Wednesday, August 11, 2010

ಆಷಾಡ ಮಾಸದಲ್ಲಿ ....ಗಾಳಿಪಟದ ಗಮ್ಮತ್ತು !!!ಪಟ ಪಲ್ಟಿ ಹೊಡೆದಿತ್ತು !!!

ನಮ್ಮ ದೇಶದ ನೆಲದಲ್ಲಿ  ಸುಮಾರು ನೂರಾರು ವರ್ಷಗಳಿಂದ ಹಲವಾರು ಆಚರಣೆಗಳು ನಡೆದು ಬಂದಿವೆ. ನಾವೂ ಸಹ ಚಿಕ್ಕಮಕ್ಕಳು ಆಗಿದ್ದಾಗ ಮಾಸಗಳಿಗೆ ಒಂದೊಂದು ,ಆಟಗಳನ್ನು ಆಡುತ್ತಿದೆವು. ಹಳ್ಳಿಮಕ್ಕಳು  ಪಟ್ಟಣದ ಮಕ್ಕಳಿಗಿಂತ ಈ ಅನುಭವ ಸ್ವಲ್ಪ ಜಾಸ್ತಿ  ಹೊಂದಿರುತ್ತಾರೆ.ನಾವುಗಳು ಚಿಕ್ಕವರಾಗಿದ್ದಾಗ ಹಾಗೆ ಕಬಡ್ಡಿ, ಗಿಲ್ಲಿದಾಂಡು, ಟ್ರಿಕ್ಕಿ,ಗೋಲಿ ಆಟ,ಗಾಳಿಪಟ ಆಡಿಸುವುದು,ಹೀಗೆ ಹಲವಾರು  ಆಟಗಳು ಕಾಲಕ್ಕೆ ತಕ್ಕಂತೆ ಸರತಿಸಾಲಿನಲ್ಲಿ ಬಂದುಬಿಡುತ್ತಿದ್ದವು. ಆಷಾಡ ಮಾಸದಲ್ಲಿ ಬೀಸುವ  ಗಾಳಿಗೆ  ಸೂಕ್ತವಾಗಿ ಈ ಗಾಳಿಪಟ ಹಬ್ಬ ಬರುತ್ತದೆ.ನಾನೂ ಸಹ ಚಿಕ್ಕವನಾಗಿದ್ದಾಗ ಹಳ್ಳಿಯಲ್ಲಿ ದಿನಪತ್ರಿಕೆ,ಬಿದುರು ಕಡ್ಡಿ ಅಥವಾ  ತೆಂಗಿನ ಗರಿಯ ಕಡ್ಡಿ [ಮಟ್ಟಾಲೇ ಕಡ್ಡಿ],   ಹಸಿದಾರ ಅದನ್ನು ಗಟ್ಟಿ ಮಾಡಲು ಮೇಣ, ಪಟ ತಯಾರಿಕೆ ವೇಳೆ  ಅಂಟಿಸಲು ಅಣ್ಣ, ರಾಗಿ ಮುದ್ದೆ, ಕಳ್ಳಿ ಹಾಲು , ಅಥವಾ ಬೇವಿನ ಮರದಲ್ಲಿ ಸಿಕ್ಕುತ್ತಿದ್ದ ಗೋಂದು ಇವುಗಳನ್ನು ಬಳಸಿ ಪಟಮಾದುತ್ತಿದೆವು.ಪಟಕ್ಕೆ ಸೂತ್ರ ಹಾಕುವಾಗ ಇರಬೇಕಾದ ಅಂತರ, ಬಾಲಂಗೋಚಿ ಇರಬೇಕಾದ ಉದ್ದ ಇವುಗಳ ಬಗ್ಗೆ ನಮಗೆ ಯಾವ ಶಾಲೆಯಲ್ಲಿಯೂ ತರಭೇತಿ ನೀಡದಿದ್ದರೂ ಅದೇಕೋ  ಕಾಣೆ ಈ ಕಲೆ ನಮಗೆ ಸಿದ್ದಿಯಾಗಿತ್ತು.ಇತ್ತೀಚಿಗೆ ನನ್ನ ಗೆಳೆಯ ಅನಿಲ್ ಮನೆಗೆ ಹೋಗಿದ್ದೆ  ಅವನ ಮಗಳು ಅನನ್ಯ ಬಾಲೂ ಮಾಮ ಪಟಹಾರಿಸಬೇಕು ಬನ್ನೀ  ಅಂತ ಕರೆದಳು. ಇವಳ ನನ್ನ ಸಂಬಂದ  ತುಂಬಾ ವಿಚಿತ್ರ, ಇವಳು ಚಿಕ್ಕವಯಸ್ಸಿನಿಂದ  ಯಾಕೋ ಕಾಣೆ ನನ್ನನ್ನು ತುಂಬಾ ಹಚ್ಚಿಕೊಂಡಿದ್ದಾಳೆ !! ಕೆಲವೊಮ್ಮೆ ಇವಳ ಅಪ್ಪಾ ನನ್ನ ಸ್ನೇಹಿತನೋ ಅಥವಾ ಇವಳೇ ನನ್ನ ಸ್ನೇಹಿತೇಯೋ ಗೊತ್ತಾಗೊಲ್ಲ , ಇನ್ನು ಇವಳ ಅಮ್ಮ [ಪ್ರೀತಿಯಿಂದ ನಾನು ಕರೆಯುವುದು ಬಾಬಿ] ನನ್ನನ್ನು ತನ್ನ ಸಹೋದರನೆಂದು ಗೌರವಿಸುವ ಸಭ್ಯರು .ಅನನ್ಯ ಕರೆದ ತಕ್ಷಣ ಬಾರೆ ಹೋಗೋಣ ಪಟ ತರೋಕೆ ಅಂದೇ !! ಇಬ್ಬರೂ  ವಿದ್ಯಾರಣ್ಯ ಪುರಂ ನ ಅಂದಾನಿ ಸರ್ಕಲ್ಲಿನ  ಪಟದ ಅಂಗಡಿಗೆ ಬಂದೆವು

