿ ಪ್ರಮುಖ ನಾದವ  ಈ ಕೆವಿನ್ ಕಾರ್ಟರ್. ಕೆವಿನ್  ಕಾರ್ಟರ್ ದಕ್ಷಿಣ ಆಫ್ರಿಕಾ ದ ಜೋಹಾನ್ಸ್ಬರ್ಗ್  ನವನು


 


ವಿಶ್ವ ವಿಖ್ಯಾತ ಘಟನೆಗಳ ಫೋಟೋಗಳು ಇವನ ಕ್ಯಾಮರದಲ್ಲಿ ಸೆರೆಯಾಗಿದ್ದವು  ಬರದ ದೇಶದಲ್ಲಿ ತೆಗೆದ ಈ ಕೆಳಗಿನ  ಒಂದು

ಫೋಟೋ ಜಗತ್ತಿಗೆ ಸುಡಾನ್ ದೇಶದ ಬರದ ಭೀಕರತೆ ಬಗ್ಗೆ ಜಗತ್ತಿಗೆ ಮಾಹಿತಿ ನೀಡಿ ತಲ್ಲಣ ಗೊಳಿಸಿತು.ಈ ಚಿತ್ರಕ್ಕಾಗಿ  ಕೆವಿನ್ ಕಾರ್ಟರ್ ಗೆ ಪುಲಿಟ್ಜರ್ 1994 ರ ಪ್ರಶಸ್ಥಿ  ಗಿಟ್ಟಿಸಿದ !!!ಈ  ಚಿತ್ರ  ಸುಡಾನ್ ದೇಶದ ಬರಗಾಲದ ಒಂದು ದಿನ  ಹಸಿವಿನಿಂದ ನರಳುತ್ತಾ  ಹತ್ತಿರ ವಿಶ್ವಸಂಸ್ಥೆ   ತೆರೆದಿದ್ದ  ಆಹಾರ ಕೇಂದ್ರಕ್ಕೆ ತೆವಳಿಕೊಂಡು ತೆರಳುತ್ತಿರುವ  ಆನಾಥ ಮಗು ,......... ಪಕ್ಕದಲ್ಲೇ ತನ್ನ ಆಹಾರ ಕ್ಕಾಗಿ  ಈ ಮಗು ಸಾಯುವುದನ್ನು ಕಾದು ಕೂತ  ರಣಹದ್ದು !!!! ಬದುಕು ಸಾವಿನ ಮಧ್ಯೆ ತೂಗುಯ್ಯಾಲೆಯಲ್ಲಿರುವ  ಒಂದು ಜೀವದ ಚಿತ್ರಣ !!!ಈ ಚಿತ್ರವನ್ನು ಸೆರೆ ಹಿಡಿಯಲು ಕೆವಿನ್ ಪಟ್ಟ ಸಾಹಸ ಬಹಳಷ್ಟು. ಹದ್ದು ಹಾಗು ಮಗುವಿನಿಂದ  ಅತ್ಯಂತ ಸನಿಹದಿಂದ ಹತ್ತು ಮೀಟರ್  ದೂರದಲ್ಲಿ  ತನ್ನ ಚಾಣಾಕ್ಷತನದಿಂದ  ಈ ಘಟನೆ ಸೆರೆ ಹಿಡಿದು  ಎಲ್ಲರ ಮನ ಕಲಕಿ ಬಿಟ್ಟ !!! ಸುಡಾನ್ ದೇಶದ ಬರದ ಚಿತ್ರಣವನ್ನು ಜಗತ್ತು  ಅರ್ಥೈಸಿಕೊಂಡಿದ್ದು  ಇದೆ ಚಿತ್ರದಿಂದ .ದುರಂತವೆಂದರೆ ಈ ಘಟನೆ ಇಂದ ಹೊರ ಬರಲಾರದ ಕೆವಿನ್ ಕಾರ್ಟರ್ ಜೀವನದಲ್ಲಿ ನಿರಾಶೆಗೊಂಡು ಆತ್ಮ ಹತ್ಯೆಗೆ  ಶರಣಾದ. ಜಗತ್ತಿಗೆ  ಅದ್ಭುತ ಚಿತ್ರಗಳ ಮೂಲಕ ವಿಚಾರ ಮುಟ್ಟಿಸುತ್ತಿದ್ದ ಒಬ್ಬ ಅದ್ಭುತ ಫೋಟೋ ಗ್ರಾಫಾರ್  ಜಗತ್ತಿನಿಂದ ಮರೆಯಾದ.  ನಮ್ಮ ದೇಶದಲ್ಲಿ ಆನ್ನ, ನೀರಿಗೆ ಬರವಿಲ್ಲ  ಪ್ರತಿಷ್ಠೆಗೆ  ಮದುವೆ ಮನೆಗಳಲ್ಲಿ, ಹಲವಾರು ಸಂದರ್ಭಗಳಲ್ಲಿ  ನಾವು ಚೆಲ್ಲುವ ಆಹಾರದ ಬಗ್ಗೆ ಯೋಚಿಸಿದರೆ  ನಮಗೆ .............ನಾಚಿಕೆ ಆಗುವುದಿಲ್ಲವೇ????ಇನ್ನಾದರೂ  ಆನ್ನ ತಿನ್ನುವ ಮೊದಲು  ಈ ಚಿತ್ರ ನೋಡಿ  ಆಹಾರ ,ನೀರು  ಪೋಲಾಗದಂತೆ ಎಚ್ಚರ ವಹಿಸಲು  ಇಂದೇ ತೀರ್ಮಾನಿಸೋಣ .  ಈ ಮೂಲಕ ಕೆವಿನ್ ಕಾರ್ಟರ್ ಗೆ  ನಮನ ಸಲ್ಲಿಸೋಣ

Thursday, June 17, 2010

ಮೈಸೂರು zoo ನಲ್ಲಿ ಬ್ಲಾಕ್ ಬಕ್ ಚಿಂಕೆಗಳ ಕಾದಾಟ.ಭಾಗ.o01

ದಿನಾಂಕ ೧೨/೦೬/೨೦೧೦ ರಂದು ಸ್ನೇಹಿತ ನೊಂದಿಗೆ ಮೈಸೂರಿನ zoo   ge ಭೇಟಿನೀಡಿದಾಗ ಸಿಕ್ಕ ಹಲವಾರು  ಕೌತುಗ ಮಯ ಸನ್ನಿವೇಶಗಳಲ್ಲಿ ಇದೂ ಒಂದು .ಮಳೆನಿಂತ  ನಂತರ ಬೀಸಿದ ತಂಗಾಳಿಯ ತಂಪಿನಲಿ ಮೈ ಬಿಸಿ ಮಾಡಿಕೊಳ್ಳಲು ಈ ಎರಡು black buck deers  ಕಾದಾಡಲು ಶುರುಮಾಡಿದ್ದವು. ಅಪರೂಪಕ್ಕೆ ಬಂದಿದ್ದ ನನಗೆ ಉತ್ತಮ ವೀಡಿಯೊ ಸಿಕ್ಕಿತ್ತು. ಬನ್ನಿ ನೋಡಿ ನಲಿಯಿರಿ.ಮುಂದೆ ನೀವು ಇಲ್ಲಿಗೆ ಬಂದಾಗ ನಿಶಬ್ದವಾಗಿದ್ದರೆ  ನಿಮಗೂ ಇಂತಹ ನೋಟ ಸಿಕ್ಕೀತು.ಮುಂದೆ ಇಲ್ಲಿಗೆ ಬನದರೆ ಗಲಾಟೆ ಮಾಡದೆ ನೋಡಿ ಅಲ್ವ!!!!

ಮೈಸೂರಿನ ಜೂ ನಲ್ಲಿ ಬ್ಲಾಕ್ ಬಕ್ ಜಿಂಕೆಗಳ ಕಾದಾಟ !!!ಭಾಗ ..2

ನಾನು ಮೈಸೂರಿನಲ್ಲಿದ್ದರೂ ಸಹ  ಮೈಸೂರಿನ ಜೂ ಗೆ ಹೋಗಿ ಬಹಳ ವರ್ಷಗಳೇ ಆಗಿತ್ತು!!. ಸುಮ್ನೆ ಜನ ಜಂಗುಳಿ  ,ಗದ್ದಲ ,ಪ್ರಾಣಿಗಳಿಗೆ ತೊಂದರೆ ಕೊಡುವ ಪ್ರವಾಸಿಗಳ ಮಂಗನಾಟ ನೋಡಿ ಅಲ್ಲಿಗೆ ಹೋಗೋದೂ ಅಂದ್ರೆ ಒಂತರಾ ಬೇಜಾರಿನ ವಿಷಯವಾಗಿತ್ತು. ಕಳೆದ ಶನಿವಾರ ದಿನಾಂಕ ೧೨/೦೬/೨೦೧೦ ರಂದು ನನ್ನ ಮಿತ್ರ  ದತ್ತ  ಬಂದ ಗುರು ಜೋನೊದಿ ತುಮ್ಬ ದಿನ ಆಯ್ತು ನದಿ ಬೆಳಿಗ್ಗೆನೆ ಹೋಗೋಣ ಅಂದ . ಸರಿ ನಡಿ ಹೋಗೋಣ ಅಂತ ನನ್ನ ಸ್ಕೂಟರ್ ಏರಿ ಹೊರೆಟೆವು. ಬಹಳ ದಿನಗಳ ನಂತರ  zoo ನೋಡಲು  ಬಂದ ನಮ್ಮನ್ನು ತುಂತುರು ಮಳೆ ಹನಿ ಸ್ವಾಗತ ನೀಡಿ ಒಳಗಡೆ ಕರೆದೊಯ್ತು . ನಮ್ಮ ಪುಣ್ಯ ಜನಜಂಗುಳಿ ಕಡಿಮೆ ಇತ್ತು . ಹಾಗೆ ಸುಮಾರು 5  ಘಂಟೆಗಳ ಕಾಲ ಸುತ್ತಾಡಿದ ನಮಗೆ ಹಲವಾರು ವಿಶೇಷಗಳು  ಕಂಡವು ಅದರಲ್ಲಿ ಕೆಲವು   ವೀಡಿಯೊ ಮೂಲಕ ಸೆರೆ ಸಿಕ್ಕಿವೆ. ಈ ವೀಡಿಯೊ ನೋಡಿ ಎರಡು blackbuck  ಜಿಂಕೆಗಳು ಗುದ್ದಾಟ  ನಡೆಸಿದ್ದವು ಅದನ್ನು ಇನ್ನೆರಡು ಜಿಂಕೆಗಳು ನೋಡಿ ಬೆಪ್ಪಾಗಿ ನಿಂತಿದ್ದವು. ಅದರ ಒಂದು ಜ್ಹಲಕ್ ನಿಮಗಾಗಿnodi ಆನಂದಿಸಿ .

Monday, June 14, 2010

ಬನ್ನಿ ಚಿತ್ತಾರದ ಮುಗಿಲ ಲೋಕದೊಳಗೆ ನಲಿದು ಬರೋಣ !!!ಇಲ್ಲಿದೆ ನೋಡಿ ಮುಗಿಲ ಪೇಟೆ !!

ಸುಮ್ಮನೆ ಮನೆಯಲ್ಲಿ ಕುಳಿತಿದ್ದವನಿಗೆ ,ಗೆಳೆಯ ರಘು  ಫೋನ್ ಮಾಡಿ  ನಾಳೆ  ಬರ್ತಿಯೇನೋ ಸುಮ್ನೆ ಎಲ್ಲಿಗಾದ್ರೂ ಆಚೆ ಹೋಗಿ ಬರೋಣ ಅಂದ. ಸರಿ ನದಿ ನಂಗೂ ಯಾಕೋ ಬೇಜಾರು ಸುಮ್ನೆ ಒಂದು ರೌಂಡ್ ಹಾಕೋಣ ಅಂತ ಅಂದೇ. ಸರಿ ರಡಿಯಾಗಿರು ಬೆಳಿಗ್ಗೆ ಆರು ಘಂಟೆಗೆ ಮನೆಗೆ ಬರ್ತೀನಿ ಅಂತ ಅಂದ, ಸರಿಯಪ್ಪ ಅಂತ ಹೇಳಿ ಫೋನ್ ಇಟ್ಟೇ.ಮಾರನೆದಿನ ಪುಣ್ಯಾತ್ಮ ಬೆಳಿಗ್ಗೆ 5 ಘಂಟೆಗೆ ಮನೆಗೆ ಹಾಜರಾಗಿ ಲೇ ಏಳೂ ರೆದಿಯಾಗಿಲ್ವಾ ಸೋಮಾರಿ !!! ಅಂತ ಸುಪ್ರಭಾತ ಹಾಡಿ ಎಬ್ಬಿಸಿದ .ಮನಸ್ಸೊಳಗೆ ಅವನನ್ನು ಬೈದುಕೊಂಡು  ಒಲ್ಲದ ಮನಸ್ಸಿನಿಂದ ಹೊರಡಲು ಸಿದ್ದನಾದೆ.ಮನೆಗೆ ವಿಷಯ ತಿಳಿಸಿ ಹೊರಟ ನಾವು , ಒನ್ ಡೋಸ್ ಕಾಫಿ ಕುಡಿತಾ ಎಲ್ಲಿಗೆ ಹೋಗೋದು ಅಂತ ತೀರ್ಮಾನಿಸೋಣ ಅಂತ ಒಂದು ಕಾಫಿ ಸ್ಟಾಲ್ ಹತ್ತಿರ ನಿಂತ್ವಿ.ಏನೆ ಆಗ್ಲಿ ರೀ ಬೆಳಗಾಗಿ ಒಂದು ಡೋಸು ಕಾಫಿ ಕುಡಿಲಿಲ್ಲ್ಲಾ ಅಂದ್ರೆ ಬುದ್ದಿನೆ ಓಡೊಲ್ಲ ಅನ್ನುತ್ತೆ !!! ಹಾಗೆ ಬಿಸಿ ಬಿಸಿ ಕಾಫಿ ಹೀರ್ತಾ ಹೋಗುವ ಜಾಗ ತೀರ್ಮಾನಿಸಿ ಕಾರನ್ನು ನಂಜನಗೂಡು ರಸ್ತೆಗೆ ತಿರುಗಿಸಿದ್ವಿ .ಹಾಗೆ ಹೋಗ್ತಾ ಹೋಗ್ತಾ ನಂಜನಗೂಡು ದಾಟಿ ಗುಂಡ್ಲುಪೇಟೆ ಬಂತು ಹೊಟ್ಟೆ ಚುರುಗುಟ್ಟಲು ಶುರು ಮಾಡಿತು ಸರಿ ತಿಂಡಿ ತಿನ್ನೋಕೆ ಅಂತ ಒಂದು ಹೋಟೆಲಿಗೆ ಹೋದ್ವಿ ಅಲ್ಲಿದ್ದ ಜನಜಂಗುಳಿ ನೋಡಿ ಆಶ್ಚರ್ಯವಾಯಿತು. ಭಂಡಿಪುರ ,ಊಟಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ , ಕೇರಳ ಕಡೆಗೆ ಹೋಗುವ ಪ್ರವಾಸಿಗಳ ದಂಡು.ಒಟ್ಟಿನಲ್ಲಿ ಇಲ್ಲಿಂದ ಬೇಗ ಜಾಗ  ಖಾಲಿ ಮಾಡಿ ಒಡೋಣ ಅಂತ ಬೇಗ ಸಿಕ್ಕಿದ  ಇಡ್ಲಿ ಸಾಂಭಾರ್ ತಿಂದು ಆಚೆ ಬಂದ್ವಿ. ತಕ್ಷಣ ಈ ಪ್ರವಾಸಿಗಳ ಸೈನ್ಯ ಧಾಳಿ ಮಾಡುವ ಮುನ್ನ  ಹಿಮವದ್ ಗೋಪಾಲ ಸ್ವಾಮೀ ಬೆಟ್ಟಕ್ಕೆ ತಲುಪೋಣ ಅಂತ ಪಯಣ ಮುಂದುವರೆಸಿ ಕಾರನ್ನು ಅತ್ತ ಓಡಿಸಲು ಸ್ನೇಹಿತನಿಗೆ ಹೇಳ್ದೆ ಅವನಾಗಲೇ ತೀರ್ಮಾನಿಸಿ ಬಾಲು ನಿನ್ನ ಕ್ಯಾಮರ ರೆಡಿ ಮಾಡಿಟ್ಕೋ ಅಂತ ಹೇಳಿ ಕಾರನ್ನು ಚಾಲನೆ ಮಾಡಿದ್ದ .ಹಾಗೆ ಕಿಟಕಿಯಲ್ಲಿ ಇಣುಕುತ್ತ ಸಾಗಿದ ನನಗೆ ಕಾರಿನಲ್ಲಿನ ಸಿ.ಡೀ. ಪ್ಲೇಯರ್ ನಿಂದ ಬರುತ್ತಿದ್ದ ಗಾಳಿಪಟ  ಚಿತ್ರದ " ಮಿಂಚಾಗಿ ನೀನು ಬರಲೂ " ಅನ್ನೋ ಹಾಡು ಆ ಚಿತ್ರದಲ್ಲಿ  ಬರುವ ಮುಗಿಲ ಪೇಟೆ  ಅಂತ ತೋರಿಸುವ ಒಂದು ಕಾಲ್ಪನಿಕ ಊರಿನ ಜ್ಞಾಪಕ  ಬರಿಸಿ  ಬಿಟ್ಟಿತ್ತು. ಲೋ ರಘು ಇವತ್ತು ನಾನು ಬರಿ ಮೋಡಗಳ ಚಿತ್ರ ಜಾಸ್ತಿ ತೆಗಿತೀನಿ ಅಂದೇ. ಅವನು ಲೋ ನಿನ್ನನ್ನು  ಕರ್ಕೊಂಡು ಬಂದವನು ನಾನು ನಂದು ಫೋಟೋ ತೇಗಿ ಮಾರಾಯ ಅಂದ!!! ಹಾಗು ಹೀಗೂ ಕಾರು ಶುರು ಮಾಡಿತ್ತು. ಕಡಿದಾದ  ರಸ್ತೆಯಲ್ಲಿ ಕಾರು ಸಾಗಿತ್ತು ನನ್ನ ಕ್ಯಾಮರ ಕಣ್ಣಿಗೆ ಕಂಡದನ್ನು ಕ್ಲಿಕ್ಕಿಸಲು ಶುರು ಮಾಡಿತ್ತು. ಮುಂಜಾವಿನ ಹಿತಕರ ಗಾಳಿ ನಮ್ಮನ್ನು ಸ್ವಾಗತಿಸಿತ್ತು.
ಕಣ್ಣಿ ಗೆ ಆಗಸದ ಮೋಡಗಳು ಅಂದವಾಗಿ ಕಾಣತೊಡಗಿದವು, ಕಾನನ ಹಾಗು ಬೆಟ್ಟಗಳ ಸುತ್ತುವರೆದ ಮೋಡಗಳು ಮುಂಜಾವಿನ ಸೋಭಗನ್ನು ಇಮ್ಮಡಿ ಗೊಳಿಸಿದ್ದವು.
ಹಿಮವದ್ ಗೋಪಾಲಸ್ವಾಮಿಯ ದೇವಾಲಯ ಹಸಿರ ಬೆಟ್ಟ ಹಾಗು ನೀಲಿ ಆಗಸದಲ್ಲಿನ  ಮೋಡಗಳ ಶೃಂಗಾರದ ನಡುವೆ ಮೋಹಕವಾಗಿ ಕಂಡಿತು.
ಹಾಗೆ ಕಾರು ನಿಲ್ಲಿಸಿ ದೇವಾಲಯದ ಆವರಣ ಪ್ರವೇಶಿಸಿದ ನಾವು ಹಿಮವದ್ ಗೋಪಾಲ ಸ್ವಾಮೀ  ದರ್ಶನ ಪಡೆದು ಹೊರಬಂದು ಆವರಣದಲ್ಲಿ ಅಡ್ಡಾಡಲು ಹೊರಟೆವು
ಆಗಲೇ ಶುರುವಾಗಿತ್ತು ಮೋಡಗಳ ಚೆಲ್ಲಾಟ ಸುತ್ತಮುತ್ತಲಿನ ಗಿರಿ ಶ್ರೇಣಿ ಮೋಡಗಳ  ಅಪ್ಪುಗೆಯ ಮಧ್ಯೆ ಮೀಯುತ್ತಿದ್ದವು.
  .ಇದೇನು ಕ್ಷೀರ ಸಾಗರವೋ