.ಪಟ ಮಾರುವ ಯಜಮಾನರು ವಿವಿದ ಭಗೆಯ ಪಟ ತೋರಿಸಿದರೂ ನೇರಳೆ ನೀಲಿ  ಬಣ್ಣದ  ಪಟವನ್ನು ಆಯ್ಕೆ ಮಾಡಿ ಇದನ್ನು ತಗೊಳ್ಳ ಅಂತಾ ನನ್ನ ಕಡೆನೋಡಿದ ಅನನ್ಯ ಳಿಗೆ ಸರಿ ತಗೋ ಅಂದೇ!!ಪಟ ಎಷ್ಟೂ ಯಜಮಾನ್ರೆ ಅಂದೇ ಬರಿ ಪಟ ಆದ್ರೆ ಹತ್ತು ರುಪಾಯಿ,ಸೂತ್ರಾ ಹಾಕೊಡೋಕೆ ಐದು ರುಪಾಯಿ, ಬಾಲಂಗೋಚಿ ಗೆ ಐದು ಅಂತಾ ಅಂದ್ರೂ!! ಸರಿ ಸ್ವಾಮೀ ಪಟಕ್ಕೆ ಏನೇನು ಹಾಕಬೇಕೋ ಅದನ್ನು ಹಾಕಿ
ಅಂತ  [ಹುಡುಗ ನಾಗಿದ್ದಾಗ ಪಟಕ್ಕೆ ಸೂತ್ರ ಹಾಕುತ್ತಿದವನಿಗೆ ಈಗ ಹಾಕೋಕೆ ಕೈಯ್ಯೇ ಬರಲಿಲ್ಲ] ಹೇಳಿದ್ದೆ ತಡ ಪಟಕ್ಕೆ ಶೃಂಗಾರ ಶುರುವಾಯ್ತು.ಸರಿ ಅನನ್ಯ  ಖುಷಿಯಿಂದ ಮನೆಗೆ ಬಂದು ಪಟ ಹಾರಿಸುವಸಿದ್ದತೆ ಯನ್ನು ತರಾತುರಿಯಿಂದ ಮಾಡಿದಳು.ಈ ಪಟ್ಟಣದಲ್ಲೇ ಹಾಗೆ ರೀ!!! ಪಾಪ, ಮಕ್ಕಳಿಗೆ ನೆಮ್ಮದಿಯಾಗಿ ಆಟದ ಬಯಲು ಸಿಕ್ಕೊಲ್ಲಾ !!! ಇಂಥಹ ಸಂಧರ್ಭದಲ್ಲಿ ಮನೆಯ ಮೇಲಿನ ಟೆರಸ್ ನಲ್ಲಿ ಪಟ ಹಾರಿಸಬೇಕು.ಹಾಗೆ ಶುರುವಾಯ್ತು ಟೆರಸ್ ನಲ್ಲಿ ಪಟ ಹಾರಿಸುವ ಆಟ ಪಟ ಹಾರಿಸಲು ಬೇಕಾದ ದಾರ ಹುಡುಕಿ ಪಟಕ್ಕೆ ಕಟ್ಟಿ ಹಾರಿಸಲು ಒದ್ದಾಟ ಶುರುವಾಯ್ತು. ಮೊದಲು ದಾರವನ್ನು ಪಟಕ್ಕೆ ಕಟ್ಟಿ ಬಿಗಿಯಾಗಿದೆಯೇ ಟೆಸ್ಟ್ ಮಾಡಿಕೊಂಡು ಹಾರಿಸಲು ಪಟ ಹಿಡಿದು ನಿಂತೆವು