ಅಥವಾ ಮೋಡಗಳ ನಲಿದಾಟದ ತಾಣವೋ ಒಂದು ತಿಳಿಯದೆ ವಿಸ್ಮಯದಿಂದ ಸರಸರನೆ ಕ್ಯಾಮರ ಕ್ಲಿಕ್ಕಿಸಲು ಶುರುಮಾಡಿದೆ.ಗಿರಿ ಕಾನನದ ನೆತ್ತಿಯ ಮೇಲೆ ಮೋಡಗಳ ಮೆರವಣಿಗೆ ಸಾಗಿ, ಇದೆ ಮುಗಿಲ ಪೇಟೆ ಅಂತ ಮನಸ್ಸು ಹೇಳಿತ್ತು.ನನ್ನ ಗೆಳೆಯ ರಘು ಲೋ ಅಲ್ನೋಡೋ!! ಅದನ್ನು ತೆಗಿ, ಒಳ್ಳೆ ಸೀನು!! ಪಾಯಿ, ಅಂತ ತಾನು ಕಂಡದ್ದನ್ನೆಲ್ಲಾ ಕ್ಲಿಕ್ಕಿಸಲು ಪ್ರೇರಣೆ ನೀಡುತ್ತಿದ್ದ.ಆಗ ಕಂಡಿದ್ದು
ಹಸಿರ ಉಡುಗೆಯ ತೊಟ್ಟ ಗಿರಿಯ ಹಿಂದೆ ಸಾಗಿದ್ದ ಮೋಡಗಳ ಸಾಲು ಸಾಲು ಚಿತ್ತಾರಗಳ ಮಾಲೆ !!!!ಸ್ವಲ್ಪ ಜಾಗ ಬದಲಿಸಿ ಮುನ್ನಡೆದ ನಮಗೆ ಇನ್ನೊಂದು ಮೋಹಕ ನೋಟ ಸಿಕ್ಕಿತು
ನೀಲಿ ಬೆಟ್ಟವನ್ನು ಸುತ್ತುವರೆದ ಬಿಳಿ ಮೋಡಗಳು ನರ್ತನ ಮಾಡಿ ನಲಿದು ಬೆಟ್ಟವನ್ನು ಅಪ್ಪಿ ಕುಣಿದಿದ್ದವು.ಕ್ಯಾಮರ ಲೆನ್ಸ್ ಸರಿಪಡಿಸಿ  zoom ಮಾಡಿದ ನನಗೆ ಮೋಹಕ ಚಿತ್ರಗಳು ಸಿಗತೊಡಗಿದವು ಬೆಟ್ಟಗಳನ್ನು ಸುತ್ತುವರೆದು ನಾಟ್ಯ ವಾದಿದ್ದ ಮೋಡಗಳು ಮಾಯಾಲೋಕವನ್ನು ಅನಾವರಣ ಗೊಳಿಸಿದ್ದವು  ಧಣಿವಿನ  ಮನಸ್ಸಿಗೆ, ಉಲ್ಲಾಸದ ಸಿಂಚನವಾಗಿ ಮನಸ್ಸು ನಲಿದಿತ್ತು.ಮೋಡಗಳ ಮಾಯಾಲೋಕದ ಮಾಯೆಯಿಂದ ಬಿಡಿಸಿಕೊಂಡು  ದೇವಾಲಯದ ಆವರಣ ಬಿಟ್ಟು ಹೊರಟೆವು ಮೆಟ್ಟಿಲು ಇಳಿಯುವಾಗ
ಸ್ವಾಮೀ!!! ಧರ್ಮಾ ಮಾಡಿ !!ಗೋವಿಂದಾ ಗೋವಿಂದಾ ಅಂತ  ಮೂರು ಜನ ದಾಸಯ್ಯ ಗಳು ಜಾಗಟೆ ಬಡಿದು ಬೇಡಿದ್ದರು, ಅವರ ಹಿಂದೆಪ್ರೇಮಿಗಳು ಮರ ಹತ್ತಿ  ಪ್ರಣಯದಾಟ ನಡೆಸಿದ್ದರು!!! ಈ ಪ್ರಕೃತಿಯೇ  ಹಾಗೆ ಒಬ್ಬೊಬ್ಬರಿಗೆ ಒಂದೊಂತರ ಪ್ರೇರಣೆ ನೀಡುತ್ತೆ!!!ಪ್ರವಾಸಿಗಳ ಸೈನ್ಯಆಗಲೇ ಈ ಪ್ರದೇಶಕ್ಕೆ ದಾಳಿ ಇಟ್ಟಾಗಿತ್ತು. ಸರಿ ಇಲ್ಲಿಂದ ಜಾಗ ಖಾಲಿ ಮಾಡೋಣ ಅಂಥಾ ನಾವು ಹೊರಟೆವು .ಮುಂದೆ ಎಲ್ಲಿಗೆ ಮಾರಾಯ ಅಂತನಾನುಗೆಳೆಯನನ್ನು ಕೇಳಿದೆ ಲೋ ನಡೀ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗೋಣ ಅಲ್ಲಿಯೂ ನೋಡೋಕೆ ಆಸೆ ಯಾಗಿದೆ ಅಂದ!! ಸರಿ ನಡೀರಿ ಸಾರ್ ಅಂದೇ. ಪಯಣ ಸಾಗಿತು.ಹಿಮವದ್ಗೋಪಾಲಸ್ವಾಮಿ ಬೆಟ್ಟದಿಂದ ಗುಂಡ್ಲುಪೇಟೆ ತಲುಪಿ ಚಾಮರಾಜ ನಗರ ದಾಟಿ ಬಿಳಿಗಿರಿ ಬೆಟ್ಟಗಳನ್ನು ಹತ್ತಲು ಕಾರು ಮುಂದಾಗಿತ್ತು.ಬಿಳಿಗಿರಿ ಕಾನನದಲ್ಲಿ ಕಾಡು ಪ್ರಾಣಿಗಳು ಸಿಗಬಹುದೆಂದು ಆಸೆ ಇಂದ ಕ್ಯಾಮರ ಸಿದ್ದವಾಗೆ ಇಟ್ಟುಕೊಂಡಿದ್ದ ನನಗೆ ಏನೂ ದೊರೆಯದೆ ನಿರಾಸೆ ಆಗಿತ್ತು.
ಕಾನನದ ಹಾದಿಯಲ್ಲಿ ಒಂದು ಕಡೆ ಮೋಡಗಳು ನನ್ನನ್ನು ಅಣಕಿಸಿ ಯಾಕೆ ನಾವು ಮರೆತುಹೋದೆವ  ಅಂದಹಾಗೆ ಅನ್ನಿಸಿ ಸುಮ್ಮನೆ ಕ್ಲಿಕ್ಕಿಸಿದೆ ಒಣಗಿದ ಕಾನನದಲ್ಲಿ ಮೋಡಗಳು  ಚೆಲ್ಲಿದ್ದವು! ಒಣಗಿದ ಮರಗಳು ಮೋಡಗಳನ್ನು ಮಳೆಸುರಿಸಲು ಬೇಡುತ್ತಿದ್ದವು!!ಪಯಣದ ಹಾದಿಯಲ್ಲಿ ಸಿಕ್ಕೊಂದು ಕೆರೆಯ ಪಕ್ಕ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯಲು ನಿಂತೆವು.
ಸುಂದರವಾದ ಕಾನನದ ಮಧ್ಯೆ ನಿಶಬ್ದ ವಾದ ಪರಿಸರದಲ್ಲಿ  ಆ ಕೆರೆ ಇತ್ತು ದಡದಲ್ಲಿ  ಸುಮ್ಮನೆ ಕುಳಿತು ನಮ್ಮನ್ನೇ ನಾವು ಮರೆತಿದ್ದೆವು. ಆಗ ಬಂತು ಒಂದು ಕಾರು !! ನಮ್ಮನ್ನು ನೋಡಿ ನಿಲ್ಲಿಸಿದ ಕಾರಿನವರು ಏನಾದರೂ ಪ್ರಾಣಿಗಳು ಸಿಕ್ತ!!! ಅಂತ ಕೇಳಿದರು. ನಾವು ನಿರಾಸೆ ಇಂದ ಇಲ್ಲಾ ಸಾರ್ ಏನೂ ಸಿಕ್ಲಿಲ್ಲಾ ಅಂತಾ ಪೇಚು ಮೊರೆ ಹಾಕಿದೆವು.ಆಗ ಕಾರಿನೊಳಗಿದ್ದ ಒಬ್ಬ ಮಹಿಳೆ ಸಾರ್ ಅದೇನು ಅಲ್ಲಿ ಹೋಗ್ತೈರೋದು ಅಂಥಾ ಕೇಳಿದರೂ ಹಿಂತಿರುಗಿ ನೋಡಿ
ತಡಮಾಡದೆ ಕ್ಲಿಕ್ಕಿಸಿದ್ದೆ !!!ಆಗ ಸಿಕ್ಕಿದ್ದೇ ಈ ಕಂದು ಬಣ್ಣದ[ striped mangoose ]ಮುಂಗುಸಿ ನಿಧಾನವಾಗಿ ಪೊದೆಯಿಂದ ಆಚೆ ಬಂದು ಹೋಗುತ್ತಿತ್ತು ಏನೂ ಸಿಕ್ಕದೆ ಪೆಚ್ಚಾಗಿದ್ದ ನಮಗೆ ಸ್ವಲ್ಪ ಸಮಾಧಾನ ವಾಗಿ ಪಯಣ ಮುಂದುವರೆಸಿದೆವು.ಬಿಳಿಗಿರಿರಂಗನ ಬೆಟ್ಟ ತಲುಪಿದೇವಾಲಯದಲ್ಲಿ ದೇವರ ದರ್ಶನ ಪಡೆದು ದೇವಾಲಯದ ಪಕ್ಕದಲ್ಲಿ ಇರುವ ಕಮರಿ ಬಳಿ ತೆರಳಿದೆವು.ಬಿಳಿಗಿರಿ ಶ್ರೇಣಿಯ ಬೆಟ್ಟಗಳು ಕಣ್ಣಿಗೆ ಕಂಡವು ಮೇಲೆತೆಳುವಾಗಿ ಬಿಳಿಯ ಮೋಡಗಳು ಆಗಸವನ್ನು ಅಲಂಕರಿಸಿದ್ದವು . ಹಾಗೆ ಸ್ವಲ್ಪ ಕಣ್ಣು ಹಾಯಿಸಿದೆ
ಹಸಿರ ಬೆಟ್ಟದ ಮೇಲೆ ಒಂದೇ ಒಂದು ಮುದ್ದಿನ ಮೋಡ ನಿಧಾನವಾಗಿ ಗಾಳಿಗೆ ವಿವಿಧ ಆಕಾರ ತಾಳುತ್ತಾ ಸಾಗಿತ್ತು .ಅಲ್ಲಿ ಶುರುವಾಯ್ತು ನೋಡಿ ಕಣ್ಣಿಗೆ ಹಬ್ಬ ಬೆಟ್ಟಗಳ ಸಾಲಿನ ಮೇಲೆ ಸೂರ್ಯನ ಬೆಳಕು ಹಾಗೂ ಮೋಡಗಳು
ಬಗೆಬಗೆಯ ಸುಂದರ ಚಿತ್ರಗಳನ್ನು ನನಗೆ ನೀಡಿ ಹಬ್ಬದಔತಣಬಡಿಸಿದ್ದವು  ವಾಹ್!!! ವಾಹ್ ಅಂತ ಕುಣಿಯುತ್ತ ಕ್ಯಾಮರ ಕ್ಲಿಕ್ಕಿಸುವಾಟ ನಡೆಸಿದ್ದೆ.
ಮೋಡಗಳ ಮಧ್ಯದಿಂದ ತೋರಿ ಬಂದ ಸೂರ್ಯನ ಬೆಳಕು ಬೆಟ್ಟಗಳ ಒಡಲೊಳಗೆ ಬಿದ್ದು ರಮ್ಯ ನೋಟ ನೀಡಿತ್ತು.ಮೋಡಗಳ ಹಾಗು ಸೂರ್ಯ ಕಿರಣಗಳ ಜುಗಲ್ಬಂದಿ ಬೆಟ್ಟಗಳ ಮೋಹಕ ಚೆಲುವನ್ನು ಹೆಚ್ಚಿಸಿ ಹೊಸ ಹೊಸ ನೋಟಗಳ ಸರಮಾಲೆ ನೀಡಿತ್ತು ಮನಸ್ಸುಸಂತಸದಿಂದ   ನಲಿದಿತ್ತು.ಜೀವನ ಪಾವನ ವಾಯಿತೆಂದುಕೊಂಡೆ
ಧ್ರುಷ್ಯಗಳನ್ನು ಕಾಮರದೊಳಗೆ  ತುಂಬಿಕೊಂಡು  ಗಿರಿದರ್ಶಿನಿ ಹೋಟೆಲ್ ನಲ್ಲಿ ರುಚಿಯಾದ  ಬಿಸಿ ಬಿಸಿ ಊಟ ಉಂಡು ಮನೆಯ ದಾರಿ ಹಿಡಿದೆವು. ನಮ್ಮ ಮುಗಿಲ ಲೋಕದ ಪಯಣ ಹರುಷ ನೀಡಿ ಮನಸ್ಸು ಹಗುರವಾಗಿ ನನಗೆ ಅರಿವಿಲ್ಲದೆ " ಬೆಳ್ಳಿ  ಮೋಡದ ಅಂಚಿನಿಂದ ಮೂಡಿ ಬಂದಾ ಆಶಾ ಕಿರಣ "ಅಂತಾ ಹಾಡಲು ಶುರು ಮಾಡಿದ್ದೆ.ನೀವು ಒಮ್ಮೆ ಹೋಗಿ ಮಗಿಲ ಭೇಟೆಗೆ !!ಅದರ ಮಜಾ ನೋಡಿ!!!