  ಅರೆ ಗಾಳಿಯೇ ಇಲ್ಲಾ!! ಹಾಗೂ ಹೀಗೂ ಸ್ವಲ್ಪ ಸಮಯ ಕಾದ ನಮಗೆ ವಾಯು ದೇವನ ಕೃಪೆಯಿಂದ ಗಾಳಿ ಬೀಸಲು ಶುರುವಾಗಿ ಐಸ ಲಗಾ ಅಂತಾ ಪಟ ಹಾರಿಸಿದೆವು.ಆಹಾ ಪಟ ಹಾರಲು ಶುರುವಾಯ್ತು
  ಅಮ್ಮಾ ಮಗಳ ಮುಖದಲ್ಲಿ ಪಟಹಾರಿಸಿದ ಸಂತಸ  ಉಕ್ಕಿ ಹರಿಯಿತು.ನನ್ನ ಗೆಳೆಯ ನನ್ನ ಹಿಂದೆ ನಿಂತು ತಾನೂ ಈ ಕ್ಷಣ ಸಂತಸ ಗೊಂಡಿದ್ದ . ಬಾಲೂ ಎಷ್ಟು ದಿನಾ ಆಗಿತ್ಲಾ!!! ನಾವು ಇಷ್ಟು ಪುರುಸೊತ್ತಾಗಿ ಅಂತಾಹೇಳಿ ಟೀ ಕುಡಿಯಲೇ ಅಂದಾ.ಪಟ  ಗಗನದ ಕಡೆಗೆಸರಸರನೆ ಗಾಳಿಯಬಿರುಸಿಗೆ ನುಗ್ಗಿತ್ತು.ಗಾಳಿ ಬೀಸುತ್ತ ಇದ್ದ ಹೊತ್ತೂ ಚೆನ್ನಾಗಿ ಹಾರಿದ ಪಟ ಮತ್ತೆಗಾಳಿಯ ಬೀಸುವಿಕೆ ಕಡಿಮೆಯಾಗಿ  ಕೆಳಗಿಳಿಯಲು ಪ್ರಾರಂಭಿಸಿತು. ಬಾಲೂ ಮಾಮ . ಬಾಲೂ ಮಾಮ ಪಟ ಕೆಲ್ಗಡೆಬಂತು  ಹೆಲ್ಪ್ ಮಾಡಿ ಪ್ಲೀಸ್!!! ಅಂದ್ಲೂ ಅನನ್ಯ . ಇರೆ....... ಸ್ವಲ್ಪಾ!!!! ಅಂತ ಹೇಳಿ ಅವಳ ಅಣ್ಣ ಅಜಂತ್ ನ ಕರೆದು ಇವಳನ್ನು ಈ ರೂಮಿನ ಚಾವಣಿಯ ಮೇಲೆ ಹತ್ತಿಸೋ ಅಲ್ಲೇ ಸರಿ ಅಂತ ಹೇಳಿ ರೂಮಿನ ಚಾವಣಿಯ ಮೇಲಕ್ಕೆ ಅವಳನ್ನು ಹತ್ತಿಸಿ, ಅಜಂತ್ ನನ್ನು ಅವಳ ಜೊತೆ ಇರಲು ಹೇಳಿ ಅವರು ಪಟ ಹಾರಿಸೋದನ್ನು  ನಾವು ನೋಡ್ತಾ ಇದ್ದೆವು ಮತ್ತೆ ಪಟ ಹಾರಿತು.
.ಲೋ ಬಾಲೂ ಮೊಬೈಲಿನಿಂದ ಫೋಟೋ ತೆಗೀತಿದ್ದಿಯ