Sunday, June 6, 2010

ನಾತೋಲಾ ಪಾಸ್ ಗಡಿಯಲ್ಲಿ ಪ್ರೇತಾತ್ಮ ದೇಶ ಕಾಯುತ್ತಿದೆಯಂತೆ !!!ಹರ್ಭಜನ್ ಸಿಂಗ್ ಪ್ರೇತಾತ್ಮ ಕಥೆ!!



ಈ 
ಕಥೆ ಬಹಳ ದಿನಗಳಿಂದ ನನಗೆ ಪದೇ ಪದೆ ನೆನಪಿಗೆ ಬಂದು ಕಾಡುತ್ತಿತ್ತು !! ಈ ವಿಚಾರವನ್ನು ನಂಬಲು ಬಹಳಷ್ಟು ಮಾಹಿತಿ ಸಂಗ್ರಹಣೆಗೆ ತೊಡಗಿದೆ.ಆದರೂ ರೋಜಕವಾದ ಈ ಮಾಹಿತಿ ಬ್ಲಾಗಿನ ಗೆಳೆಯರೊಂದಿಗೆ ಹಂಚಿಕೊಳ್ಳುವ ಮನಸು ಮಾಡಿ ಪ್ರಕಟಿಸಿದ್ದೇನೆ.ಇದನ್ನು ನಂಬುವುದು ಬಿಡುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು!!.ಆದರೂ ನಂಬುವುದಕ್ಕೆ ಹಲವಾರು ಪುರಾವೆಗಳು ನಮ್ಮ ಸುತ್ತ ಗಿರಿಕಿ ಹೊಡೆಯುತ್ತ  ನಂಬುವಂತೆ ಮಾಡುತ್ತಿವೆ.ಹೌದು ನಾನು ನಿಮಗೆ ಒಂದು ನಂಬಲು ಅಸಾದ್ಯ ವಾದ ಆದರೂ ನಂಬಬೇಕಾದ ಒಂದು ಕಥೆ ಬರೆಯಲು ಹೊರಟ್ಟಿದ್ದೇನೆ.ಇದು ಆದದ್ದು ಹೀಗೆ  ಕೆಲವು ದಿನಗಳ ಹಿಂದೆ ಬಹಳ ಹಿಂದಿನ [ಜೂನ್ ೨೦೦೦]ಕಸ್ತೂರಿ ಮಾಸಿಕ  ಪತ್ರಿಕೆ ಕಣ್ಣಿಗೆ ಬಿತ್ತು.ಅದನ್ನು ಹಾಗೆ ತಿರುವಿಹಾಕಿದಾಗ ಒಂದು ಕಥೆ ಕಣ್ಣಿಗೆ ಬಿತ್ತು ಅದನ್ನು ಒದತೊದಗಿದಾಗ ಈ ಹರ್ಭಜನ್ ಸಿಂಗ್ ಪ್ರೇತಾತ್ಮ ನತೋಲಾ ಗಡಿಯಲ್ಲಿ ದೇಶವನ್ನು ಕಾಯುತ್ತಿರುವುದಾಗಿ ತಿಳಿದು ಬಂದು ಸುಮ್ಮನೆ ನಕ್ಕು ಬಿಟ್ಟೆ.!!!,ಅಂತರ್ಜಾಲ ಜಾಲಾಟ ಶುರುವಾಯಿತು ಅಲ್ಲಿಯೂ ಸಹ  ಇವನಬಗ್ಗೆ ವಿಚಿತ್ರ ಮಾಹಿತಿ ಲಬ್ಯವಾಗ ತೊಡಗಿತು!!,ಆದರೂ ನಂಬಲು ಸಾಧ್ಯ ವಾಗದೆ ನನ್ನ ಗೆಳೆಯ ಹಾಲಿ ಭಾರತಿಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಂದಕುಮಾರ್ ನಲ್ಲಿ ವಿಚಾರಿಸಿದೆ
,ಅವರೂ ಸಹ ಹೀಗೊಂದು ಘಟನೆ ಇದೆಯೆಂದು ತಿಳಿಸಿದರು.ಆಸಕ್ತಿ ಕೆರಳಿ ಹಲವರಲ್ಲಿ ವಿಚಾರಿಸಿದರೆ ಈ ಬಗ್ಗೆ ರಕ್ಷಣಾ ಇಲಾಖೆಯಲ್ಲಿ ದಾಖಲೆಗಳು  ಇವೆ ಅಂದ್ರು .ಹಾಗಾಗಿ ನಾನೂ ಸಹ ಈ ಲೇಖನ ಪ್ರಕಟಿಸುವ ಸಾಹಸ ಮಾಡಿದ್ದೇನೆ. ಬನ್ನಿ ಹರ್ಭಜನ್ ಸಿಂಗ್ ಕಥೆ ಓದಿ"".ಓವರ್ ಟು ಹರ್ಭಜನ್ ಸಿಂಗ್ ಆತ್ಮ ""  ಆತ್ಮೀಯ ಭಾರತೀಯರೇ ನಿಮಗೆ ನನ್ನ ನಮಸ್ಕಾರ ನಾನು ಹೇಳುವ ನನ್ನ ಕಥೆ ನಿಮ್ಮೆಲ್ಲರಿಗೆ ದೇಶದ ಬಗ್ಗೆ ಗೌರವ ಜಾಸ್ತಿ ಮಾಡಿದಲ್ಲಿ ನನ್ನ ಜೀವನ ಸಾರ್ತಕವಾದೀತು ಅದೇ ನೀವೇ ನನಗೆ ನೀಡುವ ಶುಭ ಕಾಮನೆಗಳು. ನಾನು ಪಂಜಾಬ್ ರಾಜ್ಯದ ಕಪೂರ್ತಲ ಜಿಲ್ಲೆಯ ಕೊಕ್ಕಾ ತಳವಂಡಿ??[ಬ್ರೊಂದ್ವಾಲ್ ]  ಗ್ರಾಮದಲ್ಲಿ ಜನಿಸಿ ನನ್ನ ಬಾಲ್ಯ ಕಳೆದೆ.ನನ್ನ ತಂದೆ ಸರ್ವಾರ್ ಸಿಂಗ್ ಒಬ್ಬ ಸಣ್ಣ ರೈತ  ತಾಯಿ ಅಮರ್ ಕೌರ್  ಗೃಹಿಣಿ ತಂದೆಗೆ ಸಹಾಯವಾಗಿದ್ದಳು.ನಮ್ಮ ತಂದೆ ತಾಯಿಗೆ ನಾನು ಹಾಗು ಸಹೋದರ ರತನ್ ಸಿಂಗ್ ಇಬ್ಬರು ಗಂಡುಮಕ್ಕಳು ,ಸಹೊದರ ಸ್ವಲ್ಪ ಓದಿ ಮನೆತನದ ಕಸುಬು ವ್ಯವಸಾಯ ಮುನುವರೆಸಿದ ನಾನು ಎಂಟನೆ ತರಗತಿಯ ವರೆಗೆ ಓದಿ ೧೯೬೬ ರಲ್ಲಿ ಭಾರತಿಯ ಸೇನೆಯಲ್ಲಿ ಸಿಪಾಯಿ ಆಗಿ ಪಂಜಾಬ್ ರೆಜಿಮೆಂಟಿನಲ್ಲಿ ಕರ್ತವ್ಯಕ್ಕೆ ಸೇರಿದೆ.ಹಾಗಾಗಿ "ನಮ್ಮ ಮನೆಯಲ್ಲಿ ಒಬ್ಬ ಜೈ ಜವಾನ್ ಆದ್ರೆ ಇನ್ನೊಬ್ಬ ಜೈ ಕಿಸಾನ್ ಆದ "ಭಾರತಿಯ ಸೇನೆಯಲ್ಲಿ ಕೆಲಸ ಸಿಕ್ಕ ಕೂಡಲೇ ನನಗೆ ಪಕ್ಕದ ಹಳ್ಳಿಯ ಸುಂದರಿಯೊಡನೆ ಮಧುವೆ ಆಯ್ತು.ನಂತರ ನನ್ನನ್ನು ಭಾರತಿಯ ಸೇನೆ