ಚೆನ್ನಾಗಿ ಬರೋಲ್ಲಾ ಗುರು ನಿನ್ನ ಕ್ಯಾಮರ ತರಬೇಕಾಗಿತ್ತು ಅಂದ ಅನಿಲ್.ತಾಳಲೇ ಪ್ರಯತ್ನ ಮಾಡೋಣ ಅಂತಾ ನನ್ನ ಮೊಬಿಲಿನಲ್ಲೇ ಫೋಟೋ ತೆಗೆಯಲು ಮುಂದುವರೆಸಿದೆ.[ ಹೌದು ಈ ಲೇಖನದ ಎಲ್ಲಾ ಫೋಟೋಗಳು ನನ್ನ ಮೊಬೈಲಿನಿಂದ ತೆಗೆದದ್ದು ] ಪಟಾ ಹಾರುತ್ತಿದ್ದರೆ ಏನೋ ಖುಷಿ  !! ನಮ್ಮ ಬಾಲ್ಯ ದಿನಗಳನೆನಪು ಕಾಡಿತ್ತು.ಅರೆ ಇದೇನಿದು ಮತ್ತೊಂದು ಪಟ ಬಂತು ಅಂತಾ ನೋಡಿದೆವು ಹೌದು ಸ್ವಲ್ಪ ದೂರದಿಂದ ಇನ್ನೊಬ್ಬ ಹುಡುಗ
ತನ್ನ ಮನೆಯ ಟೆರೆಸ್ ನಿಂದ ಪಟ ಹಾರಿಸಲು ಶುರುಮಾಡಿದ್ದ.ಹಳದಿ ಬಣ್ಣ ದ ಪಟ ಒಂದು ಆಗಸದಲ್ಲಿ ಹಾರುತ್ತಿತ್ತು. ಗಾಳಿಗೆ ಓಲಾಡುತ್ತಾ ನಮ್ಮ ಪಟದ ಹತ್ತಿರ ಬಂದು
ತಗುಲಿ ಹಾಕಿಕೊಂಡಿತು.ಅರೆ ಇದೇನೂ ಅಂತಾ ಅದನ್ನು ಚಾಕಚಕ್ಯತೆ ಇಂದ ಪಟದ ದಾರ ವನ್ನು ನಿಧಾನವಾಗಿ ಎಳೆದು  ಪಟ ದಿಂದ ಬಿಡಿಸಿಕೊಂಡಳು.ಅವಳು ದಾರ ಎಳೆಯುತ್ತಿದ್ದರೆ!! ಪಟದ ಬದಲಾಗಿ ಮೋಡಗಳನ್ನು ದಾರದಿಂದ ಎಳೆಯುತ್ತಿರುವುದಾಗಿ ಕಂಡುಬರುತ್ತಿತ್ತು.ಹಾಗೂ ಹೀಗೂ ಪಟದ ಹಾರಾಟದಲ್ಲಿ ಸಮಯ ಕಳೆದದ್ದೇ ಗೊತ್ತಾಗ್ಲಿಲ್ಲ ಅಷ್ಟರಲ್ಲಿಮತ್ತೊಂದು ಪತದಿಂದ ಬಿಡಿಸಿಕೊಂಡ ಇವಳ ಪಟ ಆಗಸದಲ್ಲಿ ಹಾರುತ್ತಿತ್ತು.ಮತ್ತೊಂದು ಪಟದ ದಾರ ತುಂಡಾಗಿ ತೂರಿಕೊಂಡು ಹೋಗಿತ್ತು.ಅಷ್ಟರಲ್ಲಿಪಟವನ್ನು ಹಾರಿಸುವಾಗ
ಎಳೆದ ದಾರ ಗೋಜಲಾಗಿ ಬಿಡಿಸಿಕೊಳ್ಳುವ ಆಟ ಶುರುವಾಯ್ತು.ಟೆರೆಸ್ ಮೇಲಿಂದ ಅವಳ ಹಾವ ಭಾವಗಳು ನಾಟ್ಯ ವಾದುತ್ತಿರುವಂತೆ ಕಾಣಿಸಿತು.  ಹಾಗು ಹೀಗೂ ದಾರ ಬಿಡಿಸಿಕೊಂಡು ಪಟ ಇಳಿಸಿ ಪಟ ಹಾರಿಸಿದ ಖುಷಿಯಲ್ಲಿ ಕುಣಿದಾಡಿದಳು. ಅವಳ ಖುಷಿಯಲ್ಲಿ ಪಾಲ್ಗೊಂಡ ನನಗೆ ಸಾರ್ಥಕ  ರಜೆಯಾಗಿ ಪರಿಣಮಿಸಿತ್ತು.ಅನಿಲ್ ಮನೆಯಲ್ಲಿ ತಿಂಡಿ ತಿಂದು ಮನೆಗೆ  ಹೋರಾಟ ನನಗೆ ಗಾ....................;ಳಿಪಟ ಅಂಥಾ ಹಾಡು ಪದೇ ಪದೇ ನೆನಪಾಗಿದ್ದು ಸುಳ್ಳಲ್ಲಾ. ಅಂದಹಾಗೆ ನೀವು ಪಟ ಹಾರಿಸಿದೀರಾ??? ಈ ಲೇಖನದಿಂದ ನಿಮಗೆ ನಿಮ್ಮ ಬಾಲ್ಯ ನೆನಪಾದರೆ  ನನಗೆ ತಿಳಿಸಿ.ಓ.ಕೆ