ಭಾರತದ ಈಶಾನ್ಯ ಭಾಗದ ಸಿಕ್ಕಿಂ ರಾಜ್ಯದ ಗ್ಯಾಂಗಟಕ್ ಬಳಿಯ ನತೋಲ ಪಾಸ್ ನಲ್ಲಿರುವ ಚೀನಾ ದೇಶದ ಗಡಿ ಕಾಯಲು ನಿಯೋಜನೆ ಮಾಡಿತು.ಈ ಪ್ರದೆಶವೋ ಸಮುದ್ರ ಮಟ್ಟದಿಂದ ಸುಮಾರು ೧೩೧೨೩ ಅಡಿ ಎತ್ತರವಿದ್ದು ಅತ್ಯಂತ ಅಪಾಯಕಾರಿ  ಹವಾಗುಣ ದಿಂದ   ಕೂಡಿದ ಪ್ರದೇಶವಾಗಿ  ಗಡಿ ಕಾಯುವ ಕೆಲಸ ಅಡಿಗಡಿಗೂ ಒಂದು ಸಾಹಸವಾಗಿತ್ತು.ಹಾಗಿದ್ದ ವೇಳೆ ಒಂದು ದಿನ ನನ್ನ ಸ್ನೇಹಿತ ಸಿಪಾಯಿಗಳೊಂದಿಗೆ ಹೆಸರಕತ್ತೆಯ ಮೇಲೆ ರಕ್ಷಣಾ ಸಾಮಗ್ರಿ ಹೊರಿಸಿಕೊಂಡು ಹಿಮಪರ್ವತದ ದಾರಿಯಲ್ಲಿ ತೆರಳಿದ್ದ ವೇಳೆ ನಾನು ಪ್ರಚಂಡ ರಭಸದಿಂದ ಬೀಸಿದ ಹಿಮಪಾತಕ್ಕೆ ನನ್ನ ರೈಫೆಲ್  ಸಮೇತ ಕಾಲು ಜಾರಿ ಬಿದ್ದು ಅಸುನೀಗಿದೆ.ನನ್ನ ಸಂಗಾತಿಗಳು ಹೇಗೋ ಬಚವಾಗಿಬಿಟ್ಟರು.ನನ್ನ ಶವಕ್ಕಾಗಿ ಎಷ್ಟೋ ಹುಡುಕಾಟ ನಡೆಸಿದ ಸೇನೆಯ ತುಕಡಿ ಪತ್ತೆಹಚ್ಚಲು ಸಾಧ್ಯವಾಗದೆ ಕೈಚೆಲ್ಲಿ ಸುಮ್ಮನಾಗಿಬಿಟ್ಟರು!!!  ಆದರೆ ನಾನು ಅನಾಥವಾಗಿ ಹಿಮದ ರಾಶಿಯ ನಡುವೆ ಸಿಕ್ಕಿ ಬಿದ್ದಿದ್ದೆ!! ಆಗ ತಕ್ಷಣ ನೆನಪಿಗೆ ಬಂದವನೇ ನನ್ನ ಸಹ ಸಿಪಾಯಿ ಪ್ರೀತಂ ಸಿಂಗ್ ?? ಹಾಗಾಗಿ ಅವನ ಕನಸಿನಲ್ಲಿ ಕಾಣಿಸಿಕೊಂಡು ಅವನಿಗೆ ನಾನು ಹಾಗು ನನ್ನ ರೈಫೆಲ್ ಬಿದ್ದಿರುವ ಜಾಗತೋರಿಸಿದೆ.ಅವನೂ ಸಹ ಹಿರಿಯ ಅಧಿಕಾರಿಗಳು ನನ್ನ ಶವ ಸಿಗದ ಬಗ್ಗೆ ಸಭೆನದೆಸಿದ್ದ ಜಾಗಕ್ಕೆ ತೆರಳಿ ವಿಚಾರ ತಿಳಿಸಿದ!!, ಮೊದಲು ನಂಬದ ನನ್ನ ಮೇಲಿನ ಅಧಿಕಾರಿಗಳು ಮನಸ್ಸು ಬದಲಾಯಿಸಿ ಮರುದಿನ ಹುಡುಕಾಟ ಶುರುಮಾಡಿದರು,ನಾನು ಪ್ರೀತಂ ಸಿಂಗ್ ನಿಗೆ ಕನಸಿನಲ್ಲಿ ತೋರಿದ ಜಾಗಕ್ಕೆ  ನಾಲ್ಕು ಸಿಪಾಯಿಗಳೊಂದಿಗೆ ಬಂದು ಹಿಮದ ಮಧ್ಯೆ ನನ್ನು ಹುಡುಕಲು ಪ್ರಾರಂಭಿಸಿದರು.ಮೊದಲು ಹಿಮ ಕಡಿಯುತ್ತಿದ್ದ ಗುದ್ದಲಿಗೆ  ನನ್ನ ಹೆಮ್ಮೆಯ ರೈಫೆಲ್ ತಗುಲಿ ಅದನ್ನು ಹೊರತೆಗೆಯಲಾಯಿತು ನಂತರ ಸ್ವಲ್ಪವೆದೂರದಲ್ಲಿ ಹಿಮದ ಕಡಿತದಿಂದ ವಿರೂಪವಾದ ನನ್ನ ಶವ ದೊರೆತಿತ್ತು!! ಪ್ರೀತಂ ಸಿಂಗ್ ಹೇಳುತ್ತಿದ್ದ ತಾನು ಕನಸಿನಲ್ಲೇ ನೋಡಿದ ರೀತಿಯಲ್ಲಿಯೇ ಶವ ಕಂಡಿದೆಂದು !! ಯೇನುಮಾಡಲಿ ನನ್ನ ಮಾತು ಯಾರಿಗೂ ಕೇಳದು ಎಲ್ಲವನ್ನು ನಾನುಮೂಕವಾಗಿ ನೋಡುತ್ತಾ  ದೇಶಸೇವೆ ಮಾಡಲು ಸಾಧ್ಯ ವಾಗದ ಬಗ್ಗೆ ನನ್ನಲ್ಲಿಯೇ ಕೊರಗಿದೆ.ನಂತರ ನನ್ನ ಕುಟುಂಬ ದವರನ್ನು
ನತೋಲಾ ಪಾಸ್ ಗೆ ಕರೆಸಿ ನನ್ನ ಅಂತ್ಯ ಸಂಸ್ಕಾರವನ್ನು ಸಕಲ ಮರ್ಯಾದೆಗಳೊಂದಿಗೆ ಮಾಡಲಾಯಿತು.ನನ್ನ ಬಂಧುಗಳು  ಶೋಕ  ಭರಿತರಾಗಿ  ನನ್ನ ಸ್ವಗ್ರಾಮಕ್ಕೆ ತೆರಳಿ ಉಳಿದ ಕಾರ್ಯ ಮಾಡಿದರೆಂದು ತಿಳಿಯಿತು. ಮುಂದಿನ ದಿನಗಳಲ್ಲಿ ನನ್ನ ಸಂಗಾತಿಗಳಾಗಿದ್ದ ಸಿಪಾಯಿಗಳೊಂದಿಗೆ ನಾನು ಕರ್ತವ್ಯ ಮುಂದುವರೆಸಿ ಭಾರತ ಮಾತೆಯ ಸೇವೆಯಲ್ಲಿ ತೊಡಗಿದೆ ಭಾರತ ಚೀನಾ ಗಡಿಯಲ್ಲಿ ನತೋಲ ಪಾಸ್ ನಲ್ಲಿಯೇ ನೆಲೆಸಲು ನಿರ್ಧರಿಸಿದೆ . ನಾನು ಸಹ ರಾತ್ರಿಯ ವೇಳೆ ಗಸ್ತು ತಿರುಗಿ ನಿದ್ದೆ ಮಾಡುತ್ತಿದ್ದ ನನ್ನ ಹಲವು ಸ್ನೇಹಿತರಿಗೆ ಕಪಾಳ ಮೋಕ್ಷ ಮಾಡಿ ಎಚ್ಚರಿಸಿ ಕರ್ತವ್ಯ ಪಾಠ ಮಾಡಿದ್ದೇನೆ  ನಂತರ ಅವರ ಕನಸಿನಲ್ಲಿ ಕಾಣಿಸಿಕೊಂಡು  ಅವರ ಜೊತೆ ಇರುವುದಾಗಿ ತಿಳಿಸಿದ್ದೇನೆ.ಇದರಿಂದ ನನ್ನ ಸ್ನೇಹಿತರೂ ನನ್ನ ಬಗ್ಗೆ ಹೆಮ್ಮೆಯಿಂದ ಜೊತೆಯಲ್ಲಿ ಇದ್ದು ನನ್ನ ಬಗ್ಗೆ ಭಯವಿಲ್ಲದೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ!!,ಭಾರತೀಯ ಸೇನೆಯ ಅಧಿಕಾರಿಗಳು ಸಹ ನನ್ನ ಇರುವಿಕೆ ಬಗ್ಗೆ ನಂಬಿಕೆ  ಇಂದ ನನಗೆ ಒಂದು ಸಮಾಧಿ ನಿರ್ಮಿಸಿದ್ದಾರೆ.ಮೊದ ಮೊದಲು
ಚೀನಿ ಸೈನಿಕರೂ ನನ್ನನ್ನುನಂಬುತ್ತಿರಲಿಲ್ಲ  ಕ್ರಮೇಣ ಅವರಿಗೂ ನನ್ನ ಇರುವಿಕೆ ಬಗ್ಗೆ ನಂಬಿಕೆ ಬಂದಿದೆ.ಆ ಕಥೆ ಕೇಳಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಜಾಗದ ಕೆಲವೇ ಮೀಟರುಗಳ ಹತ್ತಿರ ಚೀನಾ ದೇಶದ ಸೈನಿಕರ ತಾಣವಿದೆ
ಒಮ್ಮೆ ನಾನು ಒಂದು ಬಿಳಿ ಕುದುರೆ ಹತ್ತಿ ರಾತ್ರಿ ಗಡಿ ಪಕ್ಕದಲ್ಲಿ  ಹೋಗುತ್ತಿರುವುದನ್ನು ನೋಡಿ ನಮ್ಮ ದೇಶದ ಸೈನಿಕ ಅಧಿಕಾರಿಗಳಿಗೆ ಪತ್ರ ಬರೆದದರಂತೆ. ಸ್ವಾಮೀ ನಿಮ್ಮ ಒಬ್ಬ ಸೈನಿಕ ನಮ್ಮ ಅನುಮತಿಯಿಲ್ಲದೆ ಇಲ್ಲಿ ಬಿಳಿ ಕುದುರೆ ಮೇಲೆ ಕುಳಿತು ಗಸ್ತು ತಿರುಗುತ್ತಿದ್ದಾನೆ  ಅವನನ್ನು ಮತ್ತೊಮ್ಮೆ ಕಂಡರೆ ಶೂಟ್ ಮಾಡಿ ಸಾಯಿಸ್ತಿವಿ ಅಂತ ಹೇಳಿದರಂತೆ ಆಗ ನನ್ನ ಸೇನೆಯ ಅಧಿಕಾರಿಗಳು ಅವರನ್ನುನಂಬಿಸಲು  ಹರ ಸಾಹಸಮಾಡಿ ಒಪ್ಪಿಸಿದ್ದಾರೆ.ಈಗ ನೋಡಿ ಇಲ್ಲಿ ನಡೆಯುವ  ಭಾರತ ಚೀನಾ ಗಡಿಯ ಎರಡೂ ಕಡೆಯ ಅಧಿಕಾರಿಗಳ ಸಭೆಯಲ್ಲಿ ನನಗೂ ಸಹ ಒಂದು ಕುರ್ಚಿಹಾಕಿ ಗೌರವಿಸುತ್ತಾರೆ.ಇದು ಪ್ರತಿ ತಿಂಗಳಿಗೊಮ್ಮೆ ನಡೆಯುವುದಾಗಿ ನನ್ನ ಸ್ನೇಹಿತ ಹೇಳಿದ [ಗಡಿಯಲ್ಲಿನ ಚೀನಿ ಭಾರತೀಯ ಸೇನಾ ಅಧಿಕಾರಿಗಳ ಸಭೆಯಲ್ಲಿ ಇಂದಿಗೂ ಒಂದು ಕುರ್ಚಿ ಹಾಕಿ ಹರ್ಭಜನ್ ಸಿಂಗ್ ಆತ್ಮ ಅಲ್ಲಿ ಕುಳಿತಿದೆ ಎಂದು ಭಾವಿಸಿ ಸಭೆ ನಡೆಸುವುದಾಗಿ ತಿಳಿದು ಬಂತು]ಚೀನಿಯರೂ ಸಹ ನನ್ನನ್ನು ನಂಬಿದ್ದಾರೆ.ಹಾಲಿ ನಾನು ನಾತೋಲ ಪಾಸ್ ನಲ್ಲಿ ವಾಸವಾಗಿದ್ದೇನೆ
ಬನ್ನಿ ನನ್ನ ಮಲಗುವ ಕೊಟಡಿ ತೋರಿಸ್ತೀನಿ [ಮೇಲಿನ ಚಿತ್ರ  ನಾತೋಲಾ ಪಾಸ್ ನಲ್ಲಿರುವ ಹರ್ಭಜನ್ ಸಿಂಗ್ ನ ಅಧಿಕೃತ ಕೊಟಡಿ ]ನನಗೆ ಸೇನೆಯಿಂದ ಒಂದು ಮನೆ ಇದ್ದು ಅದರಲ್ಲಿ ಒಬ್ಬ ಸೈನಿಕನಿಗೆ ನೀಡಬಹುದಾದ ಎಲಾ ಸವಲತ್ತನ್ನು ನನಗೆ ನೀಡಲಾಗಿದೆ ,ಇದುವರೆವಿಗೂ ನನಗೆ ಸಂಬಳ,ಭತ್ಯೆ ನೀಡಲಾಗಿದೆ, ನನ್ನ ಕೆಲಸದಲ್ಲಿ ನನಗೆ ಭಡ್ತಿ ನೀಡಿ ನನ್ನನ್ನು ಸತ್ಕರಿಸಲಾಗಿದೆ.ಸೇನೆಯ ಅಧಿಕಾರಿಗೆ ಸಿಗುವ ಎಲ್ಲಾ ಸವಲತ್ತುಗಳು ನನಗೆ ನೀಡಲಾಗಿದೆ.