18 comments:

ಸೀತಾರಾಮ. ಕೆ. / SITARAM.K said...

ananyala pata haarisuva pariyannu ananyavaagi varnisiddiri jotege ananya chayachitragalannu kottiddiri. balyadalli naave pata tayaru maadi gattidara balasi akka- pakkada mitrara patakke tagulisi avara patagalannu haridu aakaashadalli swatantravaagi haaraadisi adada mele dharege atantravagi bilo haage maaduttidda mojina kshanagalu nenapaayitu.
dhanyavadagalu.

Sunny said...

Good one Balu. feels like I am home. looking at the pics and the kannada matu :) Thank you. I do have few suggestions for your Blog. will tell ya over the phone or email ya.

Take care

Sunny alla... Sunil Kumar :)

ಸಿಮೆಂಟು ಮರಳಿನ ಮಧ್ಯೆ said...

ಬಾಲು...

ಸೊಗಸಾದ ಫೋಟೊಗಳು...
ಅದಕ್ಕೆ ತಕ್ಕ ವಿವರಣೆಗಳು..

ಮತ್ತೆ ನಮ್ಮ ಬಾಲ್ಯದ ನೆನಪುಗಳನ್ನು ಹಸಿರಾಗಿಸಿದ್ದೀರಿ...

ಅಭಿನಂದನೆಗಳು....

ಬೆಳ್ಳಾಲ ಗೋಪಿನಾಥ ರಾವ್ said...

ಬಾಲೂ ಅವರೇ
ಲೇಖನ ಚೆನ್ನಾಗಿದೆ
ಖುಷಿ ಕೊಟ್ಟಿತು

nimmolagobba said...

ಕೆ.ಸೀತಾರಾಂ ಸರ್ ನಿಮ್ಮ ಅಭಿಪ್ರಾಯ ತಲುಪಿದೆ. ಧನ್ಯವಾದಗಳು.

nimmolagobba said...

ಗೆಳೆಯ ಸುನಿಲ್ ನೀನು ಮನೆಯಿಂದ ದೂರದಲ್ಲಿದ್ದರೂ ಬ್ಲಾಗ್ ನೋಡಿ ಖುಷಿ ಪಟ್ಟಿದ್ದು ನನಗೆ ಸಂತೋಷವಾಗಿದೆ.ಆಗಾಗ ಬರುತ್ತಿರು.ಥ್ಯಾಂಕ್ಸ್.

nimmolagobba said...

ಪ್ರಕಾಶ್ ಹೆಗ್ಡೆ ಸರ್ ನಿಮ್ಮ ಬಾಲ್ಯ ನೆನಪಾಗಿದ್ದಕ್ಕೆ ಸಂತೋಷ ವಾಗಿದೆ.ನಿಮ್ಮ ಅನಿಸಿಕೆಗೆ ಧನ್ಯವಾದಗಳು.

nimmolagobba said...

ಬೆಳ್ಳಾಲ ಗೋಪಿನಾಥರಾವ್ ನನ್ನ ಬ್ಲಾಗಿಗೆ ನಿಮಗೆ ಸ್ವಾಗತ . ನಿಮ್ಮ ಅನಿಸಿಕೆ ತಲುಪಿದೆ. ನಿಮಗೆ ಖುಷಿಯಾದರೆ ನನ್ನ ಲೇಖನ ಸಾರ್ಥಕ ವಾಗುತ್ತದೆ.ನಿಮಗೆ ಥ್ಯಾಂಕ್ಸ್.

ಸಾಗರದಾಚೆಯ ಇಂಚರ said...

sundara lekhana sir

ishta aayitu

nimmolagobba said...

ಗುರುಮೂರ್ತಿ ಸರ್ ನಿಮ್ಮ ಅನಿಸಿಕೆ ತಲುಪಿದೆ. ಥ್ಯಾಂಕ್ಸ್.

ಅನಂತರಾಜ್ said...

ಚೆ೦ದದ ಬ್ಲಾಗು, ಬಾಲು ಅವರೆ. ಗಾಳಿಪಠದ ಗಮ್ಮತ್ತಿನ ನಿರೂಪಣೆ ಮತ್ತು ಚಿತ್ರಗಳು ಸೊಗಸಾಗಿವೆ. ಧನ್ಯವಾದಗಳು.


ಅನ೦ತ್

nimmolagobba said...

ಅನಂತ್ ರಾಜ್ ಸರ್ ನನ್ನ ಬ್ಲಾಗಿನಲ್ಲಿ ವಿಹಾರ ಮಾಡಿ ಚಂದದ ಬ್ಲಾಗ್ ಎಂದು ತಿಳಿಸಿದ್ದೀರ , ಹಾಗು ಗಾಳಿಪಟದ ಲೇಖನ ನಿಮಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.ನನ್ನ ಪುಟಕ್ಕೆ ಆಗಾಗ ಬರುತ್ತಿರಿ.

Sriii :-) said...

sir tumbaa chennagide, baalyada Gaalipata haarisida nenapugalu gaaliyalli teli banda haagaytu....Ananya paapuge nanna danyavaada tilisi...

Deep said...

Lekhana mattu Photos channagive balu

Happy Independence day

nimmolagobba said...

ಶ್ರೀ ಪ್ರಸಾದ್ ಸರ್ ಖುಷಿಯಿಂದ ನೀವು ಬರೆದಿರುವ ಅನಿಸಿಕೆಗೆ ಥ್ಯಾಂಕ್ಸ್ .ನನ್ನ ಶೆಹಿತನ ಮಗಳು ಅನನ್ಯ ಳಿಗೆ
ನಿಮ್ಮ ಹಾರೈಕೆ ತಿಳಿಸಿದ್ದೇನೆ.

nimmolagobba said...

ದೀಪಕ್ ವಸ್ತಾರೆ ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್. ಆಗಾಗ ನನ್ನ ಬ್ಲಾಗಿಗೆ ಬರ್ತಾಯಿರಿ.

Swarna said...

ಶುಭಾಷಯಗಳು ಅನನ್ಯ :)

bhagya bhat said...

congrats putti :) ಸಾಧನೆಯ ಹಾದಿ ಹೀಗೇ ಮುಂದುವರೀಲಿ ...
ಯಶ ನಿನ್ನದಿರಲಿ :)