[ಈ ಬಗ್ಗೆ ಸೇನೆಯಲ್ಲಿ ಅಧಿಕೃತ ದಾಖಲೆಗಳು ಇರುವುದು ನಿಜವಂತೆ ] ನಾನು ಸಹ ಪ್ರತಿದಿನ ಜೀಪಿನಲ್ಲಿ ನನ್ನ ಸಮವಸ್ತ್ರ ಧರಿಸಿ ಗಡಿಯ ಗುಂಟ ತಿರುಗಾಡಿ ಬರುತ್ತೇನೆ ನನ್ನ ಮನೆಯಲ್ಲಿ ಯಾವಾಗಲೂ ಒಂದು ಜ್ಯೋತಿ ನಂದದೆ ಉರಿಯುತ್ತಿದೆ.ನಾನು ಪ್ರತಿ ವರ್ಷದಲ್ಲಿ ಸೆಪ್ಟೆಂಬರ್ ಅಥವಾ ನವೆಂಬರ್ ನಲ್ಲಿ ನನ್ನ ಹುಟ್ಟೂರಿಗೆ ರಜದ ಮೇಲೆ ಬರುತ್ತಿದ್ದೆ ಆಗಲೂ ಸಹ ನನಗೆ ಎರಡು ತಿಂಗಳ ರಜೆ ಮಂಜೂರಿ ಮಾಡಿ ಗೌರವ ಪೂರ್ವಕವಾಗಿ ನನ್ನ ಎಲ್ಲಾ ಸಾಮಗ್ರಿಗಳ ಜೊತೆ ಆರ್ಡರ್ಲಿ ಯೊಬ್ಬರು ಜೀಪಿನಲ್ಲಿ ಇತ್ತು ಚಾಲಕನ ಪಕ್ಕದ ಸೀಟಿನಲ್ಲಿ ನನ್ನ ಭಾವ ಚಿತ್ರ ಇರಿಸಿ ಗಡಿ ಭಾಗದಿಂದ ಪಯಣ ಆರಂಭಿಸಿ ಅಸ್ಸಾಂ ನ ಸಿಲಿಗುರಿ ಸೇರಿ ,ಒಂದು ದಿನ ವಿಶ್ರಾಂತಿ ಪಡೆದು ಮರುದಿನ ರೈಲಿನಲ್ಲಿ ಪಯಣ ಆರಂಭಿಸಿ ಪಂಜಾಬ್ ರಾಜ್ಯದ  ಜಾಲಂದರ್ ನಲ್ಲಿರುವ ರೆಜಿಮೆಂಟಿನ  ಕಾರ್ಯಾಲಯದ ಸಮೀಪದ ಧಾರ್ಮಿಕ ಕ್ಷೇತ್ರದಲ್ಲಿ ಒಂದು ದಿನ ಉಳಿದು ಕೊಂಡು
ನಂತರ ಸೇನೆಯ ಜೀಪಿನಲ್ಲಿ ಆರ್ಡರ್ಲಿ ಜೊತೆ  ನನ್ನ ಸ್ವಗ್ರಾಮ ದ ನನ್ನ ಮನೆ ಮನೆ ತಲುಪುತ್ತಿದ್ದೆ.ಅಲ್ಲಿ ನನ್ನ ಮನೆಯಲ್ಲಿ ನನಗಾಗಿ ಒಂದು ಕೊಟಡಿ ಸಿದ್ದವಾಗಿರುತ್ತಿತ್ತು.[ಮೇಲಿನ ಚಿತ್ರದಲ್ಲಿ ಬಂಧುಗಳು  ನನಗಾಗಿ ಕಾಯುತ್ತಿರುವ ದೃಶ್ಯ ]ಅಲ್ಲಿಯೂ ಸಹ ನನಗೆ ನನ್ನ ಗ್ರಾಮದ ಜನರಿಂದ ಗೌರವ ಸಿಗುತ್ತಿತ್ತು.ನನ್ನ ತಾಯಿ ತಂದೆಯವರೊಂದಿಗೆ ಅವರ ಕನಸಿನಲ್ಲಿ ಕಾಣಿಸಿಕೊಂಡು ಮಾತಾಡುತ್ತಿದ್ದೆ.ನನ್ನ ತಾಯಿಗೆ ನನಗೆ ವಯಸ್ಸಾದ  ಕಾರಣಇಲ್ಲಿಗೆ ಬಂದಾಗ ಉಳಿದುಕೊಳ್ಳಲು ಒಂದು ಕೊಟಡಿ ಬೇಕೆಂದು ಹೇಳಿದ್ದೆ ಅದನ್ನೂ ಸಹ ನನಗಾಗಿ ಕಟ್ಟಲಾಗಿದೆ  ಈಗ ನಾನು ಬಂದಾಗ ಉಳಿಯುವುದು ಇಲ್ಲಿಯೇ.ಎರಡು ತಿಂಗಳ ರಜೆ ಮುಗಿಸಿ ಮತ್ತೆ ನಾನು ನನ್ನ ಕರ್ತವ್ಯಕ್ಕೆ
ನಾತೋಲ ಪಾಸ್ ಗೆ ತೆರಳಿ ಹಾಜರಾಗುತ್ತಿದ್ದೆ.ನನಗೆ ನಾತೋಲ ಪಾಸ್ ಅಂದ್ರೆ ಬಹಳ ಇಷ್ಟ ಅದಕ್ಕೆ ಅಲ್ಲಿಯೇ ಉಳಿದಿದ್ದೇನೆ ಇಂದಿಗೂ ನಾನು ಅಲ್ಲಿಯೇ ಇದ್ದೇನೆ.ಆದ್ರೆ ಇತ್ತೀಚಿಗೆ ನನ್ನ ಜೊತೆಯಲ್ಲಿದ್ದ ಸಿಪಾಯಿ ಒಬ್ಬ ನನಗೆ  ಭಾರತೀಯ ಸೇನೆ ನೀಡುತ್ತಿರುವ ಸವಲತ್ತುಗಳ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಿ ನನ್ನ ಸವಲತ್ತಿಗೆ ಕತ್ತರಿ ಹಾಕಿದ್ದಾನೆ ಆದರೂ ನಾನು ಇಲ್ಲೇ ಇದ್ದು ದೇಶ ಸೇವೆ ಮುಂದುವರೆಸಿಕೊಂಡು ಹೋಗುತ್ತೇನೆ .ನನ್ನ ಕಥೆ ಓದಿದ ನಿಮಗೆ ನನ್ನ ಶುಭ ಕಾಮನೆಗಳು.ನಾನು ಸತ್ತಮೇಲೂ ತಾಯಿ ಭಾರತಿಯ ಸೇವೆ ಮಾಡುತ್ತಿರುವ ಬಗ್ಗೆ ನನಗೆ ಹೆಮ್ಮೆ ಇದೆ ನೀವು ಸಹ ಭಾರತ ಮಾತೆಯ ನೆಚ್ಚಿನ ಮಕ್ಕಳಾಗಿ ಬಾಳಿರೆಂದು ಹಾರೈಸುತ್ತೇನೆ
ನಮಸ್ಕಾರ.ಮೇರಾ ಭಾರತ್ ಮಹಾನ್ .
ನೀವು ಒಮ್ಮೆ ಯಾದರೂ ನತೋಲಾ ಪಾಸ್ಗೆ  ಬಂದು ನಾನಿದ್ದ ಜಾಗವನ್ನು ನೋಡಿದರೆ ನನಗೆ ಖುಷಿಯಾಗುತ್ತದೆ.ನಿಮ್ಮ ಬರುವಿಕೆಯನ್ನು ನಾನು ಕಾಯುತ್ತೇನೆ